ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ನಿರ್ಲಕ್ಷಿಸಿದ ಆರೋಗ್ಯ ಇಲಾಖೆ
Team Udayavani, Mar 16, 2021, 11:54 AM IST
ಚಾಮರಾಜನಗರ: ಒಂದೆಡೆ ರಾಜ್ಯ ಸರ್ಕಾರ ಕೋವಿಡ್ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕೆಂದು ಸೂಚನೆ ನೀಡಿದ್ದರೆ, ಇತ್ತ ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಮಾದರಿಗಳಪರೀಕ್ಷೆ ಕಡಿಮೆಯಾಗುತ್ತಿದೆ. ಇದರಿಂದಾಗಿ ಜಿಲ್ಲೆಯಲ್ಲಿ ನಿತ್ಯಸೋಂಕಿಗೊಳಗಾಗುತ್ತಿರುವವರ ನೈಜ ಸರಾಸರಿ ತಿಳಿದು ಬರುತ್ತಿಲ್ಲ.
ಸೋಂಕು ತೀವ್ರ ಗೊಂಡಿದ್ದ ಸಮಯದಲ್ಲಿ ಪ್ರತಿನಿತ್ಯದಪರೀಕ್ಷಾ ಪ್ರಮಾಣ ಒಂದು ಸಾವಿರವನ್ನೂ ದಾಟಿ 1200, 1300ಪರೀಕ್ಷೆಗಳನ್ನೂ ಮಾಡಲಾಗುತ್ತಿತ್ತು. ಬಳಿಕ ಪ್ರಕರಣಗಳ ಸಂಖ್ಯೆಇಳಿಮುಖವಾದಾಗ ಪರೀಕ್ಷಾ ಮಾದರಿಗಳ ಪ್ರಮಾಣ ಕಡಿಮೆಯಾಯಿತು. ನಿಜ, ಆಗ ಸೋಂಕು ನಿಧಾನವಾಗಿ ಕಡಿಮೆಯಾಗುತ್ತಿತ್ತು. ಹಾಗಾಗಿ ಹೆಚ್ಚಿನ ಪರೀಕ್ಷೆಗಳ ಅಗತ್ಯವಿರಲಿಲ್ಲ.ಆದರೆ ಕಳೆದ 10-15 ದಿನಗಳಿಂದ ಮಹಾರಾಷ್ಟ್ರ ಮತ್ತುಕೇರಳದಲ್ಲಿ ಗಣನೀಯವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆಹೆಚ್ಚುತ್ತಲೇ ಇದೆ. ಅಷ್ಟೇಕೆ ಬೆಂಗಳೂರು ಮತ್ತು ರಾಜ್ಯದಲ್ಲೂಪ್ರಕರಣಗಳ ಸಂಖ್ಯೆ ಹೆಚ್ಚುತಿದೆ. ರಾಜ್ಯದಲ್ಲಿ ಪ್ರತಿದಿನ 350 ರ ಆಸುಪಾಸಿನಲ್ಲಿದ್ದ ಪ್ರಕರಣಗಳ ಸಂಖ್ಯೆ ಈಗ ಒಂದು ಸಾವಿರದ ಹತ್ತಿರಕ್ಕೆ ಬಂದಿದೆ.
ಕೇರಳ ಮತ್ತು ತಮಿಳುನಾಡು ಗಡಿಗಳನ್ನು ಹಂಚಿಕೊಂಡರುವ ಚಾಮರಾಜನಗರ ಜಿಲ್ಲೆ ಈ ಸಂದರ್ಭದಲ್ಲಿ ಎಚ್ಚರವಾಗಿರ ಬೇಕು. ಮುಂಜಾಗ್ರತೆ ವಹಿಸಬೇಕು. ಪರೀಕ್ಷೆ ಪ್ರಮಾಣ ಹೆಚ್ಚಾಗಬೇಕು. ಆದರೆ ಬಹಳ ಕಡಿಮೆ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ಕಳೆದ 7 ದಿನಗಳ ಪರೀಕ್ಷೆಗಳ ಪ್ರಮಾಣದ ವಿವರ ಇಲ್ಲಿದೆ. ಮಾ. 9ರಂದು ಜಿಲ್ಲೆಯಲ್ಲಿ ನಡೆಸಿರುವ ಒಟ್ಟು ಮಾದರಿಗಳಪರೀಕ್ಷೆಗಳು 225 ಮಾತ್ರ. ಆ ದಿನ 1 ಪ್ರಕರಣ ಪಾಸಿಟಿವ್ ಆಗಿದೆ. ಮಾ. 10ರಂದು 560 ಪರೀಕ್ಷೆಗಳನ್ನು ನಡೆಸಲಾಗಿದೆ.ಅಂದು 2 ಪ್ರಕರಣ ವರದಿಯಾಗಿದೆ. 11 ರಂದು 478 ಪರೀಕ್ಷೆಗಳನ್ನು ನಡೆಸಲಾಗಿದೆ. 3 ಜನರಿಗೆ ಸೋಂಕು ತಗುಲಿರುವುದು ಗೊತ್ತಾಗಿದೆ. 12ರಂದು 653 ಪರೀಕ್ಷೆಗಳನ್ನು ನಡೆಸಲಾಗಿದ್ದು 1 ಪ್ರಕರಣ ಪಾಸಿಟಿವ್ ಆಗಿದೆ. 13ರಂದು ಕೇವಲ 223 ಪರೀಕ್ಷೆಗಳನ್ನು ನಡೆಸಲಾಗಿದ್ದು, ಅಂದು ಶೂನ್ಯ ಪ್ರಕರಣವರದಿಯಾಗಿದೆ. 14ರಂದು 623 ಪರೀಕ್ಷೆ ನಡೆಸಲಾಗಿದ್ದು, 04ಪ್ರಕರಣ ವರದಿಯಾಗಿದೆ. ಮಾ. 15ರಂದು 368 ಪರೀಕ್ಷೆನಡೆಸಲಾಗಿದ್ದು, 3 ಪ್ರಕರಣ ವರದಿಯಾಗಿದೆ.
