ಅಧಿಕಾರಿಗಳೇ ದಾಸನಹುಂಡಿ ಸರ್ಕಾರಿ ಶಾಲೆ ಉಳಿಸಿ


Team Udayavani, Jun 20, 2023, 1:19 PM IST

tdy-10

ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿಸಂರಕ್ಷಿತ ಅರಣ್ಯ ಪ್ರದೇಶದ ಅಂಚಿನಲ್ಲಿರುವ ದಾಸನಹುಂಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೇ ಮುಚ್ಚುವ ಹಂತದಲ್ಲಿದ್ದು, ಇದಕ್ಕೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಗ್ರಾಮದಲ್ಲಿ 150 ಒಕ್ಕಲಿಗ, 20 ಪರಿಶಿಷ್ಟ ಪಂಗಡದ ಕುಟುಂಬ ಇದ್ದು, ಕಳೆದ ಸಾಲಿನಲ್ಲಿ ಈ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಒಟ್ಟು 18 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಬಾರಿ 5ನೇ ತರಗತಿಯಲ್ಲಿ 5 ವಿದ್ಯಾರ್ಥಿಗಳು ತೇರ್ಗಡೆ ಆಗಿ ಬೇರೆ ಶಾಲೆಗೆ ಹೋಗಿದ್ದಾರೆ. ಉಳಿದ 13 ವಿದ್ಯಾರ್ಥಿಗಳು ಯಳಂದೂರು ಪಟ್ಟಣದ ಖಾಸಗಿ ಶಾಲೆಗೆ ಸೇರಿಸಿದ್ದಾರೆ. ಅಲ್ಲದೆ, ಹೊಸ ದಾಖಲಾತಿಯೂ ಆಗಿಲ್ಲ. ಹಾಗಾಗಿ, ಈ ಶಾಲೆಯಲ್ಲಿ ಈಗ ಶೂನ್ಯ ದಾಖಲಾತಿ ಇದ್ದು, ಶಾಲೆ ಮುಚ್ಚುವ ಭೀತಿ ಎದುರಿಸುತ್ತಿದೆ.

ಸರಿಯಾಗಿ ಪಾಠ ಮಾಡಲ್ಲ: ಶಾಲೆಯಲ್ಲಿ ಸಮರ್ಪಕ ಶಿಕ್ಷಣ ದೊರೆಯುತ್ತಿಲ್ಲ. ಎಲ್ಲಾ ತರಗತಿಗೂ ಒಬ್ಬರೇ ಶಿಕ್ಷಕರು ಪಾಠ ಪ್ರವಚನ ಮಾಡಬೇಕಾದ ಪರಿಸ್ಥಿತಿ ಇದೆ. ಅವರ ಬೋಧನೆಯೂ ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಪೋಷಕರಿಂದ ಕೇಳಿಬಂದಿದೆ. ಹೀಗಾಗಿ, 1 ರಿಂದ 5 ತರಗತಿಯ ಒಟ್ಟು 13 ವಿದ್ಯಾರ್ಥಿಗಳು ಇತರೆ ಶಾಲೆಗಳತ್ತ ಮುಖ ಮಾಡಿದ್ದಾರೆ.

ಶಿಕ್ಷಣ ಇಲಾಖೆ ನಿರ್ಲಕ್ಷ: ಶಾಲೆಯ ಬಹುತೇಕ ವಿದ್ಯಾರ್ಥಿಗಳು ಬೇರೆ ಶಾಲೆಗೆ ಸೇಪೆìಡೆಯಾಗಿ ಹಲವು ದಿನ ಕಳೆದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆ, ಬಿಇಒ ಪೋಷಕರ, ವಿದ್ಯಾರ್ಥಿಗಳ ಸಭೆಯನ್ನೇ ನಡೆಸಿಲ್ಲ. ಕನಿಷ್ಠ ಹೊಸದಾಗಿ ಮಕ್ಕಳ ಸೇರ್ಪಡೆಗಾಗಲಿ, ಬೇರೆ ಶಾಲೆಗೆ ಹೋಗಿರುವ ಮಕ್ಕಳ ಮನವೊಲಿಸಿ ವಾಪಸ್‌ ಕರೆ ತರುವ, ಸೌಲಭ್ಯ ಒದಗಿಸಿಕೊಡುವ ಕೆಲಸವನ್ನೂ ಮಾಡಿಲ್ಲ. ಈ ಶಾಲೆಯಲ್ಲಿ ಎಸ್‌ಡಿಎಂಸಿ ರಚನೆ, ರಾಷ್ಟ್ರೀಯ ಹಬ್ಬಗಳ ಆಚರಣೆ, ಕ್ರೀಡೆ, ಸಾಂಸ್ಕೃತಿ ಚಟುವಟಿಕೆಗಳು, ಮೂಲ ಸೌಲಭ್ಯಗಳ ಕೊರತೆ ಸೇರಿ ಅನೇಕ ಸಮಸ್ಯೆಗಳ ಬಗೆಹರಿಸುವಲ್ಲಿ ಮುಂದಾಗದೆ ವಿಳಂಬ ಮಾಡಿರುವ ಪರಿಣಾಮ, ಸರ್ಕಾರಿ ಶಾಲೆಯು ಗ್ರಾಮದಲ್ಲಿ ಮುಚ್ಚುವ ಹಂತಕ್ಕೆ ತಲುಪಿರುವುದು ದೊಡ್ಡ ದುರಂತವೇ ಸರಿ ಎಂದು ಸ್ಥಳೀಯರ ದೂರಾಗಿದೆ.

