ಹಳ್ಳಿಗಳಲ್ಲಿ ಮನೆ ಆರೈಕೆ ಕೈಬಿಟ್ಟ ಬಳಿಕ ಸೋಂಕು ನಿಯಂತ್ರಣ


Team Udayavani, Jun 5, 2021, 6:00 PM IST

covid news

ಅರಣ್ಯ ಪ್ರದೇಶವೇ ಹೆಚ್ಚಿರುವ ಗ್ರಾಮಗಳನ್ನುಳ್ಳ ವಿಧಾನಸಭಾ ಕ್ಷೇತ್ರ ಹನೂರು. ನಾಡಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶ, ಇತ್ತ ಬಿಳಿಗಿರಿರಂಗನಬೆಟ್ಟದ ಅರಣ್ಯದಂಚಿನ ಪ್ರದೇಶ

ಹನೂರು ಕ್ಷೇತ್ರ ವ್ಯಾಪ್ತಿಗೆ ಬರುತ್ತವೆ. ಅರಣ್ಯದಂಚಿನ ಜನರು, ಬುಡಕಟ್ಟು ಜನರ ಪೋಡುಗಳು ಸಹ ಇದರಲ್ಲಿ ಸೇರಿವೆ. ಕೋವಿಡ್‌-19 ಪರಿಸ್ಥಿತಿಯನ್ನು ಶಾಸಕ ಆರ್‌. ನರೇಂದ್ರ ಹೇಗೆ ನಿಭಾಯಿಸುತ್ತಿದ್ದಾರೆ?

ಕೋವಿಡ್‌ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿರುವ ಇಂಥ ಕಠಿಣ ಸಂದರ್ಭದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಅವರ ಪ್ರಯತ್ನವೇನು? ಎಂಬುದರ ಬಗ್ಗೆ ಉದಯವಾಣಿಯ ಕಿರು ಸಂದರ್ಶನ.

ನಿಮ್ಮ ಕ್ಷೇತ್ರದಲ್ಲಿ ಕೋವಿಡ್ಪರಿಸ್ಥಿತಿ ಹೇಗಿದೆ?

ಮೊದಲು ಹೆಚ್ಚಿತ್ತು. 15 ದಿನಗಳ ಹಿಂದೆ ಬಹಳಪ್ರಕರಣಗಳಿದ್ದವು. ಅನೇಕ ಕ್ರಮಗಳನ್ನು ಕೈಗೊಂಡಬಳಿಕ ನಿಯಂತ್ರಣಕ್ಕೆ ಬರುತ್ತಿದೆ. ನಮ್ಮಲ್ಲಿ ಕೋವಿಡ್‌ಹೆಚ್ಚಾಗಲು ಸರ್ಕಾರ ಮಾಡಿದ ತಪ್ಪು ನಿರ್ಧಾರಕಾರಣ. ಹೋಂ ಐಸೋಲೇಷನ್‌ಮಾಡಬಾರದಿತ್ತು. ಇದರಿಂದಮನೆಯವರಿಗೆಲ್ಲ ಹಬ್ಬಿ ಅಕ್ಕಪಕ್ಕದಜನರಿಗೆ ಹಬ್ಬಿತು. ಚಾಮರಾಜ ನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿ ಜನ್‌ ದುರಂತ ನಡೆದ ನಂತರ ಜಿಲ್ಲಾ ಟಾಸ್ಕ್ಫೋರ್ಸ್‌ಸಭೆಗಳನ್ನು ನಡೆಸಿದರು. ನಾವು ಸಲಹೆ ನೀಡಿಪಾಸಿಟಿವ್‌ ಬಂದವರನ್ನು ಮನೆಯಲ್ಲಿರಿಸಬಾರದು.ಕೋವಿಡ್‌ ಕೇರ್‌ ಸೆಂಟರ್‌ಗೆ ಕಳುಹಿಸಬೇಕು ಎಂದುಸಲಹೆ ನೀಡಿದೆವು. ಟೆಸ್ಟಿಂಗ್‌ ಜಾಸ್ತಿ ಮಾಡಬೇಕುಎಂದು ಸಲಹೆ ನೀಡಿದೆವು. ತಾಲೂಕು ಮಟ್ಟದಲ್ಲಿಟಾಸ್ಕ್ ಫೋರ್ಸ್‌ ನಮ್ಮದೇ ಕಾರ್ಯಪಡೆ ಮಾಡಿ,ವಾರಕ್ಕೆ 2 ಬಾರಿ ಮೀಟಿಂಗ್‌ ಮಾಡಿದೆವು.ಪ್ರತಿಯೊಬ್ಬರನ್ನು ಕೋವಿಡ್‌ ಕೇರ್‌ಗೆ ಸೇರಿಸಬೇಕೆಂದು ಹೇಳಿದ್ದರಿಂದ 260 ಜನ ಕೋವಿಡ್‌ ಕೇರ್‌ನಲ್ಲಿದ್ದಾರೆ. 500 ಮಂದಿಗುಣಮುಖರಾಗಿದ್ದಾರೆ. ಹನೂರು ಕ್ಷೇತ್ರದಲ್ಲಿ150 ಪ್ರಕರಣ ಇದ್ದವು, ಈಗ 40-50 ಪ್ರಕರಣಬರುತ್ತಿವೆ. ಹನೂರು ಟೌನ್‌ನಲ್ಲಿ ಜಾಸ್ತಿ ಇದ್ದವು. ಈಗಬಹಳ ಕಡಿಮೆ ಪ್ರಕರಣ ಇವೆ.

