ಎಂಜಿನಿಯರಿಂಗ್ ಕಾಲೇಜುಗಳ ಕರೆಂಟ್ ಕಟ್! ವಿದ್ಯುತ್ ಬಿಲ್ ಪಾವತಿಸದ ಸರಕಾರಿ ಕಾಲೇಜುಗಳು
ಪ್ರಯೋಗಾಲಯಗಳಿಲ್ಲದೇ ವಿದ್ಯಾರ್ಥಿಗಳಿಗೆ ತೊಂದರೆ
Team Udayavani, Nov 10, 2022, 8:10 AM IST
ಚಾಮರಾಜನಗರ: ವಿದ್ಯುತ್ ನಿಗಮಗಳಿಗೆ ವಿದ್ಯುತ್ ಬಿಲ್ ಕಟ್ಟದ ಕಾರಣ ರಾಜ್ಯದ ಬಹುತೇಕ ಸರಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಒಂದು ವಾರದಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.
ರಾಜ್ಯದ ಬಹುತೇಕ ಸರಕಾರಿ ಎಂಜಿನಿಯರಿಂಗ್ ಕಾಲೇಜು ಹಾಗೂ 80 ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ ಇದೆ.
ಚಾಮರಾಜನಗರದ ಹೊರ ವಲಯದಲ್ಲಿರುವ ಸರಕಾರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯುತ್ ಬಾಕಿ 2 ಲಕ್ಷ ರೂ. ಇತ್ತು. ಹೀಗಾಗಿ ಸೆಸ್ಕ್ನಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಕಳೆದ ಒಂದು ವಾರದಿಂದ ವಿದ್ಯುತ್ ಸಂಪರ್ಕ ಇಲ್ಲದೆ ವಿದ್ಯಾರ್ಥಿಗಳಿಗೆ ಪ್ರಯೋಗಾಲಯ ಸೌಲಭ್ಯ ಸಿಗುತ್ತಿಲ್ಲ. ನಗರದ ಕಾಲೇಜಿನಲ್ಲಿ ಜನರೇಟರ್ ಸೌಲಭ್ಯ ಇದೆಯಾದರೂ, ಅದನ್ನು ಸಂಪೂರ್ಣವಾಗಿ ಬಳಕೆ ಮಾಡಲು ಸಾಧ್ಯವಿಲ್ಲ. ನೀರಿನ ಪೂರೈಕೆಯಂಥ ಅಗತ್ಯ ವ್ಯವಸ್ಥೆಗೆ ಜನರೇಟರ್ ಬಳಸಿಕೊಳ್ಳಲಾಗುತ್ತಿದೆ.
ಇದಲ್ಲದೇ ರಾಜ್ಯದ ಸರಕಾರಿ ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯುತ್ ಬಿಲ್ ಅನ್ನೂ ಕಟ್ಟದೇ ಅವುಗಳಲ್ಲೂ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 82,000 ರೂ. ವಿದ್ಯುತ್ ಬಿಲ್ ಬಾಕಿ ಇದ್ದು, ಪವರ್‌ಲೈನ್ ಸಂಪರ್ಕ ಕಡಿತಗೊಳಿಸಲಾಗಿದೆ.
ಎಂಜಿನಿಯರಿಂಗ್ ತರಗತಿಗಳು ಮುಖ್ಯವಾಗಿ ವಿದ್ಯುತನ್ನು ಅವಲಂಬಿಸಿವೆ. ಪ್ರಯೋಗಾಲಯಗಳಿಗೆ ವಿದ್ಯುತ್ ಅತ್ಯಗತ್ಯ. ಒಂದು ವಾರದಿಂದ ವಿದ್ಯಾರ್ಥಿ ಗಳು ಪರದಾಡುತ್ತಿದ್ದಾರೆ ಎಂದು ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಅಸಿಯಾ ಆತಂಕ ವ್ಯಕ್ತಪಡಿಸಿದರು.
ಎಲ್ಲೆಲ್ಲಿ, ಎಷ್ಟು ಬಾಕಿ?
-ಸರಕಾರಿ ಎಂಜಿನಿಯರಿಂಗ್ ಕಾಲೇಜು, ಮೊಸಳೆ ಹೊಸಹಳ್ಳಿ ಹಾಸನ- 5.64 ಲಕ್ಷ ರೂ.
– ಸ. ಎಂ. ಕಾಲೇಜು ಹಾಸನ- 5 ಲಕ್ಷ ರೂ.
– ಸ. ಎಂ.ಕಾಲೇಜು, ಕುಶಾಲನಗರ- 4.25 ಲ.ರೂ.
-ಸ. ಎಂ. ಕಾಲೇಜು ಚಾ.ನಗರ- 2 ಲಕ್ಷ ರೂ.
-ಸ. ಎಂ. ಕಾಲೇಜು ರಾಮನಗರ-4.50 ಲಕ್ಷ ರೂ.
– ಎಸ್‌ಜೆ ಪಾಲಿಟೆಕ್ನಿಕ್ ಬೆಂಗಳೂರು- 6.8ಲ.ರೂ.
-ಸ. ಪಾಲಿಟೆಕ್ನಿಕ್ ಚಾ.ನಗರ -82,000 ರೂ.
-ಸರಕಾರಿ ಎಂಜಿನಿಯರಿಂಗ್ ಕಾಲೇಜು ಕೆ.ಆರ್. ಪೇಟೆ, ಮಂಡ್ಯ- 5.20 ಲಕ್ಷ ರೂ.
– ಸ. ಎಂ. ಕಾಲೇಜು, ಹಾವೇರಿ- 5.70 ಲಕ್ಷ ರೂ.
ನಮ್ಮ ಕಾಲೇಜಿನಲ್ಲಿ ಒಂದು ವಾರದಿಂದ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ. ಈ ಬಗ್ಗೆ ಕೇಂದ್ರ ಕಚೇರಿಯ ಗಮನಕ್ಕೆ ತರಲಾಗಿದೆ. ಪತ್ರವನ್ನೂ ಬರೆಯುತ್ತಿದ್ದೇವೆ. ಸದ್ಯಕ್ಕೆ ಜನರೇಟರ್‌ನಿಂದ ನಿಭಾಯಿಸುತ್ತಿದ್ದೇವೆ..
– ವೆಂಕಟೇಶ್,
ಪ್ರಿನ್ಸಿಪಾಲ್, ಸರಕಾರಿ ಎಂಜಿನಿಯರಿಂಗ್ ಕಾಲೇಜು, ಚಾ.ನಗರ.
ಒಂದು ವಾರದಿಂದ ವಿದ್ಯುತ್ ಇಲ್ಲದೇ ಪ್ರಯೋ ಗಾಲಯಗಳು ನಡೆಯುತ್ತಿಲ್ಲ. ಈ ಸಮಸ್ಯೆ ಆಗಾಗ ತಲೆದೋರುತ್ತಲೇ ಇರುತ್ತದೆ. ಸರ್ಕಾರ ಇದನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು. ನಾವು ಇಂದು ಜಿಲ್ಲಾಧಿಕಾರಿಯವರ ಕಚೇರಿಗೆ ತೆರಳಿ ಈ ಬಗ್ಗೆ ಮನವಿಯನ್ನೂ ಸಲ್ಲಿಸಿದ್ದೇವೆ.
-ಸೃಷ್ಟಿ, ಎಂಜಿನಿಯರಿಂಗ್
ಕಾಲೇಜು ವಿದ್ಯಾರ್ಥಿನಿ.
– ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.