ಕೋವಿಡ್ ಸೆಂಟರ್ ತಡವಾಗಿ ತೆರೆದರೂ ಸೌಲಭ್ಯಗಳಿಲ್ಲ
Team Udayavani, May 15, 2021, 7:14 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಹೋಂಐಸೋಲೇಷನ್‌ನಿಂದಾಗಿ ಕೋವಿಡ್ ಸೋಂಕುಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿತಡವಾಗಿಯಾದರೂ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಆದರೆ, ಕೆಲವು ಕೋವಿಡ್‌ಕೇಂದ್ರದಲ್ಲಿ ಸರಿಯಾಗಿ ಔಷಧ, ಆಹಾರ ನೀಡುತ್ತಿಲ್ಲ,ಸ್ವತ್ಛತೆ ಕಾಪಾಡುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.
ಮೊದಲನೇ ಅಲೆ ಸಂದರ್ಭದಲ್ಲಿ ಜಿಲ್ಲೆಯಲ್ಲಿಕಡಿಮೆ ಪ್ರಕರಣಗಳಿದ್ದಾಗಲೂ ನಗರದ ಸರ್ಕಾರಿಎಂಜಿನಿಯರಿಂಗ್ ಕಾಲೇಜು, ಸರ್ಕಾರಿ ಮೆಡಿಕಲ್‌ಕಾಲೇಜುಗಳಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನುತೆರೆಯಲಾಗಿತ್ತು. ಸೋಂಕಿತರಲ್ಲಿ ಕಡಿಮೆ ರೋಗಲಕ್ಷಣಗಳಿರುವವರನ್ನು ಕೋವಿಡ್ ಕೇರ್ ಕೇಂದ್ರಗಳಲ್ಲಿಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಹೀಗಾಗಿ ಗ್ರಾಮೀಣಪ್ರದೇಶಗಳಲ್ಲಿ ಸೋಂಕು ಹೆಚ್ಚು ಹರಡಲಿಲ್ಲ.ಆದರೆ 2ನೇ ಅಲೆ ತೀವ್ರಗೊಂಡ ಬಳಿಕ ಜಿಲ್ಲೆಯಲ್ಲಿಸರ್ಕಾರ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲಿಲ್ಲ.ಹೆಚ್ಚಿನ ರೋಗಿಗಳನ್ನು ಹೋಂ ಐಸೋಲೇಷನ್‌ಗೆಕಳುಹಿಸಲಾಯಿತು. ತೀವ್ರ ರೋಗ ಚಿಹ್ನೆಇರುವವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಯಿತು.ಹೋಂ ಐಸೋಲೇಷನ್ ಹೆಚ್ಚಾದಂತೆ ಸೋಂಕುಹರಡುವ ವೇಗವೂ ಹೆಚ್ಚಾಯಿತು. ಹೀಗಾಗಿ ಕ್ಷಿಪ್ರಸಮಯದಲ್ಲಿ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿಹೆಚ್ಚಾಯಿತು.
ಪ್ರಕರಣಗಳ ಸಂಖ್ಯೆ ಹೆಚ್ಚಾದ ಬಳಿಕ, ಕಳೆದ 10ದಿನಗಳಿಂದ ಜಿಲ್ಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದೆ. ಚಾಮರಾಜನಗರದ ಮುಕ್ತವಿಶ್ವವಿದ್ಯಾಲಯ ಕಟ್ಟಡ, ಸರ್ಕಾರಿ ವೈದ್ಯಕೀಯಕಾಲೇಜು, ಮಾದಾಪುರದ ಮೊರಾರ್ಜಿ ವಸತಿಶಾಲೆಗಳಲ್ಲಿ ಕೋವಿಡ್ ಕೇರ್ ಕೇಂದ್ರಆರಂಭಿಸಲಾಗಿದೆ.
ಕೊಳ್ಳೇಗಾಲ ತಾಲೂಕಿನ ತಿಮ್ಮರಾಜಿಪುರಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆ, ಹನೂರಿನ ಆರ್‌ಎಸ್ ದೊಡ್ಡಿ ಮೊರಾರ್ಜಿ ವಸತಿ ಶಾಲೆ, ಗುಂಡ್ಲುಪೇಟೆತಾಲೂಕಿನ ವೀರನಪುರ ಕಿತ್ತೂರು ರಾಣಿ ಚೆನ್ನಮ್ಮವಸತಿ, ಯಳಂದೂರು ತಾಲೂಕು ವಡಗೆರೆ,ಸಂತೆಮರಹಳ್ಳಿ ಆರ್ಚರಿ ಶಾಲೆಗಳಲ್ಲಿಯೂ ಕೋವಿಡ್‌ಕೇರ್ ಕೇಂದ್ರ ಪ್ರಾರಂಭಿಸಲಾಗಿದೆ.ಆದರೆ, ಈ ಕೋವಿಡ್ ಕೇರ್ ಸೆಂಟರ್‌ಗಳ ಪೈಕಿಕೆಲವು ಕೇಂದ್ರಗಳಲ್ಲಿ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಇರಲಿ, ಮಾತ್ರೆಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂಬದೂರುಗಳು ಕೇಳಿ ಬರುತ್ತಿವೆ.ಇತ್ತ, ಡಿಸಿಎಂ ಅಶ್ವತ್ಥನಾರಾಯಣ ಅವರು,ಕೋವಿಡ್ ಸೋಂಕು ದೃಢಪಟ್ಟ ಒಂದು ಗಂಟೆಯಲ್ಲೇಸೋಂಕಿತರಿಗೆ ಕೋವಿಡ್ ಆರೈಕೆ ಔಷಧಿ ಕಿಟ್‌ನೀಡುವುದಾಗಿ ಪ್ರಕಟಿಸಿದ್ದಾರೆ.
