ರೈತರೇ ಸ್ಥಾಪಿಸಿದ ತೆಂಗು ಸಂಸ್ಕರಣಾ ಘಟಕ 


Team Udayavani, Jan 1, 2022, 4:09 PM IST

ರೈತರೇ ಸ್ಥಾಪಿಸಿದ ತೆಂಗು ಸಂಸ್ಕರಣಾ ಘಟಕ 

ಚಾಮರಾಜನಗರ: ತೆಂಗು ಬೆಳೆಗಾರರಿಗೆ ನೆರವಾಗಲು ಸ್ಥಾಪಿತವಾದ ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘವು 9 ಕೋಟಿ ರೂ.ವೆಚ್ಚದಲ್ಲಿ ಸಹಕಾರ ತತ್ವದಡಿ ರಾಜ್ಯದಲ್ಲೇ ಮೊದಲ ತೆಂಗಿನ ಪುಡಿ ಉತ್ಪಾದನಾ ಘಟಕ (ತೆಂಗು ಸಂಸ್ಕರಣಾ ಘಟಕ) ಸ್ಥಾಪಿಸಿದೆ.

ಪ್ರಸ್ತುತ ಇದು ವರ್ಷಕ್ಕೆ 3 ಕೋಟಿ ರೂ. ವಹಿವಾಟು ನಡೆಸುತ್ತಿದೆ. ಚಾಮರಾಜನಗರ ತಾಲೂಕಿನ ಪ್ರಮುಖ ಬೆಳೆಗಳಲ್ಲೊಂದಾದ ತೆಂಗಿಗೆ ಬೆಲೆಯಿಲ್ಲದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇಂಥ ಪರಿಸ್ಥಿತಿಯಲ್ಲಿತೆಂಗು ಬೆಳೆಗಾರರಿಗೆ ನೆರವಾಗಲು ಚಾಮರಾಜನಗರ ತಾಲೂಕು ತೆಂಗು ಬೆಳೆಗಾರರ ಸಂಸ್ಕರಣಾ ಮತ್ತು ಮಾರಾಟ ಸಹಕಾರ ಸಂಘವನ್ನು 2002ರ

ಜನವರಿಯಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು. 405 ಸದಸ್ಯರಿಂದ ಆರಂಭವಾಗಿ, ಪ್ರಸ್ತುತ 1124 ಸದಸ್ಯರನ್ನು (ಶೇರುದಾರರು) ಸಂಘ ಹೊಂದಿದೆ. ತೆಂಗಿನ ಬೆಲೆ ಪದೇ ಪದೆ ಕುಸಿತವಾಗುತ್ತಿದ್ದು, ರೈತರಿಂದತೆಂಗು ಸಂಗ್ರಹಿಸಿ, ತೆಂಗಿನ ಉತ್ಪನ್ನವಾದ ತೆಂಗಿನಪುಡಿಯನ್ನು ಸಂಸ್ಕರಿಸಿ ಮಾರಾಟ ಮಾಡಲು ಸಹಕಾರ ಸಂಘ ಯೋಜನೆ ಹಾಕಿಕೊಂಡಿತು. ತಾಲೂಕಿನ ಕಾಳನಹುಂಡಿ ರಸ್ತೆಯ ಮುಣಚನಹಳ್ಳಿಯಲ್ಲಿ ಪ್ರತಿದಿನ 50 ಸಾವಿರ ತೆಂಗಿನ ಕಾಯಿಯನ್ನು ಸಂಸ್ಕರಿಸುವ ಸಾಮರ್ಥ್ಯದ ತೆಂಗಿನಪುಡಿ ಉತ್ಪಾದನಾ ಘಟಕವನ್ನು 9 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿದೆ. ಇದರಿಂದ ಪ್ರತ್ಯಕ್ಷ-ಪರೋಕ್ಷವಾಗಿ 250 ಜನರಿಗೆ ಉದ್ಯೋಗ ದೊರೆತಿದೆ.

