ಕೋವಿಡ್ ಪರೀಕ್ಷೆಗೆ ಹಿಂಜರಿಕೆ: ಸೋಂಕು ಹೆಚ್ಚಳ
Team Udayavani, Jan 23, 2022, 1:51 PM IST
ಚಾಮರಾಜನಗರ: ಜಿಲ್ಲೆಯಲ್ಲಿ ವ್ಯಾಪಕವಾಗಿ ನೆಗಡಿ, ಕೆಮ್ಮು, ಜ್ವರ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ಪರೀಕ್ಷೆ ಮಾಡಿಸಿದರೆ ಕೋವಿಡ್ ದೃಢವಾಗಬಹುದೆಂದು ಹೆದರಿ ಅನೇಕರು ಖಾಸಗಿ ಕ್ಲಿನಿಕ್‌ಗಳಿಗೆ ತೆರಳಿಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥ ಜನರು ಕೋವಿಡ್ ಪರೀಕ್ಷೆ ಮಾಡಿಸದೇ,ಪ್ರತ್ಯೇಕವಾಗಿಯೂ ಇರದ ಕಾರಣ ಸಮುದಾಯದಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ.
ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಕೋವಿಡ್ ಮೂರನೇ ಅಲೆಆರಂಭವಾಗಿದೆ. 15-20 ದಿನಗಳ ಹಿಂದೆ ಕೇವಲ 4 ಸಕ್ರಿಯಪ್ರಕರಣಗಳಿದ್ದ ಜಿಲ್ಲೆಯಲ್ಲಿ ಶನಿವಾರ 1911 ಸಕ್ರಿಯ ಪ್ರಕರಣಗಳಿವೆ.ಶನಿವಾರ ಒಂದೇ ದಿನ 419 ಮಂದಿ ಸೋಂಕಿತರಾಗಿದ್ದಾರೆ. ಜಿಲ್ಲೆಯಆಸ್ಪತ್ರೆಗಳಲ್ಲಿ 106 ಮಂದಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಪೈಕಿ ಐಸಿಯುನಲ್ಲಿ 11 ಮಂದಿ ದಾಖಲಾಗಿದ್ದಾರೆ. ಶನಿವಾರ ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ.
ಪ್ರತಿದಿನದ ಪ್ರಮಾಣ ಎರಡು ದಿನಕ್ಕೊಮ್ಮೆ ದ್ವಿಗುಣಗೊಳ್ಳುತ್ತಿದೆ. ಸೋಂಕು ವ್ಯಾಪಕಹೆಚ್ಚಳವಾಗಲು, ಜನರು ಕೋವಿಡ್ ಪರೀಕ್ಷೆಮಾಡಿಸಿಕೊಳ್ಳದೇ ಹಿಂಜರಿದು, ಸ್ವಯಂಚಿಕಿತ್ಸೆ, ಖಾಸಗಿ ಕ್ಲಿನಿಕ್ ಚಿಕಿತ್ಸೆ ಪಡೆದು, ಎಲ್ಲೆಂದರಲ್ಲಿ ಓಡಾಡುತ್ತಿರುವುದುಪ್ರಮುಖ ಕಾರಣವಾಗಿದೆ.
ವಾರದಿಂದೀಚೆಗೆ ರೋಗ ಹೆಚ್ಚಳ: ವಾರದಿಂದೀಚೆಗೆ ಜಿಲ್ಲೆಯಲ್ಲಿ ನೆಗಡಿ,ಕೆಮ್ಮು, ಜ್ವರ, ಮೈಕೈ ನೋವಿನಂತಹ ರೋಗ ಲಕ್ಷಣಗಳು ಅನೇಕ ಮಂದಿಯಲ್ಲಿ ಕಾಣಸಿಕೊಳ್ಳುತ್ತಿದೆ. ಕೋವಿಡ್ ಪರೀಕ್ಷೆ ಮಾಡಿಸಿದರೆ ಪಾಸಿಟಿವ್ ಬರಬಹುದೆಂದು ಹೆದರಿ ಅನೇಕರು ಮೆಡಿಕಲ್‌ಸ್ಟೋರ್‌ಗಳಿಗೆ ತೆರಳಿ ಪ್ಯಾರಸಿಟಮಾಲ್, ಕೆಮ್ಮಿನ ಸಿರಪ್ ಪಡೆದುಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಅನೇಕರು ಖಾಸಗಿ ವೈದ್ಯರಕ್ಲಿನಿಕ್‌ಗಳಿಗೆ ತೆರಳಿ ವೈದ್ಯರ ಸಲಹಾ ಚೀಟಿ ಪಡೆದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೀಗೆ ಸ್ವಯಂ ಹಾಗೂ ಖಾಸಗಿ ವೈದ್ಯರ ಬಳಿ ಚಿಕಿತ್ಸೆ ಪಡೆದವರು, ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಒಂದು ವಾರ ಐಸೋಲೇಟ್‌ಆಗಿದ್ದರೆ, ಸಮಸ್ಯೆಯಿಲ್ಲ. ಆದರೆ, ನೆಗಡಿ, ಮೈಕೈ ನೋವು ಅಷ್ಟೇ,ನನಗೇನೂ ಆಗಿಲ್ಲ ಎಂಬ ಉದಾಸೀನ ಭಾವನೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿ ಸೋಂಕು ಹೆಚ್ಚು ಹರಡಲು ಕಾರಣರಾಗುತ್ತಿದ್ಧಾರೆ ಎಂದು ವೈದ್ಯಾಧಿಕಾರಿಯೊಬ್ಬರು ಹೇಳುತ್ತಾರೆ.
