ವೀರಪ್ಪನ್‌ ಕಾರ್ಯಾಚರಣೆ ಕಥೆ ಹೇಳುವ ಶ್ರೀನಿವಾಸ್‌ ಜೀಪ್‌


Team Udayavani, May 7, 2022, 8:25 PM IST

chamarajanagara news

ಚಾಮರಾಜನಗರ: ಡಿಸಿಎಫ್ ಪಿ. ಶ್ರೀನಿವಾಸ್‌ಚಾಮರಾಜನಗರದ ಜನತೆಗೆ ಚಿರಪರಿಚಿತ ಹೆಸರು.ನರಹಂತಕ ವೀರಪ್ಪನ್‌ನನ್ನು ವಶಕ್ಕೆ ಪಡೆದು ವಿಚಾರಣೆನಡೆಸಿದ ಏಕೈಕ ಅಧಿಕಾರಿ ಅವರು. ಮೊದಲಿಗೆಚಾಮರಾಜನಗರದಲ್ಲಿ ಉಪಅರಣ್ಯ ಸಂರಕ್ಷಣಾಧಿಕಾರಿ(ಡಿಸಿಎಫ್) ಆಗಿದ್ದ ಪಿ.ಶ್ರೀನಿವಾಸ್‌ ನಂತರ ವೀರಪ್ಪನ್‌ವಿರುದ್ಧದ (ಎಸ್‌ಟಿಎಫ್)ಕಾರ್ಯ ಪಡೆಯಲ್ಲಿ ಕರ್ತವ್ಯನಿರ್ವಹಿಸಿ, ಅದೇ ವೀರಪ್ಪನ್‌ನಿಂದ ಭೀಕರವಾಗಿ ಹತ್ಯೆಗೀಡಾದರು.

ಅವರು ಬಳಸಿದ್ದ ಜೀಪ್‌ಅನ್ನು ಜಿಲ್ಲೆಯ ಕೊಳ್ಳೇಗಾಲದಡಿಸಿಎಫ್ ಕಚೇರಿಯ ನೂತನ ಅತಿಥಿ ಗೃಹದ ಆವರಣದಲ್ಲಿ ನವೀಕರಿಸಿ ಸಂರಕ್ಷಿಸಲಾಗಿದ್ದು ಸಾರ್ವಜನಿಕರವೀಕ್ಷಣೆಗೆ ಇಡಲಾಗಿದೆ.ಕೊಳ್ಳೇಗಾಲದ ಉಪ ಅರಣ್ಯ ಸಂರಕ್ಷಣಾಧಿಕಾರಿಕಚೇರಿ ಆವರಣದಲ್ಲಿದ್ದ ಅರಣ್ಯ ಇಲಾಖೆ ಅತಿಥಿಗೃಹವನ್ನು ಇತ್ತೀಚೆಗೆ ನವೀಕರಿಸಿ ಉದ್ಘಾಟನೆ ಮಾಡ ಲಾಗಿದೆ. ಆ ಅತಿಥಿ ಗೃಹಕ್ಕೆ ಡಿಸಿಎಫ್ ದಿ.ಪಿ. ಶ್ರೀನಿವಾಸ್‌ಅವರ ಹೆಸರಿಡಲಾಗಿದೆ. ಅಲ್ಲಿ ಅವರ ಪುತ್ಥಳಿಯನ್ನೂನಿರ್ಮಿಸಲಾಗಿದೆ. ಇದನ್ನು ಪುಟ್ಟದೊಂದು ವಸ್ತುಸಂಗ್ರಹಾಲಯವಾಗಿಸುವ ಉದ್ದೇಶವನ್ನೂ ಹೊಂದಲಾಗಿದೆ. ಅದರ ಮೊದಲ ಹಂತವಾಗಿ ಶ್ರೀನಿವಾಸ್‌ಅವರು ಬಳಸುತ್ತಿದ್ದ ವಸ್ತುಗಳು, ಅವರ ವಿವಿಧಫೋಟೋಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಅವರಹೆಸರಿನಲ್ಲಿ ಗ್ರಂಥಾಲಯವನ್ನೂ ಸಹ ಸ್ಥಾಪಿಸಲಾಗಿದೆ.

