ಆಗ ಮಾದರಿಯಾಗಿದ್ದ ಜಿಲ್ಲೆಯಲ್ಲಿ ಈಗ ಸ್ಫೋಟ
Team Udayavani, Apr 26, 2021, 1:54 PM IST
ಚಾಮರಾಜನಗರ: ಕೋವಿಡ್ ಮೊದಲನೇ ಅಲೆಯಸಂದರ್ಭದಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿ ಅನೇಕತಿಂಗಳ ಕಾಲ ಶೂನ್ಯ ಪಾಸಿಟಿವ್ ಪ್ರಕರಣ ಹೊಂದಿದ್ದು,ಬಳಿಕವೂ ಪ್ರತಿದಿನದ ಪ್ರಕರಣಗಳು ನೂರರ ಗಡಿದಾಟದೆ ನಿಯಂತ್ರಣ ಹೊಂದಿದ್ದ ಚಾಮರಾಜನಗರಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ನಿರೀಕ್ಷಿಸಿರದಸಂಖ್ಯೆಯಲ್ಲಿ ಪ್ರಕರಣಗಳು ವರದಿಯಾಗುತ್ತಿವೆ.
ಕಳೆದ 10 ದಿನಗಳ ಅವಧಿಯಲ್ಲಿಪ್ರಕರಣಗಳ ಸಂಖ್ಯೆ ನಾಗಾಲೋಟದಿಂದ ಹೆಚ್ಚಳವಾಗುತ್ತಿದೆ. ಏ.15ರಂದು ಜಿಲ್ಲೆಯಲ್ಲಿ ವರದಿಯಾಗಿದ್ದಕೋವಿಡ್ ಪ್ರಕರಣಗಳ ಸಂಖ್ಯೆ 38.ಆದರೆ ಪ್ರಸ್ತುತ ಪ್ರತಿನಿತ್ಯ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ250ರ ಗಡಿಯನ್ನು ದಾಟಿದೆ.
ಶನಿವಾರವರದಿಯಾದ ಪ್ರಕರಣಗಳ ಸಂಖ್ಯೆ 275ಆಗಿತ್ತು.ಕಳೆದ ಮೊದಲನೇ ಅಲೆ ಸಂದರ್ಭದಲ್ಲಿ ಸೋಂಕುಉತ್ತುಂಗದಲ್ಲಿದ್ದಾಗ ಚಾಮರಾಜನಗರ, ಗದಗ,ಹಾವೇರಿ, ಕೊಪ್ಪಳ, ಯಾದಗಿರಿಯಂಥ ಸಣ್ಣಜಿಲ್ಲೆಗಳಲ್ಲಿ ಪ್ರತಿನಿತ್ಯದ ಪ್ರಕರಣಗಳು ಎರಡಂಕೆಯಲ್ಲಿಇದ್ದವು.
ಆದರೆ, ಈ ಬಾರಿ 2ನೇ ಅಲೆ ಶುರುವಾದ 10ದಿನಗಳಲ್ಲಿ ಚಾಮರಾಜನಗರ ಹೊರತುಪಡಿಸಿ ಆಜಿಲ್ಲೆಗಳಲ್ಲಿ ಎರಡಂಕೆ ಅಥವಾ 100-110 ಈ ರೀತಿಪ್ರಕರಣಗಳು ವರದಿಯಾಗುತ್ತಿವೆ. ಆದರೆಚಾಮರಾಜನಗರ ಜಿಲ್ಲೆಯಲ್ಲಿ 250ರ ಗಡಿಯನ್ನೂಈಗಲೇ ದಾಟುತ್ತಿದ್ದು, ಇನ್ನು 15 ದಿನಗಳ ನಂತರದಸಂಖ್ಯೆಗಳನ್ನು ಊಹಿಸಿದರೆ ಆತಂಕ ಮೂಡುತ್ತದೆ.
ಪ್ರಕರಣ ಹೆಚ್ಚಲು ಕಾರಣವೇನು?: ಮೊದಲಅಲೆಯಲ್ಲಿ ಕಡಿಮೆ ಲಕ್ಷಣಗಳುಳ್ಳರೋಗಿಗಳನ್ನು ಕೋವಿಡ್ ಕೇರ್‌ಸೆಂಟರ್‌ನಲ್ಲಿ ಇರಿಸಲಾಗುತ್ತಿತ್ತು.ನಗರದ ಸರ್ಕಾರಿ ಎಂಜಿನಿಯರಿಂಗ್‌ಕಾಲೇಜು, ಸರ್ಕಾರಿ ಮೆಡಿಕಲ್‌ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್‌ಅನ್ನು ಸ್ಥಾಪಿಸಿ ಸುಮಾರು 250ಕ್ಕೂ ಹೆಚ್ಚು ರೋಗಿಗಳನ್ನು ಅಲ್ಲಿ ಐಸೋಲೇಷನ್ ಮಾಡಲಾಗುತ್ತಿತ್ತು.
