ಮುಂಬೈ ನಿವಾಸಿಗೆ ಚಾಮರಾಜನಗರದಲ್ಲಿ ಕೋವಿಡ್ ದೃಢ: ಹಸಿರು ವಲಯದಲ್ಲಿ ಮುಂದುವರಿದ ಜಿಲ್ಲೆ
Team Udayavani, Jun 9, 2020, 12:29 PM IST
ಚಾಮರಾಜನಗರ: ಮಹಾರಾಷ್ಟ್ರದ ಮುಂಬೈಯ ನಿವಾಸಿಯಾದ ವೈದ್ಯಕೀಯ ವಿದ್ಯಾರ್ಥಿಯೋರ್ವ ಜಿಲ್ಲೆಗೆ ಬಂದಿದ್ದು, ಆತನಿಗೆ ಕೋವಿಡ್19 ಪಾಸಿಟಿವ್ ದೃಢಪಟ್ಟಿದೆ. ಆದರೆ ಆತ ಮುಂಬೈ ನಿವಾಸಿಯಾದ್ದರಿಂದ ಜಿಲ್ಲೆಯವನು ಎಂದು ಪರಿಗಣಿಸಲಾಗುವುದಿಲ್ಲ. ರಾಜ್ಯದಲ್ಲಿರುವ ಜಿಲ್ಲಾವಾರು ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಇದು ‘ಇತರೆ’ ವರ್ಗಕ್ಕೆ ಸೇರುತ್ತದೆ. ಹಾಗಾಗಿ ಚಾಮರಾಜನಗರ ಜಿಲ್ಲೆ ಈಗಲೂ ಹಸಿರು ವಲಯವಾಗಿಯೇ ಉಳಿದಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಮಾಹಿತಿಯನ್ನು ನೀಡಿದರು.
ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಹೆಚ್ಚಿರುವುದರಿಂದ, ಜಿಲ್ಲೆಯ ಮಾರ್ಟಳ್ಳಿಯ ಪಾಲಿಮೇಡು ಗ್ರಾಮಕ್ಕೆ ಈ ವೈದ್ಯಕೀಯ ವಿದ್ಯಾರ್ಥಿ ಬಂದಿದ್ದ.
ಮುಂಬೈನಿಂದ ಬೆಂಗಳೂರು ಮಾರ್ಗವಾಗಿ ಹೊರಟು ಶುಕ್ರವಾರ ರಾತ್ರಿ ಮಾರ್ಟಳ್ಳಿಯ ಪಾಲಿಮೇಡು ಗ್ರಾಮಕ್ಕೆ ತಾಯಿ ಮತ್ತು ಇಬ್ಬರು ಗಂಡು ಮಕ್ಕಳು ಬಂದಿದ್ದಾರೆ. ಇವರು ಹುಟ್ಟಿ ಬೆಳೆದಿದ್ದು ಮುಂಬೈಯಲ್ಲಿ, ಇವರು ನಮ್ಮ ಜಿಲ್ಲೆಯವರಲ್ಲ. ಮುಂಬೈಯ ಆಧಾರ್ ಕೂಡ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇವರು ಜಿಲ್ಲೆಗೆ ಬರುವಾಗ ಸರ್ಕಾರದ ನಿಯಮದ ಪ್ರಕಾರ ಸೇವಾ ಸಿಂಧುವಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಹಾಗೆ ಮಾಡದೇ ರೈಲಿನಲ್ಲಿ ಬಂದಿದ್ದಾರೆ. ರೈಲ್ವೆಯಿಂದಲೂ ಜಿಲ್ಲೆಗೆ ಮಾಹಿತಿ ನೀಡಿಲ್ಲ.
ಯುವಕನ ಸೋದರ ಮಾವ ಮೂವರನ್ನೂ ಬೆಂಗಳೂರಿನಿಂದ ಶುಕ್ರವಾರ ಕರೆತಂದಿದ್ದಾರೆ. ಯುವಕನ ತಾಯಿಯ ಮನೆ ಪಾಲಿಮೇಡುನಲ್ಲಿದ್ದು ಶುಕ್ರವಾರ ರಾತ್ರಿ ಇದ್ದು, ಶನಿವಾರ ಕೊಳ್ಳೇಗಾಲದ ಫೀವರ್ ಕ್ಲಿನಿಕ್ ನಲ್ಲಿ ಪರೀಕ್ಷಿಸಿ ನಂತರ ಹನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿರಿಸಲಾಗಿದೆ.
