ಜಿಲ್ಲೆಯಲ್ಲಿ ಅಷ್ಟಾಗಿ ಕುಡಿವ ನೀರಿನ ಸಮಸ್ಯೆ ಇಲ್ಲ
ಹನೂರು ತಾ.ಮಾರ್ಟಳ್ಳಿಯ 21 ಜನವಸತಿಗಳಲ್ಲಿ ನೀರಿನ ಸಮಸ್ಯೆ
Team Udayavani, Apr 6, 2021, 12:48 PM IST
ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲತಾಲೂಕುಗಳಲ್ಲಿ ಕುಡಿಯುವ ನೀರಿಗೆ ಸದ್ಯಕ್ಕೆ ಸಮಸ್ಯೆಯಿಲ್ಲ. ಆದರೆ, ಹನೂರು ತಾಲೂಕುಮಾರ್ಟಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 21 ಜನವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ.
ಬಹುಗ್ರಾಮ ಯೋಜನೆಯಡಿ ಈಗಾಗಲೇ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನಗ್ರಾಮಗಳಿಗೆ ನದಿ ಮೂಲದಿಂದ ನೀರು ಪೂರೈಕೆಯಾಗುತ್ತಿದೆ. ಯಳಂದೂರು ತಾಲೂಕಿನಲ್ಲೂಅಂತರ್ಜಲ ಸಮಸ್ಯೆ ಇಲ್ಲ. ಹನೂರು ತಾಲೂಕಿನಲ್ಲಿ ಬಹುಗ್ರಾಮ ಯೋಜನೆ ಜಾರಿಗೊಂಡಿಲ್ಲ. ಹೀಗಾಗಿಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಮಾರ್ಟಳ್ಳಿ ಗ್ರಾಮ ಪಂಚಾಯಿತಿಯ ಒಟ್ಟು 22 ಜನವಸತಿಗಳಲ್ಲಿ ಸಮಸ್ಯೆಯಿದೆ. ಜಿಲ್ಲಾ ಪಂಚಾಯಿತಿಯ ನೀರು ಹಾಗೂ ನೈರ್ಮಲ್ಯ ಇಲಾಖೆಈ ಪ್ರದೇಶವನ್ನು ವಿಶೇಷವಾಗಿ ಪರಿಗಣಿಸಿ, ಸಮಸ್ಯೆತಲೆದೋರದಂತೆ ಮಾಡುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಮಾಡಿದೆ.
ಹನೂರು ತಾಲೂಕಿನಲ್ಲಿ ಅಂತರ್ಜಲ ಮಟ್ಟ ತೀವ್ರರೀತಿಯಲ್ಲಿ ಕುಸಿದಿದೆ. ಮಾರ್ಟಳ್ಳಿ ಪಂಚಾಯಿತಿವ್ಯಾಪ್ತಿಯಲ್ಲಿ 1200 ಅಡಿ ಕೊರೆದರೂ ನೀರು ಬಾರದಂಥ ಪರಿಸ್ಥಿತಿ ಇದೆ. ಹೀಗಾಗಿಕೊಳವೆಬಾವಿಗಳನ್ನು ರೀಬೋರ್ ಮಾಡುವುದು,ಬೋರ್‌ವೆಲ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆ.