ಸರ್ಕಾರಿ ಶಾಲೆ ಬಗ್ಗೆ ಅಸಡ್ಡೆ: ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕಡಿಮೆಯಾಗಲು ಪೋಷಕರು ಮನಸ್ಥಿತಿ ಒಂದೆಡೆಯಾದರೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಜನಸಾಂದ್ರತೆ ಕಡಿಮೆ ಇರುವುದು ಸಹ ಕಾರಣ ವಾಗಿದೆ. ನುರಿತ ಶಿಕ್ಷಕರು, ಉಚಿತ ಪಠ್ಯಪುಸ್ತಕ, ಸಮ ವಸ್ತ್ರ, ಬಿಸಿಯೂಟ, ವಿದ್ಯಾರ್ಥಿ ವೇತನ, ಬೈಸಿಕಲ್‌, ಉಚಿತ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಏಕೆ ಸೇರಿಸುತ್ತಿಲ್ಲ ಎಂದು ಪೋಷಕರನ್ನು ಕೇಳಿದರೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಕಲಿಸುವುದಿಲ್ಲ, ಮೂಲ ಸೌಕರ್ಯ ಇಲ್ಲ, ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತೇವೆ ಎಂದರೆ ಜನ ಕೀಳು ಮಟ್ಟದಲ್ಲಿ ನೋಡುತ್ತಾರೆ ಎಂದು ಹೇಳುತ್ತಾರೆ.

ದಾಸನಹುಂಡಿ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಸಮರ್ಪಕವಾಗಿ ಬೋಧನೆ ಮಾಡದ ಕಾರಣ ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ಮತ್ತೆ ಪೋಷಕರ ಸಭೆ ಕರೆದು ಇವರ ಮನವೊಲಿಸಿ ಮತ್ತೆ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ ಗಮನ ಹರಿಸು ತ್ತೇನೆ. ಇಲ್ಲಿಗೆ ಬೇರೆ ಶಿಕ್ಷಕರನ್ನು, ಜೊತೆಗೆ ಅತಿಥಿ ಶಿಕ್ಷಕರನ್ನು ನೇಮಿಸಲು ಕ್ರಮ ವಹಿಸಲಾಗುವುದು. ●ಕೆ.ಕಾಂತರಾಜು, ಬಿಇಒ, ಯಳಂದೂರು.

ಗ್ರಾಮದಲ್ಲಿನ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಇಲ್ಲಿಗೆ ನೇಮಕಗೊಂಡಿದ್ದ ಶಿಕ್ಷಕ ಸಮರ್ಪಕವಾಗಿ ಪಾಠ ಪ್ರವಚನಗಳನ್ನು ಮಾಡುತ್ತಿರಲಿಲ್ಲ. ಈ ಕಾರಣ ಮಕ್ಕಳ ಕಲಿಕಾ ದೃಷ್ಟಿಯಿಂದ ಪೋಷಕರು ಬೇರೆ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿದ್ದಾರೆ. ಶಿಕ್ಷಣ ಇಲಾಖೆ ನಿರ್ಲಕ್ಷ್ಯದಿಂದ 50 ವರ್ಷಕ್ಕೂ ಹಳೆಯದಾದ ನಮ್ಮ ಗ್ರಾಮದ ಶಾಲೆ ಮುಚ್ಚುವ ಹಂತಕ್ಕೆ ಬಂದಿದೆ. ಈ ಬಗ್ಗೆ ಮೇಲಧಿಕಾರಿಗಳು ಉತ್ತಮ ಇಬ್ಬರ ಶಿಕ್ಷಕರ ನಿಯೋಜನ ಮಾಡಬೇಕು. ಶಾಲೆಗೆ ಪೋಷಕ ವರ್ಗದ ಸಭೆ ಕರೆದು, ಮತ್ತೆ ಶಾಲೆ ಪ್ರಾರಂಭಿಸುವ ನಿಟ್ಟಿನಲ್ಲಿ, ಇಲ್ಲಿಗೆ ಮಕ್ಕಳನ್ನು ಸೇರಿಸುವಂತೆ ಮನವೊಲಿಸುವಲ್ಲಿ ಶಿಕ್ಷಣ ಇಲಾಖೆ ಬಿಇಒ ಕ್ರಮವಹಿಸಬೇಕಾಗಿದೆ. ●ಡಿ.ಸಿ.ಬಾಬು, ಗ್ರಾಪಂ ಸದಸ್ಯ, ದಾಸನಹುಂಡಿ ಗ್ರಾಮ

– ಫೈರೋಜ್‌ಖಾನ್‌

ಟಾಪ್ ನ್ಯೂಸ್

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

1

ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು

Team India: Rohit asked BCCI for a few months’ time: What happened in the meeting?

Team India: ಬಿಸಿಸಿಐ ಬಳಿ ಕೆಲವು ತಿಂಗಳ ಅವಕಾಶ ಕೇಳಿದ ರೋಹಿತ್‌: ಸಭೆಯಲ್ಲಿ ಏನಾಯ್ತು?

ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ

Udupi: ಮಹಾಕುಂಭ ಮೇಳದ ಯಶಸ್ಸಿಗಾಗಿ ಮಠ -ಮನೆ, ಮಂದಿರಗಳಲ್ಲಿ ಪ್ರಾರ್ಥಿಸಲು ಪೇಜಾವರ ಶ್ರೀ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

9-chamarajanagara

Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-mukund

Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ

CT-Ravi

ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ

Chamarajpete–cow

Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಸೂಪರ್‌ ಸ್ಟಾರ್‌

Tulu Film: ರೂಪೇಶ್‌ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್‌ ಸ್ಟಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.