ಕೇರಳದಿಂದ ಬಂದರೆ ನೆಗೆಟಿವ್ ವರದಿ ಕಡ್ಡಾಯ: ಡೀಸಿ
Team Udayavani, Mar 26, 2021, 2:30 PM IST
ಚಾಮರಾಜನಗರ: ಕೇರಳ ರಾಜ್ಯದಿಂದ ಜಿಲ್ಲೆಗೆ ಬರುವ ಸಾರ್ವಜನಿಕರು 72 ಗಂಟೆ ಒಳಗೆ ಮಾಡಿಸಿದ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಜಿಲ್ಲೆಯ ಗಡಿ ಪ್ರವೇಶಿಸಲು ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಸೂಚಿಸಿದರು.
ಪ್ರಮಾಣ ಪತ್ರ ಪರಿಶೀಲನೆ: ಕೇರಳ ರಾಜ್ಯದಿಂದ ವಿಮಾನ, ಬಸ್,ರೈಲು ಹಾಗೂ ವೈಯಕ್ತಿಕ ಸಾರಿಗೆಮೂಲಕ ಬರುವ ಸಾರ್ವಜನಿಕರಿಗೆ 72 ಗಂಟೆ ಒಳಗೆಮಾಡಿಸಿದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಪ್ರಮಾಣ ಪತ್ರ ಕಡ್ಡಾಯ ಮಾಡಲಾಗಿದೆ. ನೆಗೆಟಿವ್ ಪರೀಕ್ಷಾ ಪ್ರಮಾಣ ಪತ್ರ ಪರಿಶೀಲಿಸಿದ ನಂತರ ಜಿಲ್ಲೆಯ ಗಡಿ ಪ್ರವೇಶಿಸಲು ಅನುಮತಿನೀಡಲಾಗು ತ್ತದೆ. ಸಂವಿಧಾನಿಕ ಕಾರ್ಯಕಾರಿಗಳು, ಆರೋಗ್ಯ ಸಿಬ್ಬಂದಿ, ಎರಡು ವರ್ಷಕ್ಕಿಂತ ಕಡಿಮೆವಯಸ್ಸಿನ ಮಕ್ಕಳು, ತುರ್ತು (ಕುಟುಂಬದಲ್ಲಿ ಮರಣಸಂಭವಿಸಿದ ಪಕ್ಷದಲ್ಲಿ ವೈದ್ಯಕೀಯ ಚಿಕಿತ್ಸೆ ಇತ್ಯಾದಿ)ಸಂದರ್ಭಗಳಲ್ಲಿ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹೊಂದುವುದರಿಂದ ವಿನಾಯ್ತಿ ನೀಡಲಾಗಿದೆ. ಆದರೆ,ಗಂಟಲು ದ್ರವ ಮಾದರಿ ಸಂಗ್ರಹಿಸಿ ಹೆಸರು, ವಿಳಾಸ,ದೂರವಾಣಿ ಸಂಖ್ಯೆ ಪೂರ್ಣ ವಿವರಗಳನ್ನು ಗುರುತಿನ ಚೀಟಿ ಆಧಾರದ ಅನ್ವಯ ಪಡೆಯಬೇಕೆಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಕೋವಿಡ್ 19 ಷರತ್ತು ಉಲ್ಲಂ ಸುವವರ ವಿರುದ್ಧ ಶಿಸ್ತು, ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮದುವೆ, ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ :
ಚಾಮರಾಜನಗರ: ಕೋವಿಡ್-19 2ನೇ ಅಲೆಯ ಅಪಾಯ ನಿಯಂತ್ರಿಸಲು ಹೆಚ್ಚಿನ ಮುಂಜಾಗ್ರತೆ ವಹಿಸಲಾಗುತ್ತಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಮದುವೆ, ಸಭೆ ಸಮಾರಂಭ, ದೇವತಾ ಕಾರ್ಯಕ್ರಮ ನಡೆಸಲು ಸಂಬಂಧ ಪಟ್ಟ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ತಹಶೀಲ್ದಾರ್, ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯುವಂತೆ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ ತಿಳಿಸಿದ್ದಾರೆ.
