![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, May 26, 2020, 5:50 AM IST
ಯಳಂದೂರು: ತಾಲೂಕಾದ್ಯಂತ ಭಾನುವಾರ ರಾತ್ರಿ ಜೋರು ಮಳೆ ಸುರಿದಿದ್ದು, ಪಂಪ್‌ಸೆಟ್ ಶೆಡ್‌ಗಳು, ಕಬ್ಬಿನ ಬೆಳೆ, ತೇಗ, ಹೆಬ್ಬೇವಿನ ಮರಗಳು ಧರೆಗುರುಳಿವೆ.
ರಾತ್ರಿ 8ರಿಂದ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಕಾಲು ಜೋರಾಗಿ ಸುರಿಯಿತು. ಇದರೊಂದಿಗೆ ಗಾಳಿಯ ವೇಗವೂ ಹೆಚ್ಚಿದ್ದ ಕಾರಣ ರೈತರ ಬೆಳೆಗಳಿಗೆ ಹಾನಿಯಾಗಿದೆ. ತಾಲೂಕಿನ ಬಿಳಿಗಿರಿರಂಗನಬೆಟ್ಟ, ಮದ್ದೂರು, ಯರಿಯೂರು, ಅಗರ, ಮಾಂಬಳ್ಳಿ ಗ್ರಾಮಗಳಲ್ಲಿ ಮಳೆ ಜೋರು ಪಡೆದುಕೊಂಡಿತ್ತು.
ಗಾಳಿಯ ರಭಸಕ್ಕೆ ಇಲ್ಲಿ ಕೆಲ ರೈತರು ತಮ್ಮ ಪಂಪ್ ಸೆಟ್‌ಗಳಿಗೆ ಹಾಕಿ ಕೊಂಡಿದ್ದ ಕಲಾ°ರ್ ಶೀಟ್‌ಗಳು, ಜಿಂಕ್ ಶೀಟ್‌ನ ತಗಡುಗಳು ಹಾರಿ ಹೋಗಿದೆ. ಅಲ್ಲದೆ ಕಬ್ಬು ಕೂಡ ಒರಗಿದೆ. ತೇಗ, ಬಾಳೆ, ಹೆಬ್ಬೇವಿನ ಮರಗಳು ಧರೆಗುರುಳಿದ್ದು ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಪಟ್ಟಣದಲ್ಲೂ ಕೂಡ ಗಾಳಿ, ಮಿಂಚು, ಗುಡುಗು ಸಮೇತ ಮಳೆಯಾಗಿದೆ.
You seem to have an Ad Blocker on.
To continue reading, please turn it off or whitelist Udayavani.