ತಾಲೂಕು ಕಚೇರಿ ಮುಂದೆ ಅವೈಜ್ಞಾನಿಕ ತಂತಿ ಬೇಲಿ ನಿರ್ಮಾಣ

ಪಾರ್ಕಿಂಗ್‌ ಮಾಡಲು ವಾಹನ ಸವಾರರ ಪರದಾಟ

Team Udayavani, Aug 20, 2021, 6:58 PM IST

ತಾಲೂಕು ಕಚೇರಿ ಮುಂದೆ ಅವೈಜ್ಞಾನಿಕ ತಂತಿ ಬೇಲಿ ನಿರ್ಮಾಣ

ಗುಂಡ್ಲುಪೇಟೆ: ಪಟ್ಟಣದ ಜನನಿಬಿಡ ತಾಲೂಕು ಕಚೇರಿ ಮುಂದೆ ಅವೈಜ್ಞಾನಿಕವಾಗಿ ತಂತಿ ಬೇಲಿ ನಿರ್ಮಾಣದಿಂದ ಸಾರ್ವಜನಿಕರಿಗೆ
ಕಿರಿಕಿರಿ ಉಂಟಾಗಿದೆ.

ಒಂದೇ ಸೂರಿನಡಿ ತಹಶೀಲ್ದಾರ್‌ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪ ನೋಂದಣಿ ಕಚೇರಿ, ಆಹಾರ ಇಲಾಖೆ, ಸರ್ವೆ ಇಲಾಖೆ, ಅಬಕಾರಿ ಇಲಾಖೆ, ಟ್ರಜರಿ ಕಚೇರಿ ಮತ್ತಿತರ ಶಾಖೆಗಳು ಬರುತ್ತವೆ. ಇಲ್ಲಿಗೆ ನಿತ್ಯ ವಿವಿಧ ಕೆಲಸದ ನಿಮಿತ್ತ ನೂರಾರು ಜನರು ಬಂದು ಹೋಗುತ್ತಾರೆ. ಅಧಿಕ ಮಂದಿ ಬೈಕ್‌ಗಳಲ್ಲಿ ಬಂದು ತಹಶೀಲ್ದಾರ್‌ ಕಚೇರಿ ಇಕ್ಕೆಲಗಳಲ್ಲಿ ನಿಲ್ಲಿಸುವು ದರಿಂದ ಓಡಾಡಲು ತೊಂದರೆಯಾಗಿದೆ. ಜೊತೆಗೆ ಪೊಲೀಸ್‌ ವಸತಿ ಗೃಹಗಳಿಗೆ ಈ ಮೂಲಕವೇ ತೆರಳಬೇಕಾಗಿ ರುವ ಹಿನ್ನೆಲೆ ಸಮಸ್ಯೆ ಮತ್ತಷ್ಟು ಹೆಚ್ಚಿದೆ.

ಅಡ್ಡಾದಿಡ್ಡಿ ಪಾರ್ಕಿಂಗ್‌:ನಿತ್ಯ ತಾಲೂಕು ಕಚೇರಿ ಆಗಮಿಸುವ ಅಧಿಕಾರಿ ವರ್ಗದವರು ಸೇರಿದಂತೆ ಸಾರ್ವಜನಿಕರು ಬೈಕ್‌, ಕಾರುಗಳಲ್ಲಿ ಬರು ತ್ತಾರೆ. ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದ ಕಾರಣ ಎಲ್ಲೆಂದ ರಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆ ಮಾಡುತ್ತಾರೆ. ಇದರಿಂದ ಚಿಕ್ಕದಾಗಿರುವ ಪ್ರವೇಶ ದ್ವಾರಕ್ಕೆ ಸಲೀಸಾಗಿ ತೆರಳಲು ಸಮಸ್ಯೆಯಾಗುತ್ತಿದೆ. ಮಳೆ ಬಂದರೆ ನೀರು ನಿಂತು ಕೆಸರು ಗದ್ದೆಯಂತಾಗುತ್ತದೆ. ಹೀಗಾಗಿ ತಹಶೀಲ್ದಾರ್‌ ಇತ್ತ ಗಮನ ಹರಿಸಿ ವಾಹನ ಸವಾರರಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕೆಂದು ರೈತ ಮುಖಂಡ ಬಾಚಹಳ್ಳಿ ಸ್ವಾಮಿ
ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1453 ಪ್ರಕರಣ ಪತ್ತೆ| 1408 ಸೋಂಕಿತರು ಗುಣಮುಖ

ತಂತಿಬೇಲಿ ತೆರವಿಗೆ ಒತ್ತಾಯ: ತಾಲೂಕು ಕಚೇರಿ ಒಳಗೆ ಈಗಾಗಲೇ ಸುಂದರ ಪಾರ್ಕ್‌ ನಿರ್ಮಿಸ ಲಾಗಿದೆ. ಅದಾಗ್ಯೂ ಕಚೇರಿ ಇಕ್ಕೆಲಗಳಲ್ಲಿ
ಅವೈ ಜ್ಞಾನಿಕ ತಂತಿ ಬೇಲಿ ನಿರ್ಮಿಸಿರುವುದು ಸಾರ್ವ ಜನಿಕರ ಸಂಚಾರಕ್ಕೆ ತೊಂದರೆ ಉಂಟು ಮಾಡು ತ್ತಿದೆ. ಇದನ್ನು ತೆರವುಗೊಳಿಸಿ ಜನರ ಮುಕ್ತ ಓಡಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಗಿರೀಶ್‌ ಲಕ್ಕೂರು ಒತ್ತಾಯಿದರು.