ತೀವ್ರ ರೋಗ ಲಕ್ಷಣ ಉಳ್ಳವರಿಗೆ ಜಿಲ್ಲಾಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿತ್ತು.ಹೋಂ ಐಸೋಲೇಷನ್‌ಗೆ ತೆರಳುವವರು ಕಡಿಮೆಇದ್ದರು. ಆರಂಭದ ಮೂರು ತಿಂಗಳು ಹೋಂ ಐಸೋಲೇಷನ್‌ಗಿಂತ ಕೇರ್ ಸೆಂಟರ್‌ನಲ್ಲೇ ಹೆಚ್ಚು ಜನರಿದ್ದರು.ಸೋಂಕಿತರು ಪ್ರತ್ಯೇಕವಾಗಿ ಐಸೋಲೇಟ್ ಆಗುತ್ತಿದ್ದುದರಿಂದ ಸೋಂಕು ಹೆಚ್ಚು ಹರಡುವುದುನಿಯಂತ್ರಣದಲ್ಲಿತ್ತು.ಆದರೆ ಈ ಬಾರಿ, ಜಿಲ್ಲೆಯಲ್ಲಿ ಸರ್ಕಾರಿಎಂಜಿನಿಯರಿಂಗ್ ಕಾಲೇಜ್, ವೈದ್ಯಕೀಯ ಕಾಲೇಜಿನಕೋವಿಡ್ ಕೇರ್ ಸೆಂಟರ್ ಇಲ್ಲ! ಅಥವಾ ಅಲ್ಲಿತರಗತಿಗಳು ನಡೆಯುತ್ತಿದ್ದುದರಿಂದ ಕೋವಿಡ್‌ಸೆಂಟರ್ ಮಾಡಲಾಗದಿದ್ದರೆ ಬೇರೆಡೆಯೂ ಕೋವಿಡ್‌ಕೇರ್ ತೆರೆಯಲಿಲ್ಲ.ಹೀಗಾಗಿ ಕಡಿಮೆ ಸೋಂಕು ಲಕ್ಷಣಉಳ್ಳವರು ಮನೆಯಲ್ಲೇ ಐಸೋಲೇಷನ್ ಆಗಲು,ಅಗತ್ಯವಿದ್ದವರು ಕೋವಿಡ್ ಆಸ್ಪತ್ರೆಗೆ ದಾಖಲಾಗಲುಸೂಚಿಸಲಾಗುತ್ತಿದೆ.
ಹೋಂ ಐಸೋಲೇಷನ್ ಪ್ರಕರಣ ಹೆಚಳಕ್ಚ ಕ್ಕೆ ಾರಣ?:ಹೀಗಾಗಿ, ಹೆಚ್ಚಿನ ಜನರು ಮನೆಯಲ್ಲೇ ಐಸೋಲೇಷನ್ ಆಗುತ್ತಿದ್ದಾರೆ. ಹೀಗೆ ಮನೆಯಲ್ಲೇ ಇದ್ದು ಚಿಕಿತ್ಸೆಪಡೆಯುವ ಸೋಂಕಿತರು, ಪ್ರತ್ಯೇಕ ಕೋಣೆಯಲ್ಲಿರಬೇಕು. ಅವರ ಸಂಪರ್ಕ ಮನೆ ಯವರಿಗೆ ಆಗಬಾರದು. ಆದರೆ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಪಾಡಿಕೊಳ್ಳಿ ಎಂಬ ಸರಳ ನಿಯಮವನ್ನೇ ಅನುಸರಿಸದಜನರು, ಮನೆಯಲ್ಲಿ ಸೋಂಕಿತರೊಂದಿಗೆ ಸೂಕ್ತಅಂತರ ಕಾಪಾಡಿ ಕೊಳ್ಳುವುದನ್ನು ಕಟ್ಟುನಿಟ್ಟಾಗಿಪಾಲಿಸುತ್ತಾರೆಂಬ ಯಾವ ಗ್ಯಾರಂಟಿಯೂ ಇಲ್ಲ.ಅಲ್ಲದೇ ಎರಡನೇ ಅಲೆಯ ರೂಪಾಂತರಿ ವೈರಸ್‌ಬಹಳ ಬೇಗನೆ ಹರಡುವುದರಿಂದ ಮನೆಯ ಇತರಸದಸ್ಯರಿಗೂ ಪಾಸಿಟಿವ್ ಆಗುತ್ತಿದೆ.
ಸೋಂಕುಇರುವವರಿಗೆ ಸೋಂಕು ಪತ್ತೆ ಪರೀಕ್ಷೆ ನಡೆಸಿ ಫಲತಾಂಶಬರುವವರೆಗೆ ಅವರು ಸಾರ್ವಜನಿಕ ಸ್ಥಳಗಳಲ್ಲಿಓಡಾಡಿ, ಕೆಮ್ಮಿ, ಸೀನುವ ಮೂಲಕ ಹಲವರಿಗೆಸೋಂಕು ಹರಡಿರುತ್ತಾರೆ. ಹೀಗಾಗಿ ಜಿಲ್ಲೆಯಲ್ಲಿಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂಚಾಮರಾಜನಗರ ತಾಲೂಕಿನಲ್ಲಿ ಸೋಂಕು ಹೆಚ್ಚುವರದಿಯಾಗುತ್ತಿದೆ.ಹೀಗಾಗಿ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು,ನಗರದಲ್ಲಿ ಎರಡು ಮೂರು ಕಡೆ ಕೋವಿಡ್ ಕೇರ್‌ಸೆಂಟರ್‌ಗಳನ್ನು ತೆರೆಯಬೇಕಾಗಿದೆ. ಇಲ್ಲವಾದರೆಸೋಂಕು ಇನ್ನಷ್ಟು ತೀವ್ರವಾಗಿ ಹರಡುತ್ತದೆ ಎಂಬುದುಆರೋಗ್ಯ ತಜ್ಞರ ಅಭಿಪ್ರಾಯ.
ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.