ತಾಲೂಕಿನಲ್ಲಿ ಇದುವರೆಗೆ 1,780 ಎಕರೆ ಪ್ರದೇಶದಲ್ಲಿ ತೆಂಗು ಪ್ರಾತ್ಯಕ್ಷಿಕ ಯೋಜನೆ ಹಮ್ಮಿಕೊಂಡು ತೆಂಗಿನ ಕಾಯಿ ಉತ್ಪಾದಕತೆ ಹೆಚ್ಚಿಸಿದೆ. ಯಂತ್ರೋಪಕರಣಗಳನ್ನು ಬಾಡಿಗೆಗೆ ನೀಡುವುದು, ತೆಂಗು ಬೆಳೆ ಬಗ್ಗೆ ಜಾಗೃತಿ ಶಿಬಿರ, ಮರ ಹತ್ತುವ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ.ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎ.ಎಂ. ಮಹೇಶಪ್ರಭು ಈ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷರು ಮತ್ತು ಸಂಸ್ಕರಣಾ ಘಟಕದ ರೂವಾರಿ. ಪ್ರಸ್ತುತಎ.ಎಸ್‌. ಚೆನ್ನಬಸಪ್ಪ ಅಧ್ಯಕ್ಷರಾಗಿದ್ದಾರೆ. ಪುಟ್ಟರಸು ಉಪಾಧ್ಯಕ್ಷರು, ಶಾಂತಮಲ್ಲಪ್ಪ ಲೆಕ್ಕಾಧಿಕಾರಿಯಾಗಿದ್ದಾರೆ. ಸಿಇಒ ಬಸವರಾಜ ತಳವಾರ್‌, ಚಂದ್ರಶೇಖರ್‌ ಪ್ಲಾಂಟ್‌ ಎಂಜಿನಿಯರ್‌ ಆಗಿದ್ದಾರೆ. ಆಡಳಿತ ಮಂಡಳಿಯಲ್ಲಿ 15 ಜನ ನಿರ್ದೇಶಕರಿದ್ದಾರೆ.

ತೆಂಗಿನ ಪುಡಿ ತಯಾರಿಕೆ ವಿಧಾನ :

ರೈತರು ಸಿಪ್ಪೆ ಸುಲಿದು ಘಟಕಕ್ಕೆ ಜುಟ್ಟು ರಹಿತ ತೆಂಗಿನ ಕಾಯಿ ಮಾರುತ್ತಾರೆ. ಈ ತೆಂಗಿನ ಕಾಯಿಯನ್ನು ಕನಿಷ್ಠ 5 ರಿಂದ 7 ದಿನ ಸಂಗ್ರಹಿಸಲಾಗುತ್ತದೆ. ಯಂತ್ರದ ಸಹಾಯದಿಂದ ಕರಟ ತೆಗೆಯಲಾಗುತ್ತದೆ. ಮಹಿಳೆಯರು ಚಾಕುವಿ ನಿಂದ ಕಂದು ಬಣ್ಣದ ಟೆಸ್ಟಾ (ಸಿಪ್ಪೆ) ತೆಗೆಯುವರು. ಬಳಿಕ ಕಾಯಿಯನ್ನು ತಣ್ಣೀರಿನಲ್ಲಿ ಸ್ವತ್ಛಗೊಳಿಸಲಾಗುವುದು. ಕೊಳೆತ ಕಾಯಿಯಿದ್ದರೆ ತೆಗೆಯಲಾಗುವುದು. ಮಷಿನ್‌ನಲ್ಲಿ ಬಳಿಕ ತುಂಡು ತುಂಡು ಮಾಡಲಾಗುತ್ತದೆ. ಪಿನ್‌ಮಿಲ್‌ನಲ್ಲಿ ಕಾಯಿಯನ್ನು ಹಸಿ ತುರಿ ಮಾಡಲಾಗುತ್ತದೆ. ಹಸಿ ತುರಿ ಡ್ರೈಯರ್‌ಗೆ ಹೋಗುತ್ತದೆ. ಡ್ರೈಯರ್‌ನಿಂದ ತೇವಾಂಶ ತೆಗೆಯಲಾಗುತ್ತದೆ. ಅದು ಒಣತುರಿ ಮಾಡುತ್ತದೆ. ಈ ಒಣತುರಿಯನ್ನು ಮತ್ತೆ ಬೇಕಾದ ಆಕಾರಕ್ಕೆ ಗ್ರೇಡಿಂಗ್‌ ಮಾಡಲಾಗುತ್ತದೆ. ಅನಂತರ 25 ಕೆ.ಜಿ. ಪ್ಯಾಕ್‌ ಮಾಡಲಾಗುವುದು. 1 ಕೆ.ಜಿ., ಅರ್ಧ ಕೆ.ಜಿ. ಪ್ಯಾಕ್‌ ಮಾಡಲಾಗುವುದು. ಈ ಪುಡಿಯನ್ನು 6 ತಿಂಗಳ ಕಾಲ ಬಳಸಬಹುದು.