ಆದರೆ, ಇದಕ್ಕೆವ್ಯತಿರಿಕ್ತವಾಗಿ, ಜಿಲ್ಲೆಯ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ರೋಗಿಗಳಿಗೆ ಅಗತ್ಯವಾದ ಮಾತ್ರೆಗಳನ್ನೇನೀಡುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ.ನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಆರಂಭಿಸಿರುವ ಕೋವಿಡ್ ಆರೈಕೆ ಕೇಂದ್ರದಲ್ಲಿರುವಕಾಡಂಚಿನ ಗ್ರಾಮ ತಾಲೂಕಿನ ಮೂಕನಪಾಳ್ಯದಸೋಂಕಿತೆಯೊಬ್ಬರು ಉದಯವಾಣಿಯೊಂದಿಗೆಮಾತನಾಡಿ, “ಕಳೆದ 3 ದಿನಗಳಿಂದ ನಮಗೆಮಾತ್ರೆಗಳನ್ನು ನೀಡುತ್ತಿಲ್ಲ.
ಕೇಳಿದರೆ ಸ್ಟಾಕಿಲ್ಲ, ನಾಳೆಬರುತ್ತೆ ಎಂದು ಹೇಳುತ್ತಾರೆ. ನಾವು ಚಿಕಿತ್ಸೆಗೆಂದುಬಂದಿದ್ದೇವೆ. ಕನಿಷ್ಠ ಮಾತ್ರೆಯನ್ನೂ ನೀಡುತ್ತಿಲ್ಲಎಂದರೆ ಹೇಗೆ’ ಎಂದು ಪ್ರಶ್ನಿಸಿದರು.ನಾನು ಮತ್ತು ನನ್ನ ಇಬ್ಬರು ಮಕ್ಕಳು ಇಲ್ಲಿದಾಖಲಾಗಿದ್ದೇವೆ. ವಿಟಮಿನ್ ಮಾತ್ರೆ ತಗೊಂಡರೆಬೇಗ ವಾಸಿಯಾಗುತ್ತದೆ ಎಂದು ಗೊತ್ತಿದ್ದರಿಂದ ನಮ್ಮಬಂಧುಗಳಿಗೆ ಹೇಳಿ ಹೊರಗೆ ಔಷಧಿ ಅಂಗಡಿಯಿಂದ ವಿಟಮಿನ್ ಮಾತ್ರೆ ತರಿಸಿ, ಬೇರೆಯವರಿಗೂ ಕೊಟ್ಟೆಎಂದು ಅವರು ಹೇಳಿದರು. ನಾನು ಮನೆಯಿಂದತಂದ ಬಟ್ಟೆ ಮಾಸ್ಕನ್ನೇ ಬಳಸುತ್ತಿದ್ದೇನೆ.
ಇಲ್ಲಿ ನಮಗೆಮಾಸ್ಕ್ ಅನ್ನೂ ಸಹ ನೀಡುತ್ತಿಲ್ಲ. ಸ್ಯಾನಿಟೈಸರ್ ಕೂಡ ಇಲ್ಲ ಎಂದು ಅವರು ಅಲವತ್ತು ಕೊಂಡರು.ಇನ್ನೋರ್ವ ಸೋಂಕಿತರು ಮಾತನಾಡಿ,ಸೋಂಕಿತರಾದ ನಮಗೆ ಸರಿಯಾಗಿ ಆಹಾರ ನೀಡಬೇಕು. ನಿನ್ನೆ ಬೆಳಗ್ಗೆ ತಿಂಡಿ ಕೊರತೆ ಉಂಟಾಗಿತ್ತುಎಂದರು.ಮೆಡಿಕಲ್ ಕಾಲೇಜು ಕೋವಿಡ್ ಕೇಂದ್ರದಲ್ಲಿ 6 ಶೌಚಾಲಯಗಳಿವೆ. ಒಟ್ಟು 140 ಜನಸೋಂಕಿತರಿದ್ದೇವೆ. ಇಷ್ಟು ಜನ ಬಳಸಿದರೆ ಶೌಚಾಲಯಗಬ್ಬೆದ್ದು ಹೋಗುತ್ತಿದೆ. ಇದನ್ನು ಸರಿಯಾಗಿಸ್ವತ್ಛಗೊಳಿಸುತ್ತಿಲ್ಲ ಎಂದು ರೋಗಿಯೊಬ್ಬರು ಅಳಲುತೋಡಿಕೊಂಡಿದ್ದಾರೆ. ಸಂತೆಮರಹಳ್ಳಿಯಲ್ಲಿರುವಕೋವಿಡ್ ಆಸ್ಪತ್ರೆಯಲ್ಲಿ ಕಳಪೆ ಆಹಾರನೀಡಲಾಗುತ್ತಿದೆ ಎಂದು ರೋಗಿಗಳು ಸ್ವಲ್ಪ ದಿನಗಳಹಿಂದೆ ಆಸ್ಪತ್ರೆ ಆವರಣದಲ್ಲೇ ಪ್ರತಿಭಟನೆ ನಡೆಸಿದ್ದರು.
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Kambli Health: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!
Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.