ಆರೋಗ್ಯವಂತರಿಗೂ ಸೋಂಕು: ಯುವಕರು, ಆರೋಗ್ಯವಂತರು ಹೀಗೆ ಸೋಂಕು ತಗುಲಿಸಿಕೊಂಡು ಮನೆಯಲ್ಲಿರುವ ವೃದ್ಧರಿಗೆ, ಇತರ ಕಾಯಿಲೆಗಳಿರುವವರಿಗೆ ಹರಡುತ್ತಾರೆ. ಇದು ವೃದ್ಧರ ಗಂಭೀರಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ಹೆಚ್ಚಿನ ಜನರು ಅರ್ಥ ಮಾಡಿಕೊಳ್ಳದೇ ನಿರ್ಲಕ್ಷ್ಯ ವಹಿಸುತ್ತಿದಾರೆ ಎನ್ನುತ್ತಾರೆ ಹಿರಿಯ ವೈದ್ಯರು. ಕಾಗದ ರೂಪದಲ್ಲೇ ಉಳಿದ ಆದೇಶ: ಕೋವಿಡ್ ಗುಣ ಲಕ್ಷಣವನ್ನೇಹೊಂದಿರುವವರು ಸಾಮಾನ್ಯ ಕಾಯಿಲೆಯಿದ್ದರೂ ಕೋವಿಡ್ ಟೆಸ್ಟ್‌ಮಾಡಿಸಬೇಕು. ನಂತರವಷ್ಟೇ ಚಿಕಿತ್ಸೆ ನೀಡಬೇಕು ಎಂಬುದಾಗಿ ಜಿಲ್ಲಾಡಳಿತ ಸೂಚನೆ ನೀಡಿದೆ. ಮೆಡಿಕಲ್ ಸ್ಟೋರ್‌ಗಳಲ್ಲಿಜ್ವರ, ಕೆಮ್ಮು , ನೆಗಡಿ ಔಷಧಿಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೇನೀಡಬಾರದೆಂದು ಆದೇಶಿಸಲಾಗಿದೆ. ಆದರೆ ಈ ಆದೇಶಗಳು ಕಾಗದ ರೂಪದಲ್ಲೇ ಉಳಿದಿವೆ.
ಸೋಂಕಿತರಿಗೆ ಚಿಕಿತ್ಸೆ, ಉಚಿತ ಔಷಧಿ ಕಿಟ್ ವಿತರಣೆ : ಅನೇಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ದಿನ ಸರಾಸರಿ 3 ಸಾವಿರ ಪರೀಕ್ಷೆ ಮಾಡಲಾಗುತ್ತಿದೆ. ಪಾಸಿಟಿವ್ ಫಲಿತಾಂದ ಬಂದವರಿಗೆ ಐಸೋಲೇಟ್‌ಆಗಿದ್ದು ಚಿಕಿತ್ಸೆ ಪಡೆಯಲು ಸಲಹೆ ಹಾಗೂ ಉಚಿತ ಔಷಧಿ ಕಿಟ್ ನೀಡಲಾಗುತ್ತಿದೆ. ಇದು ಕೋವಿಡ್ ತಡೆಗೆ ಸಹಾಯಕವಾಗಿದೆ.
ಎಲ್ಲೆಲ್ಲಿ ಪರೀಕ್ಷೆ?: ಚಾಮರಾಜನಗರದ ಬಿ. ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜಿಲ್ಲಾಸ್ಪತ್ರೆ, ಎಡಪುರದ
ಸಮೀಪದ ಇರುವ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಗುಂಡ್ಲುಪೇಟೆ ವೃತ್ತದಲ್ಲಿರುವ ನಗರ ಆರೋಗ್ಯ ಕೇಂದ್ರ, ಎಲ್ಲ ತಾಲೂಕು ಆಸ್ಪತ್ರೆಗಳು, ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲದೇ ವಿಶೇಷತಪಾಸಣಾ ಶಿಬಿರಗಳು ಸಾರ್ವಜನಿಕ ಸ್ಥಳಗಳಲ್ಲಿ ನಡೆಯುತ್ತವೆ.
ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿದ್ದರೆ ಗೊಂದಲಬೇಡ. ತಪ್ಪದೇ ಕೋವಿಡ್ ಪರೀಕ್ಷೆಮಾಡಿಸಿ. ಹೆಚ್ಚಿನ ತೊಂದರೆಯಿದ್ದರೆಆಸ್ಪತ್ರೆಗೆ ದಾಖಲಾಗಿ, ಸಾಧಾರಣಲಕ್ಷಣಗಳಿದ್ದರೆ ಮನೆಯಲ್ಲೇ ಚಿಕಿತ್ಸೆಪಡೆಯಿರಿ. ಪ್ರತ್ಯೇಕಕೋಣೆಯಲ್ಲಿದ್ದು ವಿಶ್ರಾಂತಿಪಡೆಯಿರಿ. ಈ ಮೂಲಕಕೋವಿಡ್ ಸೋಂಕು ಹರಡದಿರಲು ನೆರವಾಗಿ. -ಡಾ. ಮಹೇಶ್, ಕೋವಿಡ್ ನೋಡಲ್ ಅಧಿಕಾರಿ.
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.