ಚಾಮರಾಜನಗರ: ನಗರಸಭೆ ಸದಸ್ಯನಿಗೆ ಒಂದು ವರ್ಷ ಜೈಲು ಶಿಕ್ಷೆ
Team Udayavani, Mar 25, 2022, 10:41 PM IST
ಚಾಮರಾಜನಗರ: ನಗರಸಭೆ ಪೌರಾಯುಕ್ತರಿಗೆ ಕೊಲೆ ಬೆದರಿಕೆ ಹಾಕಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರಸಭೆ ಸದಸ್ಯರೊಬ್ಬರಿಗೆ ನಗರದ ಪ್ರಧಾನ ಮತ್ತು ಜೆಎಂಎಫ್ ಸಿ ನ್ಯಾಯಾಲಯವು ಒಂದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.
ಚಾಮರಾಜನಗೆ ನಗರಸಭೆ 15 ನೇ ವಾರ್ಡಿನ ಸದಸ್ಯ ರಾಮಸಮುದ್ರದ ಆರ್.ಪಿ.ನಂಜುಂಡಸ್ವಾಮಿ ಶಿಕ್ಷೆಗೆ ಒಳಗಾದ ಅಪರಾಧಿ.
2010 ರ ನವೆಂಬರ್ 10 ರಂದು ನಗರದ ಹೊರವಲಯದಲ್ಲಿರುವ ಎಡ ಬೆಟ್ಟದ ಸರ್ಕಾರಿ ಜಾಗದಲ್ಲಿ ನಗರಸಭೆ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಆ ವೇಳೆ ಅಂದಿನ ನಗರಸಭೆ ಪೌರಾಯುಕ್ತ ರಾಗಿದ್ದ ಎಸ್ .ಪ್ರಕಾಶ್ ಅವರ ಜತೆ ಆಗ 27ನೇ ವಾರ್ಡ್ ಬಿಎಸ್ ಪಿ ಸದಸ್ಯರಾಗಿದ್ದ ಆರ್. ಪಿ. ನಂಜುಂಡಸ್ವಾಮಿ ಹಳೆ ಕಾಮಗಾರಿಗಳ ವಿಚಾರವಾಗಿ ತಗಾದೆ ತೆಗೆದು ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು . ಇದಲ್ಲದೆ ಆಯುಕ್ತ ಎಸ್ .ಪ್ರಕಾಶ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದರು.
ಇದನ್ನೂ ಓದಿ:ಏಳು ವರ್ಷದ ಬಾಲಕನಿಗೆ ಚಿತ್ರಹಿಂಸೆ: ಓರ್ವನ ಬಂಧನ: ಗೃಹ ಸಚಿವ
ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು .ಈ ಕುರಿತು ಗ್ರಾಮಾಂತರ ಠಾಣೆ ಎಸ್ ಐ ಬಿ.ಜಿ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ವಾದ ವಿವಾದ ನಡೆದು ನಂಜುಂಡಸ್ವಾಮಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮೊಹಮದ್ ರೋಷನ್ ಷಾ ಅವರು , ಅಪರಾಧಿಗೆ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ಹಾಗೂ 3 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ ಒಂದು ತಿಂಗಳ ಸಾದಾ ಕಾರಾಗೃಹ ವಾಸ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದ್ದಾರೆ .
ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಎ.ಸಿ. ಮಹೇಶ್ ಅವರು ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಬೋನಿಗೆ ಬಿದ್ದ 3-4 ವರ್ಷದ ಗಂಡು ಚಿರತೆ; ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Eshwar Khandre: ಅರಣ್ಯದೊಳಗೆ ಏಕಬಳಕೆ ಪ್ಲಾಸ್ಟಿಕ್ ನಿಷೇಧ
Gundlupete: ಬಂಡೀಪುರದಲ್ಲಿ ವಾಹನಗಳ ಅಡ್ಡಗಟ್ಟಿದ ಕಾಡಾನೆ: ಆತಂಕ
Gundlupete: 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಈಶ್ವರ್ ಖಂಡ್ರೆ
Gundlupete: ಚಿರತೆ ಸೆರೆಗಾಗಿ ಇರಿಸಿದ್ದ ಬೋನಿನಲ್ಲಿ ಸಿಲುಕಿದ ವ್ಯಕ್ತಿ!
MUST WATCH
ಹೊಸ ಸೇರ್ಪಡೆ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
ಅಖಿಲ ಭಾರತ ಅಂತರ್ ವಿ.ವಿ.ವೇಟ್‌ಲಿಫ್ಟಿಂಗ್:ಮಂಗಳೂರು ವಿವಿ ರನ್ನರ್ ಅಪ್
Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.