ಹಳ್ಳಿಗಳಲ್ಲಿ ಓಡಾಡಿಕೊಂಡಿರುವ ಕೋವಿಡ್‌ ಸೋಂಕಿತರು!

Team Udayavani, May 9, 2021, 5:34 PM IST

covid  infected

ಚಾಮರಾಜನಗರ: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿಗೆ ಒಳಗಾದವರು ನಿರಾಯಾಸವಾಗಿ ಓಡಾಡಿಕೊಂಡಿರುವುದು ಹಳ್ಳಿಯ ಜನರಲ್ಲಿಭೀತಿಯನ್ನುಂಟು ಮಾಡಿದೆ. ಜಿಲ್ಲೆಯಲ್ಲಿ ಎರಡನೇ ಅಲೆ ಬಂದ ನಂತರಪಟ್ಟಣಕ್ಕಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕಿತರು ಹೆಚ್ಚಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್‌ಆಸ್ಪತ್ರೆ ಹೊರತುಪಡಿಸಿ, ಯಾವುದೇ ಕೋವಿಡ್‌ ಆರೈಕೆತೆರೆಯದ ಕಾರಣ, ಹೆಚ್ಚು ಜನರನ್ನು ಮನೆಯಲ್ಲಿ ಪ್ರತ್ಯೇಕವಾಗಿರಿ (ಹೋಂ ಐಸೋಲೇಷನ್‌) ಎಂದುವೈದ್ಯರು ಹೇಳುತ್ತಿದ್ದಾರೆ.

ಇದರಿಂದಾಗಿ ಸೋಂಕಿತರುತಮ್ಮ ಮನೆಗಳಲ್ಲಿ ಹೋಂ ಐಸೋಲೇಷನ್‌ಗೆ ತೆರಳುತ್ತಾರೆ. ಆದರೆ ಇವರಲ್ಲಿ ಹೆಚ್ಚು ಸೋಂಕು ಲಕ್ಷಣಗಳಿಲ್ಲದವರು, ತಮಗೇನೂ ತೊಂದರೆಯಿಲ್ಲವೆಂದು,ಹಳ್ಳಿಗಳಲ್ಲಿ ಓಡಾಡಿಕೊಂಡಿದ್ದಾರೆ. ಮೊದಲ ಕೊರೊನಾ ಅಲೆ ಸಂದರ್ಭದಲ್ಲಿಯಾವುದಾದರೂ ಮನೆಯಲ್ಲಿ ಒಬ್ಬ ಸೋಂಕಿತಪತ್ತೆಯಾದರೆ ಆ ಮನೆ ಇರುವ ಇಡೀ ಬೀದಿಯನ್ನೇ ಕಂಟೈನ್ಮೆಂಟ್‌ ವಲಯ ಮಾಡಲಾಗುತ್ತಿತ್ತು. ಅಲ್ಲದೇಯಾವ ಮನೆಯಲ್ಲಿ ಸೋಂಕಿತರು ಇರುತ್ತಾರೋ ಆಮನೆಯಿಂದ ಯಾರೊಬ್ಬರೂ ಹೊರಗೆ ಓಡಾಡುವಂತಿರಲಿಲ್ಲ.

ಸ್ಥಳೀಯ ಆಡಳಿತದ ಮೂಲಕಆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿತ್ತು.ಇದರಿಂದಾಗಿ ಸೋಂಕಿತರು ಮನೆಯವರೂ ಧೈರ್ಯದಿಂದ ಇರುತ್ತಿದ್ದರು. ಹಾಗೆಯೇ ಗ್ರಾಮದಜನರೂ ಸೋಂಕಿತ ವ್ಯಕ್ತಿ ಅಥವಾ ಆ ಮನೆಯ ಇತರ ಸದಸ್ಯರಿಂದ ಒಂದು ಹಂತಕ್ಕೆ ಅಂತರ ಕಾಪಾಡಿಕೊಂಡು ಇರುತ್ತಿದ್ದರು. ಆದರೆ, ಈಗ ಹಳೆಯ ಯಾವೊಂದು ಪ್ರಕ್ರಿಯೆಯೂ ಸಹ ಚಾಲ್ತಿಯಲ್ಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ 100 ಮೀ. ಒಳಗೆ 5ಮಂದಿ ಸೋಂಕಿತರು ಪತ್ತೆಯಾದರೆ ಮಾತ್ರ ಸದ್ಯ ಆ ಬೀದಿಯನ್ನು ಅಥವಾ ಏರಿಯಾವನ್ನು ಕಂಟೈನ್ಮೆಂಟ್‌ ವಲಯ ಎಂದು ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದರು.

ಅದು ಸಹ ಸರಿಯಾಗಿ ಜಾರಿಗೆ ಬಂದಿಲ್ಲ. 10ಕ್ಕಿಂತ ಕಡಿಮೆ ಜನರಿದ್ದರಂತೂ ಅದನ್ನು ಪರಿಗಣಿಸುವುದೇ ಇಲ್ಲ. ಇದರಿಂದಾಗಿ ಸೋಂಕಿತರು ಮಾಸ್ಕ್ ಧರಿಸಿ ಅಥವಾ ಕೆಲವೆಡೆ ಧರಿಸದೆಯೂ ಗ್ರಾಮೀಣ ಪ್ರದೇಶಗಳಲ್ಲಿ ನಿರಾತಂಕವಾಗಿ ಓಡಾಡಿಕೊಂಡಿದ್ದರೆ, ಗ್ರಾಮಸ್ಥರು ಮಾತ್ರ ಆತಂಕದಿಂದ ದಿನ ದೂಡುವಂತಾಗಿದೆ.

