ಚೆನ್ನಯ್ಯನ ಕೆರೆಗೆ ಬೇಕಿದೆ ಕಾಯಕಲ್ಪ
ಇತಿಹಾಸ ಪ್ರಸಿದ್ಧ ಚೆನ್ನಯ್ಯ ಕೆರೆಯ ಅಕ್ರಮ ಒತ್ತುವರಿ ತಡೆಗೆ ಸಾರ್ವಜನಿಕರ ಆಗ್ರಹ
Team Udayavani, May 25, 2019, 2:08 PM IST
ಕೊಳ್ಳೇಗಾಲ ನಗರದ ಚೆನ್ನಯ್ಯ ಕೆರೆ ಅಭಿವೃದ್ಧಿಯಾಗದೇ ಗಿಡಗಂಟೆಗಳಿಂದ ಆವೃತಗೊಂಡಿರುವ ಕೆರೆ.
ಕೊಳ್ಳೇಗಾಲ: ನಗರದ ಹೃದಯ ಭಾಗದಲ್ಲಿರುವ ಕ್ರೈಸ್ತ ಸಮಾಜದ ಬಡಾವಣೆಯ ಮುಂದೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಳಿ ಇತಿಹಾಸ ಪ್ರಸಿದ್ಧ ಚೆನ್ನಯ್ಯನ ಕೆರೆಯೊಂದು ಪಾಳು ಬಿದಿದ್ದು, ಕೂಡಲೇ ಕೆರೆಯ ಸ್ಥಳವನ್ನು ಸಂಪೂರ್ಣ ಶುಚಿಗೊಳಿಸಿ ಪೌಂಟೇನ್ ಮಾದರಿಯ ಅಭಿವೃದ್ಧಿ ಗೊಳಿಸಿ ನಗರಕ್ಕೆ ಮೆರಗು ಬರುವಂತೆ ಮಾಡಬೇಕಾಗಿದೆ.
ಮರಡಿಗುಡ್ಡ ಅಂಥ ಹೆಸರು ಬಂದದ್ದು ಹೇಗೆ: ಮಹದೇಶ್ವರರು ದಕ್ಷಿಣ ಕಾಶಿಯಿಂದ ನೆಲೆಸಲು ತಾಲೂಕಿನ ಚಿಲಕವಾಡಿ ಶಂಭುಲಿಂಗೇಶ್ವರ ಬೆಟ್ಟಕ್ಕೆ ನಡೆದು ಬಂದರು. ನಂತರ ನೆಲಸಲು ಸ್ಥಳ ಸೂಕ್ತವಲ್ಲವೆಂದು ಅಲ್ಲಿಂದ ಪಾದಯಾತ್ರೆ ಬೆಳೆಸಿ ನಗರದ ಮರಡಿಗುಡ್ಡ ಬಂದು ಮಂಡಿಯನ್ನು ಊರಿದಕ್ಕಾಗಿ ಮರಡಿಗುಡ್ಡ ಎಂದು ನಾಮಕರ ಣವಾಗಿದೆ. ಇಲ್ಲಿಂದ ಪೂರ್ವಕ್ಕೆ ಕಟ್ಟೆ ಬಸವೇಶ್ವರಕ್ಕೆ ತೆರಳಿ ನಂತರ ಮಲೆ ಮಹದೇಶ್ವರ ಬೆಟ್ಟದಲ್ಲಿ ನೆಲಸಿದರೆಂದು ಇತಿಹಾಸದ ಗುಡ್ಡವೊಂದಿದೆ.
ಕೆರೆಯ ಇತಿಹಾಸ: ಮರಡಿ ಗುಡ್ಡದಲ್ಲಿ ಇತಿಹಾಸವುಳ್ಳ ಮಹದೇಶ್ವರ ಸ್ವಾಮಿಯ ದೇವಸ್ಥಾನ ಇದೆ. ದೇವಸ್ಥಾನದ ಅರ್ಚಕರು ಪ್ರತಿನಿತ್ಯ ದೇವರ ವಿಗ್ರಹ ಮತ್ತು ದೇವಸ್ಥಾನ ಶುಚಿಗೊಳಿಸಲು ಗುಡ್ಡದ ಕೆಳಗಿರುವ ಚೆನ್ನಯ್ಯನ ಕಟ್ಟೆಯಿಂದ ಕೆರೆ ನೀರನ್ನು ತೆಗೆದುಕೊಂಡು ಹೋಗಿ ಬಳಿಕ ಪೂಜೆ ಮಾಡುತ್ತಿದ್ದರು ಎಂದು ಇತಿಹಾಸದಲ್ಲಿ ಉಲ್ಲೇಖ.