16 ಖಾಸಗಿ ಜಮೀನಿನಲ್ಲಿರುವ ಕೊಳವೆಬಾವಿಗಳನ್ನು ಗುರುತಿಸಲಾಗಿದೆ. ಈ ಬಾವಿಗಳಲ್ಲಿ ನೀರಿನ ಪ್ರಮಾಣ ಸಮಾಧಾನಕರವಾಗಿದೆ. ಹೀಗಾಗಿ ಆ ಜಮೀನಿನ ಮಾಲೀಕರೊಂದಿಗೆಮಾತುಕತೆ ನಡೆಸಿ, ಅಲ್ಲಿಂದ ಗ್ರಾಮಗಳ ಮಿನಿ ಟ್ಯಾಂಕ್‌ಗಳಿಗೆ ನೀರು ಪೂರೈಸಲಾಗುತ್ತಿದೆ.ಒಟ್ಟು ಸಮಸ್ಯೆ ಇರುವ 22 ಗ್ರಾಮಗಳ ಪೈಕಿ 16ಗ್ರಾಮಗಳ ವ್ಯಾಪ್ತಿಯಲ್ಲಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆ ಮಾಡಲಾಗುತ್ತದೆ. ಉಳಿದೆಡೆ ಸರ್ಕಾರಿಭೂಮಿಯಲ್ಲಿರುವ ಕೊಳವೆ ಬಾವಿಗಳನ್ನೇ ಮತ್ತಷ್ಟು ಆಳ ಕೊರೆಸಿ, ನೀರು ತೆಗೆಯಲು ಯತ್ನಿಸಲಾಗುತ್ತದೆ.
ಬಹುಗ್ರಾಮ ನೀರಿನ ಯೋಜನೆ ಪ್ರಗತಿ :
ಹನೂರು ತಾಲೂಕಿನ ಒಟ್ಟು 291 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನದಿ ಮೂಲದಿಂದ ನೀರು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ ಒಟ್ಟು 98 ಗ್ರಾಮಗಳಿಗೆ ನೀರು ಕೊಡುವ ಯೋಜನೆಯನ್ನುಸಮರೋಪಾದಿಯಲ್ಲಿ ಕೈಗೊಳ್ಳಲಾಗಿದೆ. ಈ ಕಾಮಗಾರಿ ಮುಗಿಯಲು ನವೆಂಬರ್‌ತಿಂಗಳವರೆಗೂ ಕಾಲಾವಕಾಶ ಇದೆಯಾದರೂ ಆಗಸ್ಟ್ ಅಂತ್ಯದೊಳಗೆ ನೀರು ಪೂರೈಸಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಶಿವಶಂಕರ್ ತಿಳಿಸಿದರು.
ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ. ಹನೂರು ಭಾಗದಲ್ಲಿ ಅದರಲ್ಲೂಮಾರ್ಟಳ್ಳಿ ಗ್ರಾಪಂನ 21 ಜನವಸತಿ ಪ್ರದೇಶಗಳಲ್ಲಿ ಸಮಸ್ಯೆ ಇದೆ. ಬಹುಗ್ರಾಮಕುಡಿಯುವ ನೀರಿನ ಯೋಜನೆ ಬರುವವರೆಗೂ ಬೋರ್‌ವೆಲ್ ಕೊರೆಸುವುದು,ರೀ ಬೋರ್ ಮಾಡಿಸಲಾಗು ವುದು. ಖಾಸಗಿ ಬೋರ್‌ವೆಲ್ ಮೂಲಕ, ಮಿನಿವಾಟರ್ ಕನೆಕ್ಷನ್ ಕೊಡಿಸಲಾಗಿದೆ. ಸದ್ಯಕ್ಕೆ ಅಲ್ಲಿ ನೀರಿಗೆ ತೊಂದರೆ ಯಿಲ್ಲ.●ಶಿವಶಂಕರಯ್ಯ, ಕಾರ್ಯಪಾಲಕ ಎಎಂಜಿನಿಯರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.
-ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mumbai Coast: ಗೇಟ್‌ವೇ ಆಫ್ ಇಂಡಿಯಾ ಬಳಿ ದೋಣಿ ದುರಂತ: 13 ಮಂದಿ ದುರ್ಮರಣ!
Daily Horoscope: ಸಕಾರಾತ್ಮಕ ಚಿಂತನೆಯಿಂದ ಯಶಸ್ಸು, ಪ್ರತಿಭೆ ವೃದ್ಧಿಗೆ ಅವಕಾಶ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.