ಚಾಮರಾಜನಗರದಲ್ಲಿ ಮತ್ತೆ ಇಬ್ಬರಿಗೆ ಕೋವಿಡ್ 19
Team Udayavani, Jun 26, 2020, 5:41 AM IST
ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 2 ಕೋವಿಡ್ ಪ್ರಕರಣ ವರದಿಯಾಗಿದೆ. ಕೊಳ್ಳೇಗಾಲದ ಕೆಎಸ್‌ಆರ್‌ಟಿಸಿ ಬಸ್ ಚಾಲಕರಿಗೂ, ಗುಂಡ್ಲುಪೇಟೆಯ 8311 ಸಂಖ್ಯೆಯ ರೋಗಿಯ ಪತ್ನಿಗೆ ಕೋವಿಡ್ ದೃಢಪಟ್ಟಿದೆ. ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ನಿವಾಸಿ ಸರಕು ಸಾಗಣೆ ವಾಹನದ ಚಾಲಕನಿಗೆ ಮೊದಲು ಕೋವಿಡ್ ದೃಢಪಟ್ಟಿತು.
ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಇನ್ನಿಬ್ಬರು ಚಾಲಕರಿಗೆ, ದ್ವಿತೀಯ ಸಂಪರ್ಕ ಹೊಂದಿದ್ದ ಇಬ್ಬರು ಮಹಿಳೆಯರಿಗೆ ಸೋಂಕು ತಗುಲಿ, ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ ಆತನ ಪತ್ನಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಗುಂಡ್ಲುಪೇಟೆಯ 8311 ಸಂಖ್ಯೆಯ ರೋಗಿಯಿಂದ 5 ಜನರಿಗೆ ಸೋಂಕು ತಗುಲಿದೆ. ಆತನೂ ಸೇರಿ ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದಲ್ಲಿ 6 ಮಂದಿ ಸೋಂಕಿತರಾಗಿದ್ದಾರೆ.
ಕೊಳ್ಳೇಗಾಲದ ಮಂಜುನಾಥನಗರ ಬಡಾವಣೆ ನಿವಾಸಿಯಾದ ಕೆಎಸ್‌ಆರ್‌ಟಿಸಿ ಬಸ್ ಚಾಲಕ/ನಿರ್ವಾಹಕನಿಗೆ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಗುರುವಾರ ಸಂಜೆ ಮಂಜುನಾಥನಗರವನ್ನು ಸೀಲ್‌ಡೌನ್ ಮಾಡಲಾಯಿತು. ಈ ಚಾಲಕ/ ನಿರ್ವಾಹಕ ಬಸ್‌ನಲ್ಲಿ ಬೆಂಗಳೂರಿಗೆ ತೆರಳಿದ್ದು, ವಾಪಸ್ ಬಂದು ಕೋವಿಡ್ ಆಸ್ಪತ್ರೆಗೆ ದಾಖಲಾಗು ವಂತೆ ಸೂಚಿಸಲಾಗಿದೆ. ಚಾಮರಾಜನಗರದ ಭಗೀರಥ ನಗರದ ಭೂಮಾಪಕಿ ಹಾಗೂ ಪೂರ್ವ ಠಾಣೆಯ ಪೇದೆ ಸೇರಿ ಜಿಲ್ಲೆಯಲ್ಲೀಗ 9 ಸಕ್ರಿಯ ಪ್ರಕರಣಗಳಿವೆ.
ಒಟ್ಟು ದೃಢೀಕೃತ ಪ್ರಕರಣಗಳು 10. ಓರ್ವ (ಮುಂಬೈ ನಿವಾಸಿ) ಗುಣಮುಖನಾಗಿ ಮನೆಗೆ ತೆರಳಿದ್ದಾನೆ. ಜಿಲ್ಲೆಯಲ್ಲಿ ನಿಗಾವಣೆಯಲ್ಲಿರುವ ಪ್ರಾಥಮಿಕ ಸಂಪರ್ಕಿತರ ಸಂಖ್ಯೆ ಒಟ್ಟು ಸಂಖ್ಯೆ 82 ಹಾಗೂ ದ್ವಿತೀಯ ಸಂಪರ್ಕಿತರ ಸಂಖ್ಯೆ 124. ಇದುವರೆಗೆ ಪರೀಕ್ಷೆಗೆ ಒಳಪಟ್ಟಿರುವ ಸಂಖ್ಯೆ 4589, ಇದರಲ್ಲಿ ನೆಗೆಟಿವ್ ಎಂದು ವರದಿಯಾಗಿರುವ ಮಾದರಿಗಳು 4580. ದೃಢೀಕೃತ ಮಾದರಿಗಳ ಒಟ್ಟು ಸಂಖ್ಯೆ 10.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.