ಕುಸಿದ ರಸ್ತೆ, ಆತಂಕದಲ್ಲಿ ಸವಾರ


Team Udayavani, Dec 12, 2022, 3:28 PM IST

ಕುಸಿದ ರಸ್ತೆ, ಆತಂಕದಲ್ಲಿ ಸವಾರ

ಯಳಂದೂರು: ತಾಲೂಕಿನ ವೈ.ಕೆ.ಮೋಳೆ ಮಾರ್ಗದಿಂದ ಚಾಮರಾಜನಗರ ತಾಲೂಕಿನ ಇರಸವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಇರಸವಾಡಿ ಗ್ರಾಮದ ಬಳಿಯ ಕೆರೆ ಬದಿಯಲ್ಲಿ ಸಾಗುವಾಗ ಡಾಂಬರ್‌ ರಸ್ತೆಯು ಕುಸಿದು ಹೋಗಿದೆ. ಹಲವು ತಿಂಗಳು ಕಳೆದರೂ ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸದ ಕಾರಣ ಸಾವಿರಾರು ವಾಹನಗಳು ಸವಾರರ ಪ್ರಾಣಕ್ಕೆ ಇದು ಕುತ್ತಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಇರಸವಾಡಿ ಗ್ರಾಮದ ಕೆರೆ ಬಳಿಯಲ್ಲೇ ಈ ರಸ್ತೆ ಇದೆ. ಈ ಹಿಂದೆ ಸುರಿದ ಭಾರಿ ಮಳೆ, ಹಾಗೂ ಕೆರೆಯಿಂದ ಬಂದ ಹೆಚ್ಚಿನ ನೀರಿನಿಂದ ರಸ್ತೆ ಕೊಚ್ಚಿ ಹೋಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಈ ರಸ್ತೆ ಬರುತ್ತದೆ. ತಿಂಗಳುಗಳೇ ಕಳೆದರೂ ಇನ್ನೂ ಇದರ ದುರಸ್ತಿಯಾಗಿಲ್ಲ. ಈ ರಸ್ತೆಯಲ್ಲಿ ಭಾರಿ ಗಾತ್ರದ ವಾಹನ ಸಂಚಾರ ಇರುತ್ತದೆ. ಕಬ್ಬಿನ ಲಾರಿ, ಬಸ್‌, ಟ್ರ್ಯಾಕ್ಟರ್‌ಗಳು ಸಂಚರಿಸಿದಾಗ ರಸ್ತೆ ಕಂಪಿಸುವ ಅನುಭವವಾಗುತ್ತದೆ.

ಅಲ್ಲದೆ ಇಲ್ಲಿನ ಟಾರು, ಕಲ್ಲು, ಮಣ್ಣು ಕುಸಿಯುತ್ತಲೇ ಇದೆ. ಒಂದು ಬದಿಯಲ್ಲಿ ಕೆರೆ ಏರಿ ಮತ್ತೂಂದು ಬದಿಯಲ್ಲಿ 20 ಅಡಿ ಅಷ್ಟು ಹಳ್ಳದಲ್ಲಿ ನೀರಿನ ಕಾಲುವೆ ಮಧ್ಯೆ ಈ ರಸ್ತೆ ಹಾದು ಹೋಗಿದೆ. ಕೆರೆಯಿಂದ ಇಲ್ಲಿನ ಜಮೀನುಗಳಿಗೆ ನೀರು ಈ ರಸ್ತೆ ತಳಭಾಗದಲ್ಲೇ ಹಾದು ಹೋಗುತ್ತದೆ. ಕೊರ ಕಲು ಮತ್ತಷ್ಟು ಹೆಚ್ಚಾದರೆ ರಸ್ತೆ ಕುಸಿದು ಕಂದ ಕಕ್ಕೆ ವಾಹನಗಳು ಬಿದ್ದಲ್ಲಿ ಇಲ್ಲಿ ದೊಡ್ಡ ಅಪಾ ಯ ಸಂಭವಿಸುವ ಅಪಾಯ ಹೆಚ್ಚಾಗಿದೆ.

ತಡೆಗೋಡೆ ನಿರ್ಮಿಸಿ: ಇರಸವಾಡಿ ಗ್ರಾಮದ ಕೆರೆ ಬದಿಯಲ್ಲಿರುವ ಕಾಲುವೆ ಹಾಗೂ ಜಮೀನುಗಳ ಬದಿಯಲ್ಲಿ ತಡೆಗೋಡೆ ನಿರ್ಮಿಸಿರುವುದಿಂದ ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಜನಪ್ರತಿ ನಿಧಿಗಳು, ಅಧಿಕಾರಿಗಳ ವರ್ಗವು ಹೆಚ್ಚಿನ ಗಮನಹರಿಸಬೇಕಾಗಿದೆ, ತಡೆಗೋಡೆ ನಿರ್ಮಾಣ ಮಾಡಿದರೆ. ಹೆಚ್ಚು ಅನುಕೂಲವಾಗುತ್ತದೆ ಎಂದು ವಾಹನ ಸವಾರರ ಆಗ್ರಹಿಸಿದ್ದಾರೆ.

