ಚಾ.ನಗರಕ್ಕೆ ಆತಂಕ ತಂದಿಟ್ಟ ಪೇದೆ: ಸೋಂಕು ಶಂಕೆಯಿದ್ದರೂ ಸಂಬಂಧಿಕರ ಮನೆಗೆ ಹೋಗಿದ್ದ ಪೇದೆ
Team Udayavani, May 5, 2020, 2:55 PM IST
ಚಾಮರಾಜನಗರ: ಇಷ್ಟು ದಿನ ಹಸಿರು ವಲಯದಲ್ಲಿದ್ದ ಜಿಲ್ಲೆಗೆ ಆತಂಕವೊಂದು ಎದುರಾಗಿದೆ. ಕೋವಿಡ್-19 ಸೋಂಕು ತಗುಲಿದ್ದ ಬೆಂಗಳೂರಿನ ಪೊಲೀಸ್ ಪೇದೆಯೊಬ್ಬರು ಹನೂರು ಸಮೀಪದ ಬೆಳತ್ತೂರಿನ ಸಂಬಂಧಿಕರ ಮನೆಯಲ್ಲಿದ್ದು ಹೋಗಿದ್ದರಿಂದ 18 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಎರಡು ಗ್ರಾಮಗಳನ್ನು ಸೀಲ್ ಡೌನ್ ಮಾಡಲಾಗಿದೆ.
ಬೆಂಗಳೂರಿನ ಬೇಗೂರು ಪ್ರದೇಶದ ಪೊಲೀಸ್ ಪೇದೆಯೊಬ್ಬರಿಗೆ ಕೋವಿಡ್-19 ಶಂಕೆಯಿದ್ದುದರಿಂದ ಬೆಂಗಳೂರಿನಲ್ಲೇ ಗಂಟಲು ದ್ರವ ಮಾದರಿ ಪರೀಕ್ಷೆ ನಡೆಸಲಾಗಿತ್ತು. ಅದರ ಫಲಿತಾಂಶ ಬರುವ ಮೊದಲೇ ಈ ಪೇದೆ ಜಿಲ್ಲೆಯ ಹನೂರಿನ ಬೆಳತ್ತೂರಿನ ನೆಂಟರ ಮನೆಗೆ ಬೈಕಿನಲ್ಲಿ ಸೋಮವಾರ ಬೆಳಿಗ್ಗೆ ಬಂದಿದ್ದಾರೆ. ಮಧ್ಯಾಹ್ನ 2 ಗಂಟೆಯ ವೇಳೆಗೆ ಆತನಿಗೆ ಬೆಂಗಳೂರಿನಿಂದ ಕರೆ ಬಂದು ಸೋಂಕು ಫಲಿತಾಂಶ ಪಾಸಿಟಿವ್ ಇರುವುದು ಗೊತ್ತಾಗಿದೆ. ಕೂಡಲೇ ಬೆಂಗಳೂರಿಗೆ ವಾಪಸಾಗಿದ್ದಾರೆ.
ಈ ವಿಷಯವನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದಾರೆ. ಸೋಮವಾರ ತಡರಾತ್ರಿ 11.40ರಲ್ಲಿ ಪೇದೆಯ ಸಂಬಂಧಿಕರು ಹಾಗೂ ಆತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ 18 ಜನರನ್ನು ನಗರದ ಅಂಬೇಡ್ಕರ್ ಭವನದಲ್ಲಿರುವ ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು.
ಈ 18 ಜನರಲ್ಲಿ 9 ತಿಂಗಳ ಹಾಗೂ 1 ವರ್ಷದ ಶಿಶುಗಳಿವೆ. 9 ವರ್ಷದ ಬಾಲಕ, 5 ವರ್ಷದ ಬಾಲಕಿ ಇದ್ದಾರೆ. 70, 63, ಹಾಗೂ 60 ವರ್ಷದ ಮೂವರು ವೃದ್ಧೆಯರು, 66 ವರ್ಷದ ಓರ್ವ ವೃದ್ಧರಿದ್ದಾರೆ.
ಕೋವಿಡ್-19 ಪಾಸಿಟಿವ್ ವ್ಯಕ್ತಿ ಬಂದಿದ್ದ ಕಾರಣ ಬೆಳತ್ತೂರು ಮತ್ತು ಸಮೀಪದ ಉದ್ದನೂರು ಗ್ರಾಮಗಳನ್ನು ಈಗ ಸೀಲ್ ಡೌನ್ ಮಾಡಲಾಗಿದೆ. ಬೆಳತ್ತೂರು ಗ್ರಾಮದ ತಾಲೂಕು ಕೇಂದ್ರವಾದ ಹನೂರಿಗೆ ಕೇವಲ 5 ಕಿ.ಮೀ. ದೂರದಲ್ಲಿದೆ.
ಕೋವಿಡ್19 ಹಸಿರು ವಲಯದಲ್ಲಿದ್ದ ಹಾಗೂ ಕ್ವಾರಂಟೈನ್‌ನಲ್ಲಿ ಸಹ ಒಬ್ಬರೂ ಇರದಿದ್ದ ಚಾಮರಾಜನಗರ ಜಿಲ್ಲೆಯಲ್ಲೀಗ, ಬೆಂಗಳೂರಿನ ಪೇದೆ ಮಾಡಿದ ಅವಾಂತರದಿಂದ ಆತಂಕ ಎದುರಾಗಿದೆ.
ಜಿಲ್ಲೆಯೊಳಗೆ ಹೊರ ಜಿಲ್ಲೆಯಿಂದ ಜನರನ್ನು ಬಿಡುತ್ತಿಲ್ಲ. ಆದರೂ ಈ ಪೇದೆ ಬೆಂಗಳೂರಿನಿಂದ ಚೆಕ್‌ಪೋಸ್ಟ್ ದಾಟಿ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಎದುರಾಗಿದೆ. ಪೊಲೀಸ್ ಪೇದೆಯೆಂಬ ಕಾರಣದಿಂದ ಆತನನ್ನು ಚೆಕ್‌ಪೋಸ್ಟ್ ನಲ್ಲಿ ಬಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.