ಕೆರೆ ಹೂಳೆತ್ತಬೇಕು: ಇತಿಹಾಸವುಳ್ಳ ಕೆರೆಯನ್ನು ಕೂಡ ಲೇ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಗಿಡಗಂಟಿಗಳನ್ನು ತೆರವು ಮಾಡಿ ನಂತರ ಕೆರೆಯ ಹೂಳೆತ್ತಿ ಅಭಿವೃದ್ಧಿಪಡಿಸಬೇಕು. ಕೆರೆಯ ಸುತ್ತ ನಗರದ ನಿವಾಸಿಗಳು ಮುಂಜಾನೆ ಮತ್ತು ಸಂಜೆ ವಾಯವಿಹಾ ರಕ್ಕಾಗಿ ಬಂದು ಹೋಗುವಂತೆ ನಿರ್ಮಾಣವಾದ ಪಕ್ಷದಲ್ಲಿ ವಯಸ್ಸಾದವರು ಸ್ವಲ್ಪ ಸಮಯ ಇಲ್ಲಿ ಆಸನಗಳ ಮೇಲೆ ಕುಳಿತು ವಿಶ್ರಾಂತಿ ಪಡೆದು ಹೋಗುವ ರೀತಿಯಲ್ಲಿ ಅಭಿವೃದ್ಧಿ ಆಗಬೇಕು.
ನೀರಿನ ಚಿಲುಮೆ: ರಾಷ್ಟ್ರೀಯ ಹೆದ್ದಾರಿ 209 ನಾಲ್ಕು ಪಥದ ಕಾಂಕ್ರೀಟ್ ರಸ್ತೆ ಮತ್ತು ರಸ್ತೆಯ ಎಡಭಾಗಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆಯ ಜೋಡಿರಸ್ತೆ ನಿರ್ಮಾಣವಾಗಿದೆ. ಈ ಎರಡು ರಸ್ತೆಗಳ ಮಗ್ಗುಲಲ್ಲೇ ಕೆರೆ ಇದ್ದು, ಕೆರೆ ಅಭಿವೃದ್ಧಿಗೊಂಡು ಕೆರೆಯ ಮಧ್ಯಭಾಗದಲ್ಲಿ ನೀರಿನ ಪೌಂಟೇನ್‌ವೊಂದು ನಿರ್ಮಾಣವಾಗಿ ನೀರು ಚಿಮ್ಮುತ್ತಿದ್ದ ಪಕ್ಷದಲ್ಲಿ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಮತ್ತು ಕೆರೆಯ ಪಕ್ಕದಲ್ಲಿರುವ ನಿವಾಸಿಗಳಿಗೆ ಮನರಂಜನೆ ಯನ್ನು ಕಣ್ತುಂಬಿಕೊಳ್ಳುವಂತೆ ಆಗಲಿದೆ.
ಅಕ್ರಮ ತಡೆಗೆ ಒತ್ತಾಯ: ಚೆನ್ನಯ್ಯಕಟ್ಟೆ ಕೆರೆಯಂತೆ ಇನ್ನು ಹಲವಾರು ಇತಿಹಾಸ ಪ್ರಸಿದ್ಧ ಕೆರೆಗಳು ಅಕ್ರಮ ಒತ್ತುವರಿಗೆ ಸಿಲುಕಿ ಯಾವುದೇ ತರಹದ ಅಭಿವೃದ್ಧಿ ಆಗದೆ ಮಣ್ಣಿನಿಂದ ಮುಚ್ಚಿ ಕೆರೆಯೇ ಇಲ್ಲದಂತೆ ಆಗುವ ಕೆಲಸಗಳು ಒಳಗೊಳಗೆ ನಡೆಯುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಕೆರೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲ ಹೆಚ್ಚಿಸಿದಾಗ ಕೆರೆಗಳು ಮತ್ತಷ್ಟು ಅಭಿವೃದ್ಧಿ ಹೊಂದುತ್ತದೆ.
ಅಡಿಗಲ್ಲು ಹಾಕಿ: ಕೆರೆಗಳನ್ನು ಸರ್ವೆ ಇಲಾಖೆಯ ಅಧಿಕಾರಿಗಳು ಎಲ್ಲೆ ಗುರುತು ಮಾಡಿ ಅದಕ್ಕೆ ಸೂಕ್ತ ಕಲ್ಲಿನ ಬೇಲಿಗಳನ್ನು ನಿರ್ಮಾಣ ಮಾಡಿದಾಗ ಮಾತ್ರ ಕೆರೆಗಳ ಅಕ್ರಮ ಒತ್ತುವರಿಗೆ ಕಡಿವಾಣ ಹಾಕಿದಂತೆ ಆಗಲಿದ್ದು, ಕೆರೆಗಳಲ್ಲಿ ನೀರು ಶೇಖರಣೆಯಾಗು ವುದರಿಂದ ಜಾನುವಾರುಗಳಿಗೂ ನೀರು ಲಭ್ಯವಾಗ ಲಿದ್ದು, ಕೂಡಲೇ ಭಿವೃದ್ಧಿಗೆ ಅಡಿಗಲ್ಲು ಬೀಳಬೇಕು.
● ಡಿ.ನಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.