ಪರಿಶೀಲನೆ ಸಹ ಇಲ್ಲ: ಇತ್ತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಾಗಲಿ, ದಾದಿಯರಾಗಲಿ, ಆಶಾಕಾರ್ಯಕರ್ತರಾಗಲಿ ಸೋಂಕಿತರ ಮನೆಗಳಿಗೆ ಭೇಟಿಕೊಟ್ಟು ಪರಿಶೀಲಿಸುವುದಾಗಲಿ, ಅಥವಾ ಆ ಬಡಾವಣೆಯ ನಾಗರಿಕರಿಗೆ ಅರಿವು ಮೂಡಿಸುವುದಾಗಲಿ ಮಾಡುತ್ತಿಲ್ಲ. ಯಾರಿಗೆ ಸೋಂಕಿದೆ ಎಂಬುದು ಸಹ ಗೊತ್ತಾಗುತ್ತಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೋಂ ಐಸೋಲೇಷನ್‌ನಲ್ಲಿರುವವರು ಕಡ್ಡಾಯವಾಗಿ ಮನೆಯೊಳಗೆ ಇರುವಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ, ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ನಿಯಂತ್ರಿಸಲಾಗದ ಮಟ್ಟಕ್ಕೆ ಏರುತ್ತಲೇ ಹೋಗುತ್ತವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮೂರು ಸಾವಿರ ಮಂದಿಹೋಂ ಐಸೋಲೇಷನ್‌ ಜಿಲ್ಲೆಯಲ್ಲಿ ಶುಕ್ರವಾರದವರೆಗೆ 4017 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ 2989 ಮಂದಿ ಹೋಂಐಸೋಲೇಷನ್‌ನಲ್ಲಿದ್ದಾರೆ. ಶುಕ್ರವಾರ ದೃಢೀಕರಣಗೊಂಡ 611 ಪ್ರಕರಣಗಳಲ್ಲಿ, ಚಾ.ನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು,ಯಳಂದೂರು, ಪಟ್ಟಣಗಳಲ್ಲಿ ಒಟ್ಟಾರೆ139 ಪ್ರಕರಣಗಳು ವರದಿಯಾಗಿದ್ದರೆ, ಜಿಲ್ಲೆಯಗ್ರಾಮೀಣ ಪ್ರದೇಶದಿಂದ 472 ಪ್ರಕರಣಗಳು ವರದಿಯಾಗಿವೆ. ಶೇಕಡಾವಾರು ತೆಗೆದುಕೊಂಡರೆ,ಪಟ್ಟಣ ಪ್ರದೇಶದಲ್ಲಿ ಶೇ. 22.75 ಪ್ರಕರಣಗಳು. ಗ್ರಾಮೀಣ ಪ್ರದೇಶದಲ್ಲಿ ಶೇ. 77.25 ಪ್ರಕರಣಗಳು ವರದಿಯಾಗಿವೆ.

ಪ್ರಶ್ನಿಸಿದವರ ಮೇಲೆಯೇ ಜಗಳ

ತಮ್ಮ ಗ್ರಾಮದಲ್ಲಿ ಯಾರಿಗಾದರೂ ಕೋವಿಡ್‌ ಸೋಂಕಿದೆಎಂದು ಗೊತ್ತಾಗಿ, ಅಂಥವರನ್ನು ಯಾರಾದರೂ ಪ್ರಶ್ನಿಸಿ,ನಿಮಗೆ ಕೊರೊನಾ ಇರುವುದರಿಂದ ಮನೆಯಲ್ಲೇ ಇರಬೇಕು. ಹೀಗೆ ಸುತ್ತಾಡಬಾರದು ಎಂದು ಹೇಳಿದರೆ, ಅಂಥವರ ವಿರುದ್ಧವೇ ಸೋಂಕಿತರು ಜಗಳಕ್ಕೆ ಬೀಳುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಳ್ಳುತ್ತಿದ್ದಾರೆ.  ಕೊರೊನಾ ಬಂದಿರದು ನಂಗ, ನಾನೇ ಕಲ್‌ಗ‌ುಂಡ್‌ನ‌ಂಗ ಓಡಾಡ್‌ ಕಂಡಿನಿ, ನಿಂಗ್ಯಾನ? ನಿಂಗ ಭಯವಾದ್ರ ಅಟ್ಟಿಲೇ ಇರು! ಎಂದು ಪ್ರಶ್ನೆ ಮಾಡಿದವನನ್ನೇ ಬೈದಿರುವ ಪ್ರಸಂಗಗಳು ನಡೆದಿವೆ!

ಗ್ರಾಮದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿವೆ. ಸೋಂಕಿತರುಮನೆಯ ಹೊರಗೆ ತಿರುಗಾಡುವುದನ್ನುನೋಡಿದಾಗ ನಮಗೆ ಭಯವಾಗುತ್ತದೆ.ನಮ್ಮದೊಂದೇ ಗ್ರಾಮವಲ್ಲ, ಅನೇಕಗ್ರಾಮಗಳಲ್ಲಿ ಈ ರೀತಿ ಪರಿಸ್ಥಿತಿ ಇದೆ.ಅಧಿಕಾರಿಗಳು ಇದರ ಬಗ್ಗೆ ಕ್ರಮಕೈಗೊಳ್ಳಬೇಕು.

ಮಹೇಶ್‌,ಚಾ.ನಗರ ತಾಲೂಕಿನ ಗ್ರಾಮಸ್ಥ

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ನೇಮಕ ಸಂದರ್ಶನ

Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್‌ ನೇಮಕ ಸಂದರ್ಶನ

Bandipur:  ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.