ಆಧಾರ್‌ ಕೇಂದ್ರದಲ್ಲಿ ಜನಸಂದಣಿ
ನಿತ್ಯ ನೂರಾರು ಮಂದಿ ಆಧಾರ್‌ಗೆ ಫೋನ್‌ ನಂಬರ್‌ ಜೋಡಣೆ,ಹೆಸರು ತಿದ್ದುಪಡಿಗೆ ಆಗಮಿಸುತ್ತಾರೆ. ದಿನಕ್ಕೆಕೆಲವೇ ಮಂದಿಗೆ ತಿದ್ದುಪಡಿ ಸೀಮಿತಗೊಳಿಸಿರುವ ಹಿನ್ನೆಲೆ ಟೋಕನ್‌ ಪಡೆಯಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಟೋಕನ್‌ ಪಡೆದ ನಂತರವೂ ನೆಟ್‌ವರ್ಕ್‌ ಮತ್ತಿತರ ಸಮಸ್ಯೆಗಳು ತಲೆದೋರುವುದರಿಂದ ಒಬ್ಬ ವ್ಯಕ್ತಿಗೆ ಆಧಾರ್‌ ಮಾಡಲು ಗಂಟೆಗಟ್ಟಲೆ ಸಮಯ ಬೇಕಾಗುತ್ತಿದೆ.
ಇದರಿಂದ ಜನರು ಸಂಯಮಕಳೆದೊಕೊಳ್ಳುವಂತಾಗಿದೆ.

ಮೂಲಭೂತ ಸೌಕರ್ಯ ಕೊರತೆ
ತಾಲೂಕು ಕಚೇರಿಗೆ ಬಂದ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಸೂಕ್ತ ಆಸನಗಳ ವ್ಯವಸ್ಥೆಯಿಲ್ಲ. ಕುಡಿವ ನೀರು, ಶೌಚಾಲಯ ಸಮರ್ಪಕವಾಗಿ
ಇಲ್ಲದ ಕಾರಣ ಜನರು ಬಯಲನ್ನೇ ಅವಲಂಬಿಸಬೇಕಿದೆ. ಮಹಿಳೆಯರ ಪಾಡಂತು ಹೇಳ ತೀರದಾಗಿದೆ. ಇರುವ ಒಂದು ಶೌಚಾಲಯವು ಗಬ್ಬೆದ್ದು ನಾರುತ್ತಿವುದರಿಂದ ಜನರು ಇತ್ತ ಸುಳಿಯುತ್ತಿಲ್ಲ.

ತಾಲೂಕುಕಚೇರಿ ಆವರಣದೊಳಗೆ ಸರ್ಕಾರಿ ವಾಹನ ನಿಲುಗಡೆಗೆ ಸಾಧ್ಯವಾಗದಂತೆ ಸಾರ್ವಜನಿಕರು ಅಡ್ಡಾದಿಡ್ಡಿ ವಾಹನ ನಿಲ್ಲಿಸುತ್ತಿದ್ದರು. ಈ
ಕಾರಣದಿಂದ ತಂತಿ ಬೇಲಿ ನಿರ್ಮಿಸಲಾಗಿದೆ. ಇಕ್ಕೆಲಗಳಲ್ಲಿ ಅಡ್ಡಾದಿಡ್ಡಿಯಾಗಿ ಸವಾರರು ನಿಲ್ಲಿಸದಂತೆ ಮಾಡಲು ಪಕ್ಕದಲ್ಲಿ ಶಲ್ಟರ್‌ ನಿರ್ಮಿಸಿ
ಪಾರ್ಕಿಂಗ್‌ ವ್ಯವಸ್ಥೆಕಲ್ಪಿಸಲಾಗುವುದು.
– ರವಿಶಂಕರ್‌, ತಹಶೀಲ್ದಾರ್‌

-ಬಸವರಾಜು ಎಸ್‌.ಹಂಗಳ

ಟಾಪ್ ನ್ಯೂಸ್

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

New York:ಆಸ್ತಿ ಹಂಚಿದ ಶ್ರೀಮಂತ ಹೂಡಿಕೆದಾರ ಬಫೆಟ್‌; ಕುಟುಂಬದ 4 ಫೌಂಡೇಶನ್‌ ಆಸ್ತಿ ಹಂಚಿಕೆ

MM-Singh–Bush

Tribute Dr.Singh: ಡಾ.ಸಿಂಗ್‌ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

Supreme Court: ಕ್ರೆಡಿಟ್‌ ಕಾರ್ಡ್‌ ಬಾಕಿ ಮೇಲೆ 30% ಬಡ್ಡಿಗೆ ಸುಪ್ರೀಂ ಅಸ್ತು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Bheema-Naik

KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ

MM-Singh-ACC-Pm

Accidental Prime Minister: ದ ಮೇಕಿಂಗ್‌ ಆ್ಯಂಡ್‌ ಅನ್‌ಮೇಕಿಂಗ್‌ ಆಫ್ ಡಾ.ಸಿಂಗ್‌

5

Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ;‌ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.