ಕಡಿಮೆ ಸಂಖ್ಯೆ ಪರೀಕ್ಷೆ ನಡೆಸುತ್ತಿರುವುದರಿಂದ ಪ್ರಕರಣಗಳಸಂಖ್ಯೆ 5ನ್ನು ದಾಟಿಲ್ಲ. ಜಿಲ್ಲೆಯಿಂದ ಹೆಚ್ಚು ಪ್ರಕರಣಗಳುವರದಿಯಾಗಬಾರದೆಂಬ ಕಾರಣಕ್ಕೆ ಕಡಿಮೆ ಪರೀಕ್ಷೆಗಳನ್ನುಮಾಡಲಾಗುತ್ತಿದೆಯೇನೋ ಎಂದು ಜನರು ಸಂಶಯಿಸುವಂತಾಗಿದೆ. ಸೋಮವಾರ 368 ಪರೀಕ್ಷೆಗಳಲ್ಲಿ 3 ಪಾಸಿಟಿವ್ ಬಂದಿವೆ. ಪರೀಕ್ಷೆಗಳ ಸಂಖ್ಯೆ ಒಂದು ಸಾವಿರ ಆಗಿದ್ದರೆ ಪ್ರಕರಣಗಳ ಸಂಖ್ಯೆ ಕನಿಷ್ಟ 10 ವರದಿಯಾಗುತ್ತಿತ್ತು. ಹೀಗೆ ಸರಾಸರಿ 1000 ಪರೀಕ್ಷೆಗಳಾದರೂ ನಡೆದಾಗ ಜಿಲ್ಲೆಯ ಪ್ರಕರಣಗಳ ನೈಜ ಸರಾಸರಿ ಅಂದಾಜು ಸಿಗುತ್ತದೆ.ಇದಕ್ಕೆ ತಕ್ಕಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು,ಜಿಲ್ಲಾಡಳಿತ, ಆರೋಗ್ಯ ಇಲಾಖೆಗೂ ಅನುಕೂಲವಾಗುತ್ತದೆ.ಮೊದಲನೇ ಅಲೆಯಲ್ಲಿ ಆಗಿರುವ ಅನುಭವಗಳ ಆಧಾರದಮೇಲೆ ಎರಡನೇ ಅಲೆಯನ್ನು ಎದುರಿಸಲು ಸಜ್ಜಾಗಬೇಕಾಗಿದೆ.ಮೊದಲನೆಯ ಅಲೆಯಲ್ಲಾದ ಸಾವಿನ ಸಂಖ್ಯೆಗಳನ್ನು ಗಣನೀಯ ವಾಗಿ ಕಡಿಮೆ ಮಾಡಲು ಇದರಿಂದ ಸಹಾಯಕ ವಾಗುತ್ತದೆ ಎಂಬುದು ತಜ್ಞರ ಅಭಿಮತ. ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಸಿ. ರವಿ ಅವರ ಅಭಿಪ್ರಾಯ ಪಡೆಯಲು ಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ.
ಕಳೆದ 7 ದಿನಗಳ ಪರೀಕ್ಷೆ ವಿವರ
ದಿನ ಪರೀಕ್ಷೆ ಪಾಸಿಟಿವ್ ಸಂಖ್ಯೆ
ಮಾ.9 225 1
ಮಾ.10 560 2
ಮಾ.11 478 3
ಮಾ.12 653 1
ಮಾ.13 223 0
ಮಾ.14 623 4
ಮಾ.15 368 3
ನೆರೆಯ ಕೇರಳದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ರಾಜ್ಯದಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ನಮ್ಮ ನಡುವೆಯೇ ಸೋಂಕಿತರು ಇರಬಹುದು. ಹೆಚ್ಚು ಪರೀಕ್ಷೆಗಳನ್ನು ನಡೆಸಿದಾಗಲಷ್ಟೇ ಪ್ರಕರಣಗಳುಗೊತ್ತಾಗುವುದು. ಜಿಲ್ಲೆಯ ಆರೋಗ್ಯ ಇಲಾಖಮುಂಜಾಗ್ರತೆ ವಹಿಸಿ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. -ಮಹೇಶ್ ಗಾಳಿಪುರ, ನಗರಸಭಾ ಸದಸ್ಯ
-ಕೆ.ಎಸ್.ಬನಶಂಕರ ಆರಾಧ್ಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.