ಸೋಲಿಗರು, ಬೇಡಗಂಪಣರು ಕಾಡಿನೊಳಗೆವಾಸಿಸುತ್ತಿದ್ದಾರೆ.  ಅಲ್ಲಿನ ಪರಿಸ್ಥಿತಿ ಹೇಗಿದೆ?

ಸೋಲಿಗರಿಗೆ ಸರ್ಕಾರದಿಂದ ಪಡಿತರ ವಿತರಿಸಲಾಗುತ್ತಿದೆ. ಪೌಷ್ಟಿಕ ಆಹಾರವನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ. 3 ತಿಂಗಳಿಗೊಮ್ಮೆ ಅಕ್ಕಿ, ರಾಗಿ, ದ್ವಿದಳ ಧಾನ್ಯಗಳು, ಮೊಟ್ಟೆ, ಬೆಲ್ಲ ತುಪ್ಪ ಇತ್ಯಾದಿ ನೀಡಲಾಗುತ್ತಿದೆ.ಸೋಲಿಗರಿಗೆ ಆಹಾರದ ಕೊರತೆ ಇಲ್ಲ.ಆದರೆ ಕಾಡೊಳಗಿನ ಗ್ರಾಮಗಳಲ್ಲಿರುವಬೇಡಗಂಪಣರಿಗೆ ಸ್ವಲ್ಪ ತೊಂದರೆಯಿದೆ. ಕೆಲಸಕ್ಕೆಹೋಗುತ್ತಿದ್ದರು. ವ್ಯಾಪಾರ ಮಾಡುತ್ತಿದ್ದರು.ಅನೇಕರು ಮಲೆ ಮಹದೇಶ್ವರ ದೇವಾಲಯದಲ್ಲಿಕೆಲಸ ಮಾಡುತ್ತಿದ್ದರು. ಈಗ ದೇವಾಲಯದಲ್ಲಿ ಕೆಲಸಇಲ್ಲ. ಬೇಡಂಪಣ ಕುಟುಂಬಗಳಿಗೆ ತಾಲೂಕುಆಡಳಿತದಿಂದ ನೆರವು ನೀಡಲಾಗುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ನೆರವು ನೀಡುತ್ತಿವೆ. ಅವರಿಗೆ ಇನ್ನೂಹೆಚ್ಚಿನ ನೆರವಿನ ಅಗತ್ಯವಿದೆ.

ಕೋವಿಡ್ಸೋಂಕನ್ನು ನಿಯಂತ್ರಿಸಲುಆರೋಗ್ಯ ಇಲಾಖೆಗೆ ಪೂರಕವಾಗಿ ಶಾಸಕರಾಗಿ ನೀವು ಮಾಡುತ್ತಿರುವ ಕೆಲಸಗಳೇನು?

