ಕಾಡಂಚಿನ ಗ್ರಾಮಗಳ ಸಮಸ್ಯೆಗೆ ಸ್ಪಂದಿಸಿದ ಸಚಿವ
Team Udayavani, Jun 26, 2021, 6:22 PM IST
ಹನೂರು: ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ತಿಳಿದುಅರಣ್ಯ ಇಲಾಖೆ ಮತ್ತು ಕಾಡಂಚಿನಗ್ರಾಮಗಳ ನಡುವಿನ ಕೆಲ ಸಮಸ್ಯೆಗಳನ್ನುಬಗೆಹರಿಸಲು ಶ್ರಮಿಸುವುದಾಗಿ ಅರಣ್ಯಸಚಿವ ಅರವಿಂದ ಲಿಂಬಾವಳಿ ಜನಾಶ್ರಯ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡವೆಂಕಟೇಶ್ ಅವರಿಗೆ ಭರವಸೆ ನೀಡಿದರು.
ಬೆಂಗಳೂರಿನ ವಿಧಾನಸೌಧದ ಅರಣ್ಯಸಚಿವ ಅರವಿಂದ ಲಿಂಬಾವಳಿ ಅವರಕಚೇರಿಯಲ್ಲಿ ಭೇಟಿ ಮಾಡಿದ ವೆಂಕಟೇಶ್,ಹನೂರುಕ್ಷೇತ್ರವುಬಹುಪಾಲು ಗುಡ್ಡಗಾಡುಪ್ರದೇಶದಿಂದ ಅವೃತವಾಗಿದ್ದು ಅರಣ್ಯಇಲಾಖೆಯ ಕೆಲ ನಿಯಮಾವಳಿಗಳಿಂದಾಗಿ ಅರಣ್ಯ ಇಲಾಖೆ ಮತ್ತು ಕಾಡಂಚಿನ ಜನರನಡುವೆ ಆಗಾಗ್ಗೆ ಸಮಸ್ಯೆ ತಲೆದೋರುತ್ತಿದೆ.
ಕ್ಷೇತ್ರ ವ್ಯಾಪ್ತಿಯ ಮಲೆ ಮಹದೇಶ್ವರ ಬೆಟ್ಟಸುತ್ತಮುತ್ತಲ ಗ್ರಾಮಗಳಿಗೆ ತೆರಳುವ ಮಾರ್ಗಮಧ್ಯದಲ್ಲಿಅರಣ್ಯಇಲಾಖೆಯಿಂದ 25 ಅಡಿ ಆಳದಷ್ಟು ಕಂದಕ ತೆರೆಯಲಾಗಿದೆ.ಇದರಿಂದ ಗ್ರಾಮಸ್ಥರಿಗೆ ಸಮಸ್ಯೆಎದುರಾಗಿದೆ. ಇವುಗಳ ಪರಿಹಾರಕ್ಕೆ ಮನವಿಮಾಡಿದರು.ಇದಕ್ಕೆ ಸ್ಪಂದಿಸಿದ ಸಚಿವರು ಕೂಡಲೇಡಿಎಫ್ಓ ಏಡುಕುಂಡಲು ಅವರಿಗೆದೂರವಾಣಿ ಕರೆಮಾಡಿ ಸಮಸ್ಯೆಯ ಬಗ್ಗೆಚರ್ಚಿಸಿ ಅರಣ್ಯ ಮತ್ತು ವನ್ಯಜೀವಿಗಳ ಉಳಿವಿನಲ್ಲಿ ಅರಣ್ಯ ಇಲಾಖಾಅಧಿಕಾರಿಗಳಷ್ಟೇ ಪಾತ್ರ ಕಾಡಂಚಿನಗ್ರಾಮವಾಸಿಗಳದ್ದಾಗಿದೆ. ಹೀಗಾಗಿಅಧಿಕಾರಿಗಳು ಕಾಡಂಚಿನ ಗ್ರಾಮಗಳಜನರೊಂದಿಗೆ ಉತ್ತಮ ಬಾಂಧವ್ಯಹೊಂದಿರಬೇಕು.
ಜನರಿಗೆ ತೊಂದರೆನೀಡಬಾರದು ಎಂದು ಸೂಚಿಸಿದರು.ಈ ವೇಳೆ ಬಿಜೆಪಿ ಹಿಂದುಳಿದ ವರ್ಗಮೋರ್ಚಾ ಅಧ್ಯಕ್ಷ ನೆ.ಲ.ನರೇಂದಬಾಬು,ಉಪಾಧ್ಯಕ್ಷ ಗೋವಿಂದರಾಜು, ಲೊಕೇಶ್‌ಜತ್ತಿ, ಪೊನ್ನಾಚಿ ರಾಜು ಇತರರಿದ್ದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.