ಸಮಾರಂಭ ಇತರೆ ಆಚರಣೆಗಳ ವೇಳೆ ಸಾರ್ವಜನಿಕರು ಗುಂಪು ಸೇರುವ ಕಾರಣ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ನಿರ್ದಿಷ್ಟ ಸಂಖ್ಯೆ ಮೀರದಂತೆ ಸಾರ್ವಜನಿಕರಿಗೆ ಭಾಗವಹಿಸಲುಅವಕಾಶನೀಡಲು ಸರ್ಕಾರ ಸುತ್ತೋಲೆ ಹೊರಡಿಸಿದೆ. ಹೀಗಾಗಿ ಮದುವೆ, ಸಭೆ, ಸಮಾರಂಭ,ದೇವತಾ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕೆಂದು ತಿಳಿಸಲಾಗಿದೆ. ಸದರಿ ಕಾರ್ಯ ಹಾಗೂ ಕಾಲಕಾಲಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಹೊರಡಿಸುವ ಆದೇಶ,ಸುತ್ತೋಲೆಗಳಂತೆ ಅನುಮತಿ ನೀಡಲು ಸೂಚಿಸಲಾಗಿದೆ. ಕೋವಿಡ್ 19 ಷರತ್ತು ಉಲ್ಲಂಘಿಸುವವರ ವಿರುದ್ಧ ಶಿಸ್ತು, ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ತಿಳಿಸಿದ್ದಾರೆ.
ಅಂತ್ಯಕ್ರಿಯೆಯಲಿ 50 ಮಂದಿಗೆ ಅವಕಾಶ :
ಸಮಾರಂಭಗಳ, ಆಚರಣೆ ಕಾರ್ಯಕ್ರಮಗಳ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ವ್ಯಕ್ತಿ ನಡುವೆ 3.25 ಸ್ಕೈರ್ ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ತೆರೆದ ಪ್ರದೇಶಗಳಲ್ಲಿ ಮದುವೆ ಮಾಡುವ ವೇಳೆ 500 ಜನ ಮೀರದಂತೆ ಇರಬೇಕಿದೆ. ಸಭಾಂಗಣ, ಹಾಲ್, ಇತ್ಯಾದಿಮುಚ್ಚಿದ ಪ್ರದೇಶಗಳಲ್ಲಿ ಮದುವೆ ಮಾಡುವ ಸಂದರ್ಭದಲ್ಲಿ 200 ಜನಮೀರುವಂತಿಲ್ಲ. ಜನ್ಮದಿನ ಹಾಗೂ ಇತರೆ ಆಚರಣೆಗಳ ಸಂದರ್ಭದಲ್ಲಿ ತೆರೆದ ಪ್ರದೇಶವಾಗಿದ್ದಲ್ಲಿ 100 ಜನ ಮೀರುವಂತಿಲ್ಲ. ಸಭಾಂಗಣ, ಹಾಲ್ ಇತ್ಯಾದಿ ಮುಚ್ಚಿದ ಪ್ರದೇಶಗಳಾಗಿದ್ದಲ್ಲಿ 50 ಜನ ಮೀರುವಂತಿಲ್ಲ. ನಿಧನ, ಶವಸಂಸ್ಕಾರದ ವೇಳೆ ತೆರೆದ ಪ್ರದೇಶವಾಗಿದ್ದಲ್ಲಿ 100 ಜನ ಮೀರದಂತೆಭಾಗವಹಿಸಬೇಕಿದೆ. ಸಭಾಂಗಣ, ಹಾಲ್‌ಗಳು ಇತ್ಯಾದಿ ಮುಚ್ಚಿದಪ್ರದೇಶಗಳಾಗಿದ್ದಲ್ಲಿ 50 ಜನ ಮೀರುವಂತಿಲ್ಲ. ಅಂತ್ಯಕ್ರಿಯೆಯಲ್ಲಿ 50 ಜನಮೀರದಂತೆ ಭಾಗವಹಿಸಬೇಕಿದೆ. ಇತರೆ ಸಮಾರಂಭಗಳಲ್ಲಿ ಹಾಲ್ ನವಿಸ್ತೀರ್ಣಕ್ಕೆ ಅನುಗುಣವಾಗಿ 100 ಜನ ಮೀರುವಂತಿಲ್ಲ. ತೆರೆದಪ್ರದೇಶಗಳಲ್ಲಿ ಆಯೋಜಿಸಲಾಗುವ ಧಾರ್ಮಿಕ, ರಾಜಕೀಯ ಆಚರಣೆ,ಸಮಾರಂಭಗಳಲ್ಲಿ 500 ಜನ ಮೀರದಂತೆ ಭಾಗವಹಿಸಲು ಮಾತ್ರ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ರವಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.