ಬೆಳೆ ಸಾಲದ ಚಿನ್ನ ಹರಾಜು ತಡೆದ ರೈತರು
Team Udayavani, Dec 25, 2020, 3:11 PM IST
ಕೊಳ್ಳೇಗಾಲ: ಬ್ಯಾಂಕ್ ಅಧಿಕಾರಿಗಳು ಹಮ್ಮಿಕೊಂಡಿದ್ದ ಸುಸ್ತಿದಾರರ ಚಿನ್ನಗಳಹರಾಜು ಪ್ರಕ್ರಿಯೆಯನ್ನು ರೈತ ಮುಖಂಡರು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ತಾಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆಗಾಗಿ ಚಿನ್ನದ ಮೇಲೆ ಸಾಲ ಪಡೆದು ಸಾಲವನ್ನು ಮರುಪಾವಿತಸದೇ ಸುಸ್ತಿದಾರರಾಗಿ ದ್ದರು. ಹೀಗಾಗಿ ಬ್ಯಾಂಕ್ ಅಧಿಕಾರಿಗಳು ಹರಾಜು ಪ್ರಕ್ರಿಯೆ ನಡೆಸಲು ಮುಂದಾಗಿದ್ದರು.
ತಾಲೂಕಿನ ಪಾಳ್ಯ ಕೆನರಾ ಬ್ಯಾಂಕ್ ಶಾಖೆ ಮತ್ತು ಪಟ್ಟಣದ ಶಾಖೆಗಳಿಗೆ ಈ ವೇಳೆರಾಜ್ಯ ರೈತ ಸಂಘ ಹಾಗೂ ಹಸಿರು ಜಿಲ್ಲಾಕಾರ್ಯಾಧ್ಯಕ್ಷ ಶೈಲೇಂದ್ರ ನೇತೃತ್ವದಲ್ಲಿ ರೈತ ಮುಖಂಡರು ಭೇಟಿ ನೀಡಿ ವ್ಯವಸ್ಥಾಪಕರೊಂದಿಗೆ ಚರ್ಚಿಸಿ, ರೈತರು ಬ್ಯಾಂಕ್‌ಗಳಲ್ಲಿಇಟ್ಟಿರುವ ಚಿನ್ನದ ಹರಾಜನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.ಕೋವಿಡ್ ದಿಂದ ರೈತರು ಸೂಕ್ತ ಬೆಳೆಯನ್ನು ಬೆಳೆಯಲಾಗದೆ ನಷ್ಟ ಅನುಭವಿಸಿದ್ದಾರೆ. ಬೆಳೆಯಿಂದ ಯಾವುದೇ ಲಾಭ ಬಾರದ ನಿಮಿತ್ತ ಬ್ಯಾಂಕ್‌ಗಳಲ್ಲಿ ಇಡಲಾಗಿದ್ದ ಚಿನ್ನವನ್ನು ಬಿಡಿಸಿಕೊಂಡಿಲ್ಲ. ರೈತರ ಸಮಸ್ಯೆ ಅರಿತು ಹರಾಜು ಪ್ರಕ್ರಿಯೆಯನ್ನು ಕೈಬಿಟ್ಟು ಕಾಲಾವಕಾಶ ನೀಡಬೇಕೆಂದರು.
ಉಪ ವಿಭಾಗ ಅಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ, ರೈತ ಮುಖಂಡರ ಸಭೆ ಕರೆದು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದರು. ರೈತರ ಮುಖಂಡರ ಒತ್ತಡಕ್ಕೆ ಮಣಿದು ಹರಾಜು ಪ್ರಕ್ರಿಯೆಯನ್ನು ಬ್ಯಾಂಕ್ ಅಧಿಕಾರಿಗಳು ರದ್ದುಪಡಿ ಸಿದರು. ಈ ವೇಳೆ ರೈತ ಮುಖಂಡರಾದ ಬಸವರಾಜು, ಭಾಸ್ಕರ್, ಶಿವಕುಮಾರ್, ಮೋಳೆ ನಟರಾಜು, ಚಂದ್ರಶೇಖರ್, ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಅಶುದ್ಧ ನೀರು, ಅಶುಚಿತ್ವ ಖಂಡಿಸಿ ಗ್ರಾಪಂ ಮುತ್ತಿಗೆ :
ಗುಂಡ್ಲುಪೇಟೆ: ತಾಲೂಕಿನ ಕೂತನೂರು ಗ್ರಾಮದಲ್ಲಿ ಶುದ್ಧ ನೀರು ಕಲ್ಪಿಸಬೇಕು ಎಂದು ಆಗ್ರಹಿಸಿ ಗ್ರಾಮಪಂಚಾಯಿತಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದರು.
ಗ್ರಾಪಂ ಕೇಂದ್ರ ಸ್ಥಾನವೂ ಆಗಿರುವ ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲ. ಕುಡಿವ ನೀರಿನೊಂದಿಗೆ ಕೊಳಚೆ ನೀರು ಬೆರೆತು ಇದನ್ನು ಸೇವಿಸಬೇಕಾಗಿದೆ. ಇದರಿಂದ ಜನರು ಕಳೆದ ಎರಡು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದಾರೆ. ಇದರಜತೆಗೆ ಕೊಳೆತ ನೀರಿನಲ್ಲಿ ಸೊಳ್ಳೆಗಳ ಸಂತತಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳುಕಾಣಿಸಿಕೊಳ್ಳುತ್ತಿವೆ. ಒಟ್ಟಾರೆ ಗ್ರಾಮವು ಅವ್ಯವಸ್ಥೆಗಳ ಆಗರವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾಹಿತಿ ಪಡೆದ ಆರೋಗ್ಯ ಇಲಾಖೆ ಗ್ರಾಮಕ್ಕೆ ಡಾ.ವಿವೇಕ್ ನೇತೃತ್ವದ ವೈದ್ಯಕೀಯ ತಂಡವನ್ನು ಕಳುಹಿಸಿ ಮಾಹಿತಿ ಪಡೆಯಿತು. ಮನೆಗಳಿಗೆ ಪೂರೈಸುವ ನೀರಿನ ಮಾದರಿಯನ್ನು ವೈದ್ಯರು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ. ಅನಾರೋಗ್ಯ ಪೀಡಿತರ ಆರೋಗ್ಯ ತಪಾಸಣೆ ನಡೆಸಲಾಗುವುದು. ಶುದ್ಧ ನೀರು ಪೂರೈಕೆ ಹಾಗೂ ಅಶುಚಿತ್ವ ನಿವಾರಣೆಗೆ ಗ್ರಾಮ ಪಂಚಾಯಿತಿಗೆ ನೊಟಿಸ್ ನೀಡಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ಟಿಪ್ಪರ್ ಹರಿದು ಕೇರಳ ಮೂಲದ ಬೈಕ್ ಸವಾರನ ಕಾಲು ನಜ್ಜುಗುಜ್ಜು
Bandipur-Wayanad ರಸ್ತೆಯಲ್ಲಿ ವಾಹನ ಸವಾರರಿಂದ ಆನೆ ಮರಿಗೆ ಕೀಟಲೆ- ವಿಡಿಯೋ ವೈರಲ್
Gundlupete: ಆರು ಜೀವಂತ ಆಮೆ, ಶ್ರೀಗಂಧದ ತುಂಡು ಸಾಗಿಸುತ್ತಿದ್ದ ಆರೋಪಿ ಬಂಧನ
Gundlupete: ಹೆಣ್ಣಾನೆ ಮೃತದೇಹ ಪತ್ತೆ: ಆಂಥಾಕ್ಸ್ ಕಾಯಿಲೆ ಶಂಕೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.