ರೈತರ ತೆಂಗಿನ ಕಾಯಿಗೆ ಉತ್ತಮ ದರ :  ಬೆಳೆಗಾರರು ತಮ್ಮದೇ ಸಾಗಾಣಿಕೆಯಲ್ಲಿ ತೆಂಗಿನ ಕಾಯಿಗಳನ್ನು ಘಟಕಕ್ಕೆನೀಡಬೇಕು. ಕೆ.ಜಿ.ಗೆ 31ರಿಂದ 34 ರೂ.ದರ ನೀಡಲಾಗುತ್ತದೆ. ಮಾರನೆಯ ದಿನವೇ ಬೆಳೆಗಾರರ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡಲಾಗುತ್ತದೆ. ಈಸಹಕಾರ ಘಟಕವು 2019-20 ನೇ ಸಾಲಿನಲ್ಲಿ 1 ಕೋಟಿ ರೂ., 2020-21ರಲ್ಲಿ

2 ಕೋಟಿ ರೂ. ಹಾಗೂ 2021-22ನೇ ಸಾಲಿನಲ್ಲಿ 3 ಕೋಟಿ ರೂ. ವಹಿವಾಟುನಡೆಸಿದೆ. ಶೇರುದಾರರಿಗೆ ಮೆಸೇಜ್‌ ವಾರದಲ್ಲಿ ಎರಡು ಬಾರಿ ದರದ ಬಗ್ಗೆ ಮೊಬೈಲ್‌ ಮೂಲಕ ಮೆಸೇಜ್‌ ಕಳುಹಿಸಲಾಗುತ್ತದೆ. ತೆಂಗಿನ ಬೆಲೆ ಕುಸಿತವಾದಾಗಲೂ ರೈತರಿಂದ ಖರೀದಿ ಮಾಡಿ ಅವರ ನೆರವಿಗೆ ನಿಲ್ಲುತ್ತಿದೆ.

ಸುವರ್ಣ ಕಲ್ಪತರು ಬ್ರಾಂಡ್‌ ನೇಮ್‌ :  ಈ ತೆಂಗಿನ ಪುಡಿಗೆ ಸುವರ್ಣ ಕಲ್ಪತರು ಎಂಬ ಬ್ರಾಂಡ್‌ ನೇಮ್‌ ನೀಡಲಾಗಿದೆ. ಈಗಾಗಲೇ ಎಫ್ಎಸ್‌ಎಸ್‌ಎಐ ಪ್ರಮಾಣ ಪಡೆದಿದೆ. 1 ಕೆಜಿಪ್ಯಾಕ್‌ಗೆ 175 ರೂ. ದರ ಇದೆ. ತೆಂಗಿನ ಕಾಯಿಪುಡಿಯನ್ನು ಬಿಸ್ಕೆಟ್‌ ಕಾರ್ಖಾನೆಗಳು,ಬೇಕರಿಗಳು, ಗೃಹೋಪಯೋಗಿ ರೀಟೇಲ್‌ಗೆಸಗಟು ಮಾರಾಟ ಮಾಡಲಾಗುತ್ತದೆ. ರೀಟೇಲ್‌ಪ್ಯಾಕನ್ನು ಮಾಲ್‌ಗ‌ಳಿಗೆ, ದಿನಸಿ ಅಂಗಡಿಗಳಿಗೆ, ಇಕಾಮರ್ಸ್‌ ಗೆ ಮಾರಾಟಕ್ಕೆ ನೀಡಲಾಗುತ್ತದೆ. ಈ ತೆಂಗಿನಪುಡಿಯನ್ನು ಐಸ್‌ಕ್ರೀಂ, ಬಿಸ್ಕೆಟ್ಸ್‌, ಚಾಕಲೇಟ್‌ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಚಟ್ನಿ ಪುಡಿ, ಕುಕೀಸ್‌ಗಳಲ್ಲಿ ಬಳಸುತ್ತಾರೆ. ಬೇಕರಿಪದಾರ್ಥಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ತೆಂಗಿನ ಕಾಯಿಯ ಕಪ್ಪು ಭಾಗದಿಂದ ಹಿಂಡಿ, ಕಚ್ಚಾ ಎಣ್ಣೆ ತಯಾರಿಕೆಯ ಚಿಪ್ಸ್‌ತಯಾರಿಸಲಾಗುತ್ತದೆ ತಮಿಳುನಾಡಿನ ಎಣ್ಣೆ ಮಿಲ್‌ಗ‌ಳಿಗೆ ಮಾರಾಟ ಮಾಡಲಾಗುತ್ತಿದೆ.