ಕೋವಿಡ್ ಪರೀಕ್ಷೆಯಲ್ಲಿ ತಾಯಿ ಮತ್ತು ಹಿರಿಯ ಮಗನಿಗೆ ನೆಗೆಟಿವ್ ಫಲಿತಾಂಶ ಬಂದಿದ್ದು, 22 ವರ್ಷದ ಕಿರಿಯ ಪುತ್ರನಿಗೆ ಪಾಸಿಟಿವ್ ದೃಢಪಟ್ಟಿದೆ. ಈತನಿಗೆ ಪ್ರಸ್ತುತ ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆತ ಆರಾಮದಿಂದ ಇದ್ದಾನೆ ಎಂದು ಡಿಸಿ ತಿಳಿಸಿದರು.
ಯುವಕನ ತಾಯಿ, ತಮ್ಮ, ಮತ್ತು ಮಾವ ಪ್ರಾಥಮಿಕ ಸಂಪರ್ಕ ಹೊಂದಿದ್ದು ಇವರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದೆ. ಮಾವನ ಕುಟುಂಬದವರು ದ್ವಿತೀಯ ಸಂಪರ್ಕದವರಾಗಿದ್ದು ಅವರನ್ನು ಸಹ ಕ್ವಾರಂಟೈನ್ ನಲ್ಲಿರಿಸಲಾಗಿದೆ ಎಂದರು.
ಚಾಮರಾಜನಗರ ಈಗಲೂ ಹಸಿರು ವಲಯ: ಬೇರೆ ರಾಜ್ಯದಿಂದ ಮತ್ತು ಹೊರ ದೇಶದಿಂದ ಬಂದವರು ಆ ಜಿಲ್ಲೆಗೆ ಸೇರಿದವರು ಎಂದು ಪರಿಗಣಿಸಲಾಗುವುದಿಲ್ಲ. ತಾಯಿಯನ್ನು ಬಿಟ್ಟು ಹೋಗಲು ಬಂದಾಗ ಈ ರೀತಿಯಾಗಿದೆ. ಈ ಪ್ರಕರಣ ರಾಜ್ಯದ ಪಟ್ಟಿಯಲ್ಲಿ ಚಾಮರಾಜನಗರ ಜಿಲ್ಲೆಗೆ ಸೇರುವುದಿಲ್ಲ ಇತರ ವಿಭಾಗಕ್ಕೆ ಸೇರುತ್ತದೆ ಎಂದು ಡಾ. ರವಿ ಸ್ಪಷ್ಟಪಡಿಸಿದರು.
ನಮ್ಮ ಜಿಲ್ಲೆಯ ಯಾರಿಗೂ ಸೋಂಕು ತಗುಲಿಲ್ಲ. ಈ ರೀತಿಯ ಗಂಡಾಂತರ ಎದುರಿಸುತ್ತಲೇ ಬಂದಿದ್ದೇವೆ. ಈಗಲೂ ನಮ್ಮ ಜಿಲ್ಲೆ ಹಸಿರಾಗಿಯೇ ಉಳಿದಿದೆ. ಜನರು ಆತಂಕ ಪಡುವ ಅಗತ್ಯವಿಲ್ಲ ಎಂದರು.
ಅಂತಾರಾಜ್ಯದಿಂದ ಬರುವವರು ಸೇವಾಸಿಂಧು ರಿಜಿಸ್ಟರ್ ಮಾಡಬೇಕು. ಇವರು ರಿಜಿಸ್ಟರ್ ಮಾಡಿಸದೇ ಬಂದದ್ದರಿಂದ ಈ ಅಚಾತುರ್ಯ ನಡೆದಿದೆ. ಜಿಲ್ಲೆಯಲ್ಲಿ 70 ಜನ ಕ್ವಾರಂಟೈನ್ ನಲ್ಲಿದ್ದಾರೆ. ಇದರಲ್ಲಿ ಮಹಾರಾಷ್ಟ್ರ, ತಮಿಳುನಾಡಿನವರಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.