“ಕಂಬಳಿ ವಿತರಣೆಯಲ್ಲಿ ಭ್ರಷ್ಟಾಚಾರ’
Team Udayavani, Dec 28, 2017, 1:45 PM IST
ಚಾಮರಾಜನಗರ: ರಾಜ್ಯ ಸರ್ಕಾರ ಕಾಡಂಚಿನಲ್ಲಿರುವ ಗಿರಿಜನರ ಅಭಿವೃದ್ಧಿಗಾಗಿ ನೀಡುವ ಸೌಲಭ್ಯ ವಿತರಣೆಯಲ್ಲಿ
ಅನ್ಯಾಯವಾಗಿದ್ದು, ಕಳಪೆ ಗುಣಮಟ್ಟದ ಸಾಮಗ್ರಿಗಳನ್ನು ನೀಡುವ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪದಂತೆ ಮಾಡಿರುವ ತಾಲೂಕು ಗಿರಿಜನ ಅಭಿವೃದ್ಧಿ ಅಧಿಕಾರಿ ವಿರುದ್ಧ ಸರ್ಕಾರಕ್ಕೆ ವರದಿ ನೀಡು ವಂತೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು.
ನಗರದ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ನಡೆದ ಚಾ.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಗಿರಿಜನರಿಗೆ ಸರ್ಕಾರದಿಂದ ಜಾರಿಯಾಗಿರುವ ಯೋಜನೆಗಳ ಮಾಹಿತಿ ಪಡೆದುಕೊಳ್ಳುವ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡಿದ ಗಿರಿಜನ ಅಭಿವೃದ್ಧಿ ಅಧಿಕಾರಿ ರಾಮಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ತಾಲೂಕಿನ ವ್ಯಾಪ್ತಿಯಲ್ಲಿರುವ ಗಿರಿಜನರ ಪೋಡುಗಳಿಗೆ ಕಂಬಳಿ ವಿತರಣೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ. 85 ಮಂದಿ
ಗಿರಿಜನ ಕುಟುಂಬಗಳಿಗೆ ಕಂಬಳಿ ವಿತರಣೆಗೆ ಒಂದು ವರ್ಷದ ಹಿಂದೆಯೇ ಕ್ರಿಯಾ ಯೋಜನೆಯನ್ನು ತಯಾರಿಸಿ, ಅಂದಿನ ಜಿಲ್ಲಾ ಗಿರಿಜನ ಅಧಿಕಾರಿಯಾಗಿದ್ದ ಸರಸ್ವತಿ ಅವರು ಕಳಪೆ ಗುಣಮಟ್ಟದ ಕಂಬಳಿಯನ್ನು ಖರೀದಿಸಿದ್ದರು ಎಂದು ಆರೋಪಿಸಿದರು.
ಕಳಪೆ ಕಂಬಳಿಯೂ ವಿತರಿಸಿಲ್ಲ: ಇದನ್ನು ವಿತರಣೆ ಮಾಡುವಂತೆ ತನ್ನ ಬಳಿಗೆ ಕಂಬಳಿ ತಂದಿದ್ದ ಈ ಅಧಿಕಾರಿಗೆ ಕಳಪೆ ಗುಣಮಟ್ಟದ ಕಂಬಳಿ ವಿತರಣೆ ಮಾಡ ಬೇಡಿ ಎಂದು ಸೂಚನೆ ನೀಡಿದ್ದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿ ನೆಪ ಮಾಡಿ ಹಲವರಿಗೆ ಕಂಬಳಿ ನೀಡಿದ್ದೇವೆ ಎಂದು ವರದಿ ಮಾಡಿದ್ದಾರೆ. ಹೋಗಲಿ ಎಂದರೆ ಆ ಕಳಪೆ ಗುಣಮಟ್ಟದ ಕಂಬಳಿಯೂ ವಿತರಣೆಯಾಗಿಲ್ಲ ಎಂದು ಪಟ್ಟರಂಗಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ಕುರಿ ವಿತರಣೆಯಲ್ಲೂ ಅನ್ಯಾಯ: ಅಲ್ಲದೇ, ಗಿರಿಜನರಿಗೆ ಮನೆ ನಿರ್ಮಾಣ, ಕಚ್ಚಾ ಮನೆಗಳ ದುರಸ್ತಿ, ಕುರಿಗಳ ವಿತರಣೆ ಯಲ್ಲಿ ಅನ್ಯಾಯವಾಗಿದೆ. ಸಮರ್ಪಕವಾಗಿ ವಿತರಣೆಯಾಗಿಲ್ಲ. ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. 7 ಸಣ್ಣ ಕುರಿಗಳನ್ನು ಖರೀದಿ ಮಾಡಿ, ಅವು ಬೆಳೆವಣಿಗೆ ಇಲ್ಲದೇ ಸತ್ತು ಹೋಗಿವೆ. ಇವುಗಳಿಗೆ ವಿಮೆ ಮಾಡಿಸಿದ್ದ ಹಣವೂ ಫಲಾನುಭವಿಗಳಿಗೆ ಪಾವತಿಯಾಗಿಲ್ಲ. ಎಷ್ಟು ಮಟ್ಟಿಗೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬುವುದು ಇದರಿಂದ ಸ್ಪಷ್ಟವಾಗುತ್ತಿದೆ. ಹೀಗಾಗಿ ಇಲ್ಲಿ ಚರ್ಚೆ ಮಾಡಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡುವಂತೆ ತಾಪಂ ಇಒಗೆ ಪುಟ್ಟರಂಗಶೆಟ್ಟಿ ಸೂಚನೆ ನೀಡಿದರು.
ಅನುದಾನ ಬಳಕೆಯಾಗುತ್ತಿಲ್ಲ: ಅಲ್ಲದೇ 15 ಗಿರಿಜನ ಮಹಿಳಾ ಸಂಘಗಳಿಗೆ ಒಂದು ಲಕ್ಷ ರೂ. ಆವರ್ತ ನಿಧಿ ನೀಡುವಂತೆ ಸರ್ಕಾರದ ಆದೇಶವಾಗಿದೆ. ಇನ್ನೂ ಈ ಅಧಿಕಾರಿ ಸಂಘಗಳನ್ನು ಗುರುತಿಸಲು ಮುಂದಾಗಿಲ್ಲ. ಹೀಗಾಗಿ ಗಿರಿಜನರಿಗೆ ಸಲ ವತ್ತು ವಿತರಣೆಯಾಗುವುದು ಇವರಿಗೆ ಇಷ್ಟವಿಲ್ಲ. ಜೊತೆಗೆ ಆ ಸಮುದಾಯವೂ ಜಾಗೃತಿಗೊಂಡಿಲ್ಲದ ಕಾರಣದಿಂದಾಗಿ ಅನುದಾನ ಬಳಕೆಯಾಗುತ್ತಿಲ್ಲ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಶಿಥಿಲಗೊಂಡಿರುವ ಶಾಲಾ ಕೊಠಡಿಗಳನ್ನು ನೆಲಸಮಗೊಳಿಸಿ, ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಮಾಡಲು ಗ್ರಾಮ ಪಂಚಾಯ್ತಿ ಹಾಗೂ ಶಾಲಾಭಿವೃದ್ಧಿ ಸಮಿತಿಗಳಿಗೆ ಅಧಿಕಾರ ನೀಡು ವಂತೆ ಸಭೆಯಲ್ಲಿ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ದಯಾನಿಧಿ, ಜಿಪಂ ಸದಸ್ಯರಾದ ಕೆರೆಹಳ್ಳಿ ನವೀನ್, ಚಂದ್ರಕಲಾ ಚಂದ್ರಶೇಖರ್, ಶಶಿಕಲಾ ಸೋಮಲಿಂಗಪ್ಪ, ಆರ್.ಬಾಲರಾಜು. ಸಿ.ಎನ್. ಬಾಲರಾಜು, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗರಾಜಮ್ಮ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.