ಲಸಿಕೆ ನೀಡುವ ಕಾರ್ಯ ಸಮರ್ಪಕ ನಿರ್ವಹಣೆಗೆ ಸೂಚನೆ
Team Udayavani, May 24, 2021, 6:55 PM IST
ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್ ರೋಗನಿರೋಧಕ ಲಸಿಕೆ ನೀಡುವಕಾರ್ಯವನ್ನು ಯಾವುದೇಗೊಂದಲವಿಲ್ಲದೆ ಸಮರ್ಪಕವಾಗಿ ನಿರ್ವಹಿಸುವಂತೆಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಆರೋಗ್ಯಇಲಾಖೆ,ಕೋವಿಡ್ ತಡೆನಿಟ್ಟಿನಲ್ಲಿನೇಮಕವಾಗಿರುವನೋಡಲ್ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು.ಲಸಿಕೆ ನೀಡುವ ಕಾರ್ಯವನ್ನು ಯೋಜನಾ ಬದ್ಧವಾಗಿ ನಿರ್ವಹಿಸಬೇಕು. ಎಷ್ಟು ಜನರಿಗೆ ಲಸಿಕೆ ನೀಡಬೇಕು ಎಂಬ ಬಗ್ಗೆ ಮೊದಲೇ ಕಾರ್ಯಯೋಜನೆಹಾಕಿಕೊಂಡು ಮಾಹಿತಿ ನೀಡಬೇಕು.
ಟೋಕನ್‌ನೀಡುವಿಕೆ ಇಲ್ಲವೇ ಮೊದಲು ಬಂದವರಿಗೆ ಆದ್ಯತೆನೀಡುವ ಕ್ರಮ ಅನುಸರಿಸಬೇಕು. ಎಲ್ಲಿಯೂಗೊಂದಲಗಳಿಗೆ ಅವಕಾಶವಾಗಬಾರದು ಎಂದರು.
ಯಾವ ವಯೋಮಾನದವರಿಗೆ ಲಸಿಕೆ ಎಲ್ಲೆಲ್ಲಿನೀಡಲಾಗುತ್ತದೆ ಎಂಬ ಬಗ್ಗೆ ಪೂರ್ವಭಾವಿಯಾಗಿಮಾಹಿತಿ ಪ್ರಚುರಪಡಿಸಬೇಕು. ಲಸಿಕೆ ನೀಡಲಿರುವಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕುರಿತುವಿವರ ನೀಡಬೇಕು. ಇದರಿಂದ ಜನ ಅನವಶ್ಯಕವಾಗಿಅಲೆದಾಡುವುದು ತಪ್ಪಲಿದೆ. ವೇಳಾಪಟ್ಟಿ ಸಿದ್ಧಪಡಿಸಿಅ ಪ್ರಕಾರವೇ ಲಸಿಕೆಕೈಗೊಳ್ಳಬೇಕೆಂದು ತಿಳಿಸಿದರು.
ಸಮಾಲೋಚನೆ:ಹೋಂ ಐಸೋಲೇಷನ್‌ನಲ್ಲಿರುವಸೋಂಕಿತರ ಬಗ್ಗೆ ವಿಶೇಷ ಗಮನ ನೀಡಬೇಕು.ಟ್ರಯೇಜ್ ಹಂತದಲ್ಲಿಯೇ ಮಾಹಿತಿ ದಾಖಲುಮಾಡಿ ತಕ್ಷಣವೇ ಸೋಂಕಿತರಿಗೆ ಟೆಲಿಮಾನಿಟರಿಂಗ್‌ಮೂಲಕ ನಿಗಾ ವಹಿಸಬೇಕು. ಔಷಧ ಉಪಚಾರ,ಅನುಸರಿಸಬೇಕಿರುವ ಮುಂಜಾಗ್ರತೆ ಬಗ್ಗೆ ತಿಳಿಸಿಕೊಡಬೇಕು.
ಸೋಂಕಿತರೊಂದಿಗೆ ದೂರವಾಣಿ ಮೂಲಕಪ್ರತಿನಿತ್ಯವೂ ಸಂಪರ್ಕದಲ್ಲಿದ್ದು,ಗುಣಮುಖರಾಗುವವರೆಗೂ ಅಗತ್ಯ ಮಾರ್ಗದರ್ಶನ, ಸಲಹೆ, ಸಮಾಲೋಚನೆ ಮಾಡಬೇಕು ಎಂದರು.ಹೊಣೆಗಾರಿಕೆಇರಲಿ:ಗ್ರಾಪಂವ್ಯಾಪ್ತಿಯಲ್ಲಿಕೋವಿಡ್‌ಮುಂಜಾಗ್ರತಾಕ್ರಮಗಳ ಸಂಬಂಧ ಜಾಗೃತಿ ಕಾರ್ಯಆಯೋಜನೆ ಮಾಡಬೇಕು.130 ಗ್ರಾಪಂಗೂ ಜಾಗೃತಿಕಾರ್ಯ ಉಸ್ತುವಾರಿ ನಿರ್ವಹಿಸುವ ಸಲುವಾಗಿಕಾಲೇಜು ಉಪನ್ಯಾಸಕರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರನ್ನು ಆಯಾ ಗ್ರಾಪಂ ಕ್ಯಾಪ್ಟನ್‌ಗಳೆಂದುನಿಯೋಜನೆಮಾಡಲಾಗುತ್ತದೆ.ಮೇಲುಸ್ತುವಾರಿಗಾಗಿ19ಪ್ರಾಂಶುಪಾಲರನ್ನು ನೋಡಲ್‌ಅಧಿಕಾರಿಗಳನ್ನಾಗಿನೇಮಕ ಮಾಡುತ್ತಿದ್ದು, ಈ ಅರಿವು ಮೂಡಿಸುವಕಾರ್ಯವನ್ನು ಅತ್ಯಂತ ಹೊಣೆಗಾರಿಕೆಯಿಂದ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಎಂ.ಸಿ.ರವಿ, ವೈದ್ಯಕೀಯ ಕಾಲೇಜಿನ ಡೀನ್‌ಡಾ.ಸಂಜೀವ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಟಿ. ಜವರೇಗೌಡ, ಪದವಿ ಪೂರ್ವಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಮೂರ್ತಿ,ನೋಡಲ್ ಅಧಿಕಾರಿಗಳಾದ ಕಾವೇರಿ ವನ್ಯಜೀವಿವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್,ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ.ನಾಗರಾಜು,ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ,ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕವೀರಭದ್ರಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿಶಿವಕುಮಾರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.