ಜನರೇ ಜೋಕೆ, ಸೋಂಕು ತಗುಲಿದರೆ ಆಸ್ಪತ್ರೆ ಸೇರಬೇಕಿಲ್ಲ ಎಂಬ ಭಾವನೆ ಬಿಡಿ


Team Udayavani, Jan 15, 2022, 12:49 PM IST

Untitled-1

ಚಾಮರಾಜನಗರದ ದೊಡ್ಡ ಅಂಗಡಿ ಬೀದಿಯಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿರುವ ಜನರು.

ಚಾಮರಾಜನಗರ: ಕಳೆದ ಒಂದು ವಾರದ ಹಿಂದೆ ದಿನಕ್ಕೆ ಕೇವಲ 2 ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದ ಜಿಲ್ಲೆಯಲ್ಲಿ ಇದೀಗ 175 ಪ್ರಕರಣಗಳು ವರದಿಯಾಗುವ ಹಂತಕ್ಕೆ ಬಂದಿದೆ.

545 ಸಕ್ರಿಯ ಪ್ರಕರಣಗಳಿದ್ದು, 172 ಮಂದಿಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ತೀವ್ರತೆ ಮುಂದುವರಿದರೆ ಇನ್ನು ಹತ್ತೇ ದಿನದಲ್ಲಿ ಜಿಲ್ಲೆಯ ಪ್ರತಿನಿತ್ಯದ ಪ್ರಕರಣಗಳ ಸಂಖ್ಯೆ ಒಂದು ಸಾವಿರದ ಹತ್ತಿರಕ್ಕೆ ಬರುವ ಆತಂಕ ಎದುರಾಗಿದೆ. ಜ. 6ರಂದು ಜಿಲ್ಲೆಯಲ್ಲಿ 2 ಪ್ರಕರಣ ಗಳು ವರದಿಯಾಗಿದ್ದವು. ಅಂದು ಇಡೀ ಜಿಲ್ಲೆಯಲ್ಲಿದ್ದುದು ಕೇವಲ 8 ಸಕ್ರಿಯ ಪ್ರಕರಣಗಳು. ಈಗ ಎಂಟೇ ದಿನದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 545 ಕ್ಕೇರಿದೆ.

ಜ. 8ರಂದು 9 ಪ್ರಕರಣಗಳು ವರದಿಯಾದವು. 9ರಂದು ಏಕಾಏಕಿ 26 ಪ್ರಕರಣಗಳು ವರದಿಯಾದವು. 10ರಂದು 40 ಪ್ರಕರಣಗಳು, 11 ರಂದು 86 ಪ್ರಕರಣಗಳು ವರದಿಯಾದವು. ಜ.12ರಂದು ನಿತ್ಯದ ಪ್ರಕರಣಗಳು ನೂರನ್ನು ದಾಟಿದವು. ಅಂದು 106 ಪ್ರಕರಣಗಳು ವರದಿಯಾದವು. ಜ.13ರಂದು ಭಾರೀಜಿಗಿತ ಕಂಡು 176 ಪ್ರಕರಣಗಳು ವರದಿಯಾದವು. ಜ. 14ರಂದು 106 ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಸಚಿವ ಡಾ. ಸುಧಾಕರ್‌ ಹೇಳಿರುವಂತೆ 3ನೇ ಅಲೆಯಲ್ಲಿ ಕೋವಿಡ್‌ ಪ್ರಕರಣಗಳು ಪ್ರತಿ ಎರಡು ದಿನಕ್ಕೊಮ್ಮೆ ದ್ವಿಗುಣವಾಗುತ್ತಿದ್ದು, ಇದೇ ಟ್ರೆಂಡ್‌ ಮುಂದುವರಿದರೆ ಜ. 15ರಂದು 300ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಓಂ ಶಕ್ತಿ ಯಾತ್ರಾ ಸ್ಥಳಕ್ಕೆ ಹೋಗಿದ್ದವರಲ್ಲಿ ಸೋಂಕು ಕಂಡು ಬಂದಿರುವ 150 ಪ್ರಕರಣಗಳು. ಮತ್ತು ಒಡೆಯರಪಾಳ್ಯ ಟಿಬೆಟಿಯನ್‌ ಕ್ಯಾಂಪ್‌ನಲ್ಲಿ 100 ಪ್ರಕರಣಗಳು ವರದಿಯಾಗಿವೆ.