ಶ್ರೀನಿವಾಸ್‌ ಬಳಸುತ್ತಿದ್ದ ಜೀಪಿನ ನವೀಕರಣ: ಈವಸ್ತುಗಳಲ್ಲಿ ನೋಡುಗರ ಗಮನ ಸೆಳೆಯುವುದು ಪಿ.ಶ್ರೀನಿವಾಸ್‌ ಅವರು ಬಳಸುತ್ತಿದ್ದ ಮಹೀಂದ್ರಾ ಜೀಪ್‌.ವೀರಪ್ಪನ್‌ ಸೆರೆ ಕಾರ್ಯಾಚರಣೆಯಲ್ಲಿದ್ದಾಗ ಪಿ.ಶ್ರೀನಿವಾಸ್‌ ಅವರು ಬಳಸುತ್ತಿದ್ದ ಕೆ.ಎ. 10 ಜಿ 1ಸಂಖ್ಯೆಯ ಜೀಪು ಕೆಟ್ಟು ಹಾಳಾಗಿತ್ತು. ಆ ಜೀಪು ಮಲೆಮಹದೇಶ್ವರ ಬೆಟ್ಟದ ಆಚೆ ಇರುವ ಪಾಲಾರ್‌ ವಲಯಅರಣ್ಯಾಧಿಕಾರಿ ಕಚೇರಿಯ ಆವರಣದಲ್ಲಿದ್ದುಜೀರ್ಣಾವಸ್ಥೆ ತಲುಪಿತ್ತು.ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು 1.10 ಲಕ್ಷರೂ. ವೆಚ್ಚದಲ್ಲಿ ದುರಸ್ತಿ ಮಾಡಿಸಿ, ನವೀಕರಿಸಿದ್ದಾರೆ. ಈನವೀಕೃತ ಜೀಪನ್ನು ಅತಿಥಿ ಗೃಹದ ಆವರಣದಲ್ಲಿಇಡಲಾಗಿದ್ದು, ನೋಡು ಗರ ಗಮನ ಸೆಳೆಯುತ್ತಿದೆ.ಉಪಯೋಗಕ್ಕೆ ಬಾರ ದಂತಿದ್ದ ಜೀಪನ್ನು ಸಂಪೂರ್ಣದುರಸ್ತಿಪಡಿಸ ಲಾಗಿದ್ದು, ಚಾಲನಾ ಸ್ಥಿತಿಗೆ ತರಲಾಗಿದೆ.ನೋಡಲು ಹೊಚ್ಚ ಹೊಸದಾಗಿ ಕಾಣುತ್ತಿದೆ.

ಅತಿಥಿ ಗೃಹದ ಆವರಣದಲ್ಲಿ ಆಧುನಿಕ ಮಾದರಿಯಲ್ಲಿ ಶೆಡ್‌ ನಿರ್ಮಿಸಲಾಗಿದ್ದು, ಅದರಲ್ಲಿ ಜೀಪ್‌ನಿಲ್ಲಿಸಲಾಗಿದೆ. ಅದರ ಮುಂದಿನ ಫ‌ಲಕದಲ್ಲಿ ಈಜೀಪಿನ ವಿವರ ಹಾಕಲಾಗಿದೆ. ಸಾರ್ವಜನಿಕರು ಈಜೀಪನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.

ಕೆ.ಎಸ್‌.ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

1-kanna

Karnataka; ವಲಸಿಗರು ಈ ನಾಡಿಗೊಂದು ಸಮಸ್ಯೆ ಆಗದಿರಲಿ…

1-vtu

Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್‌ ಪದವಿ ಕೊಡಲಿದೆ ವಿಟಿಯು!

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆಮನುಷ್ಯ ನೀನು ದಂಡ, ಸತ್ತು ಹೋಗು!: ಎಐಚಾಟ್‌ಬಾಟ್‌ ಹೇಳಿಕೆ

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

10

Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು

9-kollegala

Kollegala: ಕಲುಷಿತ ನೀರು ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

Elephanat-1

Chamarajanagara: ವಕ್ರದಂತ ಹೊಂದಿದ್ದ ಕಾಡಾನೆ ಸ್ವಾಭಾವಿಕ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

Gundlupete: ನಿಯಂತ್ರಣ ತಪ್ಪಿ ಬೈಕ್‌ನಿಂದ ಬಿದ್ದ ಸವಾರ ಸಾವು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

WhatsApp Image 2024-11-17 at 20.58.12

Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.