ಅಪಾಘಾತ ಸ್ಥಳವಾಗಿದೆ: ಈ ಮಾರ್ಗದಲ್ಲಿ ಪ್ರತಿನಿತ್ಯ ಯಳಂದೂರು, ವೈ.ಕೆ.ಮೋಳೆ, ಇರಸವಾಡಿ, ಮಸಣಾಪುರ, ಚಾಟೀಪುರ, ಹೊಂಗನೂರು, ಬೂದಂಬಳ್ಳಿಮೋಳೆ, ರೇಚಂಬಳ್ಳಿ, ಹೆಗ್ಗಡೆಹುಂಡಿ, ಚಂದಕವಾಡಿ, ಆಲೂರು ಸೇರಿದಂತೆ ಸಾಕಷ್ಟು ಗ್ರಾಮದ ಜನರು ದಿನನಿತ್ಯ ಸಂಚರಿಸುತ್ತಾರೆ. ಆದರೆ ಇಲ್ಲಿ ಸವಾರಿ ಮಾಡುವುದು ಸವಾಲಿನ ಕೆಲಸವಾಗಿದೆ. ಅಲ್ಪ ಯಾಮಾರಿದರೂ ಹತ್ತಾರು ಅಡಿ ಆಳದ ಕಂದಕಕ್ಕೆ ವಾಹನ ಬೀಳುವ ಅಪಾಯವಿದೆ. ರಸ್ತೆ ಪರಿಸ್ಥಿತಿ ಹೀಗಾದ ಬಳಿಕ ಇಲ್ಲಿ ಅನೇಕ ಅಪಘಾತಗಳು ಸಂಭವಿಸಿವೆ. ಈ ಬಗ್ಗೆ ಪೊಲೀಸ್‌ ಠಾಣೆ ಅಧಿಕಾರಿಗಳು ರಸ್ತೆ ಎರಡು ಕಡೆ ಬ್ಯಾರಿಕೇಡ್‌ ಹಾಕಿದ್ದಾರೆ.

ಗ್ರಾಮದ ಕೆರೆಯ ಬದಿಯಲ್ಲಿ ರಸ್ತೆಯು ಕುಸಿತಗೊಂಡಿರುವ ಕಾರಣ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಸ್ತೆಯನ್ನು ತಕ್ಷಣ ದುರಸ್ತಿ ಮಾಡಬೇಕು. ರಾತ್ರಿ ವೇಳೆ ಇಲ್ಲಿ ಬಿದ್ದಿರುವ ಹಳ್ಳ ಕಾಣುವುದೇ ಇಲ್ಲ. ಅನೇಕರು ಇಲ್ಲಿ ಬಿದ್ದು ಗಾಯಗಳೂ ಆಗಿವೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರು ಗಮನಹರಿಸಬೇಕಿದೆ. -ಮಹದೇವಶೆಟ್ಟಿ, ಇರಸವಾಡಿ ನಿವಾಸಿ

ಇರಸವಾಡಿ ಗ್ರಾಮದ ಕೆರೆ ಬಳಿ ಈ ಬಾರಿ ಸುರಿದ ಹೆಚ್ಚುವರಿ ಮಳೆಯಿಂದ ರಸ್ತೆ ಕುಸಿದು ಹೋಗಿದ್ದು, ಈ ಬಗ್ಗೆ ಮೇಲ ಧಿಕಾರಿಗಳಿಗೆ ಮಳೆಯಿಂದ ಹಾನಿ ಉಂಟಾಗಿರುವ ಬಗ್ಗೆ ಈ ಸ್ಥಳವನ್ನು ಪರಿಶೀಲಿಸಿ ವರದಿ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ತಕ್ಷಣ ಕೆಲಸ ಆರಂಭಿಸಲಾಗುವುದು. – ಕೆ.ಎಂ.ಮಧುಸೂದನ್‌, ಜೆಇ,ಲೋಕೋಪಯೋಗಿ ಇಲಾಖೆ, ಚಾಮರಾಜನಗರ

 – ಫೈರೋಜ್‌ಖಾನ್‌

ಟಾಪ್ ನ್ಯೂಸ್

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

1-eewqe

Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಳೆಬಾಳುವ ಎತ್ತು ಬಲಿ

Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.