-ಕೆ.ಎಸ್‌. ಬನಶಂಕರ ಆರಾಧ್ಯ

 

ಟಾಪ್ ನ್ಯೂಸ್

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

1-stalin

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

Car-Auto

Kaup: ರಿಕ್ಷಾ, ಕಾರು ಮುಖಾಮುಖಿ ಢಿಕ್ಕಿ: ಇಬ್ಬರಿಗೆ ಗಾಯ

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

BBK-11: ಬಿಗ್‌ ಬಾಸ್‌ ಮನೆಗೆ 4ನೇ ಸ್ಪರ್ಧಿ ಎಂಟ್ರಿ.. ಯಾರು ಈ ʼಗೋಲ್ಡ್‌ ಮ್ಯಾನ್‌ʼ?

1-PT

IOC ಗೆ ಪತ್ರ; ಪಿ.ಟಿ.ಉಷಾ ವಿರುದ್ಧ ಡಜನ್ ಗೂ ಹೆಚ್ಚು ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯರು!

Ramalinga-Raeddy

Transport: ವಾಯವ್ಯ ಸಾರಿಗೆ ನಿಗಮಕ್ಕೆ 400 ಬಸ್‌ ಖರೀದಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asasa

KSRTC; ಸ್ಟೇರಿಂಗ್ ರಾಡ್ ತುಂಡಾಗಿ ಹಳ್ಳಕ್ಕೆ ನುಗ್ಗಿದ ಬಸ್: ಹಲವರಿಗೆ ಗಾಯ

2-gundlupete

Gundlupete: ಬೋನಿಗೆ ಬಿದ್ದ ಗಂಡು ಚಿರತೆ

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Leopard ಓಡಿಸಲು ಅರಣ್ಯ ಇಲಾಖೆ ಹಾರಿಸಿದ ಗುಂಡಿನಿಂದ ನಾಲ್ವರು ರೈತರಿಗೆ ಗಾಯ; ಚಿರತೆ ಸಾವು

Chamarajanagar: DRFO arrested by Lokayukta while taking bribe

Chamarajanagara: ಲಂಚ ಪಡೆಯುತ್ತಿದ್ದ ಡಿಆರ್‌ಎಫ್‌ಒ ಲೋಕಾಯುಕ್ತ ಬಲೆಗೆ

Road Mishap ಬೈಕ್ ಗೆ ಟಿಪ್ಪರ್ ಢಿಕ್ಕಿ; ಕೇರಳ ಮೂಲದ ಮೂವರ ದುರ್ಮರಣ

Road Mishap ಬೈಕ್ ಗೆ ಟಿಪ್ಪರ್ ಢಿಕ್ಕಿ; ಕೇರಳ ಮೂಲದ ಮೂವರ ದುರ್ಮರಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1242

SAFF U-17 Championship: ಭಾರತ-ಬಾಂಗ್ಲಾ ಫೈನಲ್‌

047

Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್

025587

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

04257

T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್‌ ಯಾದವ್‌ ನಾಯಕ

0888

Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.