ಸೋಂಕಿತರು ಆಸ್ಪತ್ರೆಗೆ ದಾಖಲು, ಆಕ್ಸಿಜನ್‌ ಚಿಕಿತ್ಸೆ :

ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆ ಎಂದು ಜನರು ಮೈಮರೆಯುತ್ತಿದ್ದಾರೆ. ಆದರೆ ವಾಸ್ತವ ಸ್ಥಿತಿ ಬೇರೆಯೇ ಇದೆ. ಕಳೆದ ನಾಲ್ಕೈದು ದಿನಗಳವರೆಗೂ ಕೋವಿಡ್‌ ಸೋಂಕಿತರು ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಈಗ ಆಸ್ಪತ್ರೆಯಲ್ಲಿ 172 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪೈಕಿ 6 ಮಂದಿಗೆ ಆಕ್ಸಿಜನ್‌ ನೀಡಲಾಗುತ್ತಿದೆ. ಆಕ್ಸಿಜನ್‌ ಅವಲಂಬಿತರಾಗಿರುವವರಲ್ಲಿ 40 ರಿಂದ 60 ವರ್ಷದವರಿದ್ದಾರೆ. ನಗರ ಸಮೀಪದ ಮಾದಾಪುರ ಕೋವಿಡ್‌ ಕೇರ್‌ ಕೇಂದ್ರ ಹಾಗೂ ನಗರದ ಹೊಸ ಹೌಸಿಂಗ್‌ ಬೋರ್ಡ್‌ ಕಾಲೋನಿಬಳಿಯಿರುವ ಮುಕ್ತ ವಿವಿ ಕೋವಿಡ್‌ ಕೇಂದ್ರವನ್ನು ಮತ್ತೆ ತೆರೆಯಲಾಗಿದ್ದು, ಸೋಂಕಿತರಲ್ಲಿ ಕಡಿಮೆ ರೋಗ ಲಕ್ಷಗಳಿರುವವರನ್ನು ಈ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ.

ಮಾಸ್ಕ್ ಕೂಡ ಧರಿಸುತ್ತಿಲ್ಲ  :

ಜಿಲ್ಲೆಯಲ್ಲಿ ಕೋವಿಡ್‌ ತೀವ್ರ ವೇಗದಲ್ಲಿ ಹರಡುತ್ತಿದ್ದರೂ ಜನರು ಇದರ ಬಗ್ಗೆ ನಿರ್ಲಕ್ಷಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿರಬೇಕೆಂಬ ಪರಿಜ್ಞಾನವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೋವಿಡ್‌ ಜಾಗೃತಿ ಪಡೆ, ನಗರಸಭೆ ಸಿಬ್ಬಂದಿ ದಂಡ ವಿಧಿಸುತ್ತಿದ್ದಾರೆ ಎಂಬ ವೇಳೆ ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಬಳಿಕ ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಸೋಂಕಿತರು ತಮ್ಮ ಮಧ್ಯದಲ್ಲೇ ಇದ್ದರೂಗೊತ್ತಿಲ್ಲದಂತೆ ಉಳಿದವರಿಗೆ ಹರಡುತ್ತಿದೆ. ಇನ್ನೂ ಭೌತಿಕ ಅಂತರವಂತೂ ಇಲ್ಲವೇ ಇಲ್ಲದಂತಾಗಿದೆ. 2ನೇ ಅಲೆಯಲ್ಲಿ ಸ್ವಲ್ಪಕಡೆಯಾದರೂ ಭೌತಿಕ ಅಂತರದ ಪಾಲನೆ ಕಾಣಬಹುದಿತ್ತು. ಈಗ ಭೌತಿಕ ಅಂತರ ಕಾಪಾಡಿ ಎಂದರೆ ತಮಾಷೆ ವಿಷಯದಂತಾಗಿದೆ.

71 ಮಕ್ಕಳಿಗೆ ಕೋವಿಡ್‌ :  ಒಟ್ಟು ಪ್ರಕರಣಗಳ ಪೈಕಿ 20ವರ್ಷಕ್ಕಿಂತ ಕಡಿಮೆ ವಯಸ್ಸಿನವರು 71 ಮಂದಿ ಇದ್ದಾರೆ. ಇದರಲ್ಲಿ 10 ವರ್ಷದಿಂದ20 ವರ್ಷದವರೆಗಿನ 53 ಮಂದಿ ಹಾಗೂ 10 ವರ್ಷಕ್ಕಿಂತ ಕಡಿಮೆ ಇರುವ 18 ಮಕ್ಕಳಿದ್ದಾರೆ.

ಪ್ರತಿ ದಿನ ಒಂದೂವರೆ ಸಾವಿರ ಇದ್ದ ಪರೀಕ್ಷೆಯ ಸಂಖ್ಯೆಯನ್ನು ಐದು ಸಾವಿರಕ್ಕೆಏರಿಸಲಾಗಿದೆ. ಶಾಲೆಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 16 ಕೋವಿಡ್‌ ಕೇರ್‌ ಕೇಂದ್ರಗಳಿವೆ. ಈಗ 2 ಕಾರ್ಯನಿರ್ವಹಿಸುತ್ತಿವೆ.ಪ್ರಕರಣ ಹೆಚ್ಚಾದಂತೆ ತೆರೆಯಲಾಗುವುದು. ಡಾ. ವಿಶ್ವೇಶ್ವರಯ್ಯ, ಜಿಲ್ಲಾ ಆರೋಗ್ಯಾಧಿಕಾರಿ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

1-eewqe

Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Gundlupete: ಬೈಕ್- ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.