ಗ್ರಾಮ ಪಂಚಾಯಿತಿಗೊಂದು ಟಾಸ್ಕ್ಫೋರ್ಸ್‌ಮಾಡಿದ್ದೇನೆ. ಗ್ರಾಪಂ ಸದಸ್ಯರು, ವೈದ್ಯರು, ಆಶಾ,ಅಂಗನವಾಡಿ ಕಾರ್ಯಕರ್ತರು ಮನೆ ಸರ್ವೆ ಮಾಡಿ,ಪಾಸಿಟಿವ್‌ ಬಂದವರನ್ನು ಟ್ರಯಾಜ್‌ನಿಂದ ಕಡ್ಡಾಯವಾಗಿ ಕೋವಿಡ್‌ ಕೇರ್‌ಗೆ ಕಳುಹಿಸಲಾಗುತ್ತಿದೆ. ಟೆಸ್ಟಿಂಗ್‌ ಜಾಸ್ತಿ ಮಾಡಿಸಿದ್ದೇನೆ.ನಾನು ದಾನಿಗಳಿಗೆ ಮನವಿ ಮಾಡಿ, ಟಾಟಾ ಸ್ಮಾರಕಸಂಸ್ಥೆಯಿಂದ 24 ಆಕ್ಸಿಜನ್‌ ಸಾಂದ್ರಕಗಳನ್ನು ಹನೂರುತಾಲೂಕಿಗೆ ನೀಡಿದ್ದೇನೆ. 50 ಪಲ್ಸ್‌ ಆಕ್ಸಿಮೀಟರ್‌ಗಳನ್ನು ಆಶಾ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಡಿಸಿ ದ್ದೇನೆ. 5000 ಎನ್‌ 95 ಮಾಸ್ಕ್ಗಳನ್ನುಕೊರೊನಾ ವಾರಿಯರ್ಸ್‌ಗೆ ನೀಡಲಾಗಿದೆ.ಗ್ರಾಮ ಪಂಚಾಯಿತಿ 17 ಟಾಸ್ಕ್ ಫೋರ್ಸ್‌ಸಭೆಗಳನ್ನು ನಡೆಸಿದ್ದೇನೆ. ತಿಳಿವಳಿಕೆ ನೀಡಲಾಗುತ್ತಿದೆ.5 ತಾಲೂಕು ಮಟ್ಟದ ಸಭೆಗಳನ್ನು ನಡೆಸಿದ್ದೇನೆ.ವಾರಕ್ಕೆರಡು ದಿನ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆಭೇಟಿ ನೀಡುತ್ತಿದ್ದೇನೆ.

ಕೋವಿಡ್ನಿಯಂತ್ರಣದ ಕೆಲಸಗಳಿಗಾಗಿ ನಿಮ್ಮಶಾಸಕರ ನಿಧಿಯಿಂದ ಎಷ್ಟು ಹಣ ನೀಡಿದ್ದೀರಿ?

ಶಾಸಕರ ಅನುದಾನದಿಂದ 24 ಲಕ್ಷ ರೂ.ನೀಡಿದ್ದೇನೆ. ಇದರಲ್ಲಿ ಆ್ಯಂಬುಲೆನ್ಸ್‌ ಖರೀದಿಸಲಾಗುತ್ತಿದೆ. ಮಾಜಿ ಸಂಸದ ಧ್ರುವನಾರಾಯಣ ಅವರಿಗೆಮನವಿ ಮಾಡಿ, ಅವರಿಂದ ಇನ್ನೊಂದು ಆ್ಯಂಬುಲೆನ್ಸ್‌ಕೊಡಿಸಿದ್ದೇನೆ. ಇನ್ನೂ 26 ಲಕ್ಷ ರೂ. ಅನುದಾನ ಇದೆ.ಕೋವಿಡ್‌ ಸಂಬಂಧಿ ಕೆಲಸಗಳಿಗೆ ಹಣ ಬೇಕಾದರೆ,ಕೂಡಲೇ ಅದಕ್ಕೆ ನೀಡುತ್ತೇನೆ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

Gundlupet Bus Stand: ಮೂಲ ಸೌಲಭ್ಯ ವಂಚಿತ ಬೇಗೂರು ಬಸ್‌ ನಿಲ್ದಾಣ

1-eewqe

Kollegala; ಮಾಜಿ ಶಾಸಕ ಎಸ್.ಜಯಣ್ಣ ಅಂತಿಮ ದರ್ಶನ ಪಡೆದ ಸಿಎಂ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.