ಕೊಂಡೋತ್ಸವದೊಂದಿಗೆ ಮಾದಪ್ಪನ ಜಾತ್ರೆಗೆ ತೆರೆ
Team Udayavani, Mar 9, 2019, 7:31 AM IST
ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 5 ದಿನಗಳಿಂದ ಜರುಗಿದ ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಕೊಂಡೋತ್ಸವದ ಮೂಲಕ ತೆರೆ ಎಳೆಯಲಾಯಿತು. ಮಹದೇಶ್ವರರ ಪರಮ ಭಕ್ತೆ ದುಂಡಮ್ಮನ ಮನೆ ತಂಬಡಗೇರಿಯಲ್ಲಿದ್ದು, ಆ ಮನೆಯಲ್ಲಿ ಮಹದೇಶ್ವರರು ಸೀಗೆಯ ಸೊಪ್ಪು ಹಾಗೂ ರಾಗಿ ಮುದ್ದೆ ಪ್ರಸಾದ ಸ್ವೀಕರಿಸಿದ್ದರು ಎಂಬ ಪ್ರತೀತಿ ಇದೆ.
ಈ ಹಿನ್ನೆಲೆ ಕೊಂಡೋತ್ಸವದ ದಿನದಂದು 12 ಜನ ಬೇಡಗಂಪಣ ಅರ್ಚಕರು ಪ್ರತೀತಿಯಂತೆ ಉಪವಾಸವಿದ್ದು, ದುಂಡಮ್ಮನ ಮನೆಯಲ್ಲಿ ಉದ್ಭವ ಮೂರ್ತಿ ಮಹದೇಶ್ವರನಿಗೆ ಪೂಜೆ ಸಲ್ಲಿಸಿ ಅಲ್ಲಿನ 12 ವೀರಭದ್ರ ಕಾಶಿ ಪೆಟ್ಟಿಗೆಗಳಿಗೂ ಪೂಜಾ ಕೈಂಕರ್ಯ ನೆರವೇರಿಸಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಧೂಪದ ಪೂಜೆ ನೆರವೇರಿಸಿದರು.
ಬಳಿಕ ತಂಬಡಗೇರಿ ಮಾರ್ಗವಾಗಿ ಮಾರ್ಗವಾಗಿ ಜಡೆಕಲ್ಲು ಮಂಟಪ ಸಮೀಪದ ಕೊಂಡೋತ್ಸವ ಗೋಪುರಕ್ಕೆ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ದೇವಾಲಯದ ಪ್ರವೇಶ ದ್ವಾರದಲ್ಲಿರುವ ವಿನಾಯಕನ ದೇವಾಲಯದಲ್ಲಿಯೂ ಸಹ 12 ವೀರಭದ್ರ ಕಾಶಿ ಪೆಟ್ಟಿಗೆಗಳಿಗೆ ಪೂಜೆ ಸಲ್ಲಿಸಿ ದೇವಾಲಯದ ಆವರಣಕ್ಕೆ ಕೊಂಡೊಯ್ದು ಪೂಜೆ ಸಲ್ಲಿಸಲಾಯಿತು.
ಬಳಿಕ ಸಾಲೂರು ಬೃಹನ್ಮಠದ ಪಟ್ಟದಗುರುಸ್ವಾಮಿಗಳ ಸಮ್ಮುಖದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ರಾಜಗೋಪುರದ ಮುಂಭಾಗದ ಪ್ರದೇಶದಲ್ಲಿ ಬೆಜ್ಜಲಮರದಿಂದ ಸಿದ್ಧಪಡಿಸಲಾಗಿದ್ದ 20 ಅಡಿ ಉದ್ದ ಮತ್ತು 3 ಅಡಿ ಅಗಲದ ಕೊಂಡೋತ್ಸವವನ್ನು ಬೆಳಗ್ಗೆಯಿಂದ ಉಪವಾಸವಿದ್ದ 12 ಜನ ಬೇಡಗಂಪಣ ಅರ್ಚಕರು ಪ್ರವೇಶಿಸಿದರು.
ಈ ಮನಮೋಹಕ ಕೊಂಡೋತ್ಸದ ದೃಶ್ಯ ವೀಕ್ಷಿಸಲು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಾದಪ್ಪನ ಭಕ್ತಾದಿಗಳು ಬೂದಿ ಮುಚ್ಚಿದ ಕೆಂಡ ಭೂಲೋಕದ ಗಂಡ ಕೆಂಜೆಡೆಯ ಮುಕ್ಕಣ್ಣ ಮಹದೇವನಿಗೆ ಉಘೇ ಉಘೇ ಎಂಬ ಜೈಕಾರ ಮೊಳಗಿಸಿದರು. ಭಕ್ತಾದಿಗಳ ಜೈಕಾರ ಮುಗಿಲು ಮುಟ್ಟುವಂತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC: ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿಗೆ ಕರ್ನಾಟಕದ ಶ್ರೇಯಾಂಕಾ ಹೆಸರು
World Rapid Chess Championship: ವಿಶ್ವ ರ‍್ಯಾಪಿಡ್ ಚೆಸ್.. ಅರ್ಜುನ್ ಜಂಟಿ ಅಗ್ರಸ್ಥಾನ
Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.