ಮಳೆಹಾನಿ ಪ್ರದೇಶಗಳಿಗೆ ಡೀಸಿ ಭೇಟಿ
Team Udayavani, May 10, 2019, 12:07 PM IST
ಚಾಮರಾಜನಗರ: ಮಳೆ ಹಾಗೂ ಗಾಳಿಯಿಂದ ಹಾನಿಗೊಳಗಾದ ಗುಂಡ್ಲುಪೇಟೆ ತಾಲೂಕಿನ ವಿವಿಧ ಗ್ರಾಮಗಳ ಮನೆ ಹಾಗೂ ತೋಟ ಇತರೆ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಯವರು ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಕಣ್ಣೇಗಾಲ ಗ್ರಾಮಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದರು. ಇದೇ ವೇಳೆ ಮರ ಉರುಳಿ ಶಾಲಾ ಕಾಂಪೌಂಡಿಗೆ ಹಾನಿಯಾಗಿರುವುದನ್ನು ಪರಿಶೀಲಿಸಿದರು.
ವೈದ್ಯರಿಗೆ ಡೀಸಿ ಸೂಚನೆ: ಬೇರಂಬಾಡಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿಯೂ ಸಹ ಗಾಳಿಯಿಂದ ಹಾನಿಗೀಡಾಗಿರುವ ಮನೆಗಳನ್ನು ವೀಕ್ಷಿಸಿದರು. ಇದೇ ವೇಳೆ ಗಾಳಿಯಿಂದ ಮನೆಯ ಜಿಂಕ್‌ಶೀಟ್ ಹಾರಿದ ಪರಿಣಾಮ ಗಾಯಗೊಂಡಿದ್ದ ಬಾಲಕನ ಆರೋಗ್ಯವನ್ನು ವಿಚಾರಿಸಿದರು. ಈ ವೇಳೆ ವೈದ್ಯರಿಗೆ ಕರೆ ಮಾಡಿದ ಜಿಲ್ಲಾಧಿಕಾರಿ ಕಾವೇರಿ, ಗಾಯಕ್ಕೊಳಗಾದ ಬಾಲಕನಿಗೆ ಚಿಕಿತ್ಸೆ ಮುಂದುವರೆಸಿ ಆರೋಗ್ಯ ಸುಧಾರಣೆಗೆ ಹೆಚ್ಚು ನಿಗಾ ವಹಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು.
ಗರಿಷ್ಠ ಪರಿಹಾರಕ್ಕೆ ಡೀಸಿಗೆ ಮನವಿ: ಕಳ್ಳೀಪುರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿಯೂ ಸಹ ಮಳೆೆಯಿಂದ ಹಾನಿಗೊಳಗಾಗಿರುವ ಜನವಸತಿ ಪ್ರದೇಶಗಳನ್ನು ವೀಕ್ಷಿಸಿದರು. ಹೊನ್ನೇಗೌಡನಹಳ್ಳಿ ಮಳೆಯಿಂದ ಹಾನಿಗೊಳಗಾದ ಬಾಳೆ ಬೆಳೆಯನ್ನು ವೀಕ್ಷಿಸಿದರು. ಇದೇ ವೇಳೆ ಸ್ಥಳೀಯ ರೈತರು, ಬೆಳೆಗಾ ರರು ಜಿಲ್ಲಾಧಿಕಾರಿಗೆ ತಮ್ಮ ಅಹವಾಲು ಸಲ್ಲಿಸಿದರು. ನಮಗೆ ಮಳೆಯಿಂದ ಹೆಚ್ಚು ನಷ್ಟ ಉಂಟಾಗಿದೆ. ಇದಕ್ಕೆ ಸರ್ಕಾರದಿಂದ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಾವೇರಿ ಮಾತ ನಾಡಿ, ಮಳೆ ಗಾಳಿಯಿಂದ ಸಂಭವಿಸಿರುವ ಬೆಳೆ ಹಾನಿ ಯನ್ನು ತಕ್ಷಣವೇ ಪಂಚಾಯಿತಿ ಅಭಿವೃದ್ಧಿ ಅಧಿಕಾ ರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಪರಿಹಾರಕ್ಕೆ ಅಗತ್ಯ ಕ್ರಮ: ರೈತರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ, ಪ್ರಸ್ತುತ ಉಂಟಾಗಿರುವ ಬೆಳೆಹಾನಿ ಕುರಿತ ವರದಿ ಬಗ್ಗೆ ಪ್ರಸ್ತಾವನೆಯನ್ನು ಶೀಘ್ರವೇ ಕಳುಹಿಸಿ ಪರಿಹಾರ ದೊರಕಿಸಿಕೊಡಲು ಮುಂದಾಗುವುದಾಗಿ ಭರವಸೆ ನೀಡಿದರು. ವಾಸದ ಮನೆಗಳ ಹಾನಿ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಂದ ವರದಿ ಪಡೆದು ಮುಂದಿನ ಪರಿಹಾರ ಕ್ರಮಗಳಿಗೆ ಅಗತ್ಯ ಪ್ರಕ್ರಿಯೆ ಕೈಗೊಳ್ಳ ಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ನಂಜುಂಡಯ್ಯ, ಇತರೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಶೀಘ್ರದಲ್ಲೇ ಪರಿಹಾರ ವಿತರಿಸುವ ಭರವಸೆ
ಚಾಮರಾಜನಗರ: ಮಳೆಯಿಂದ ಹಾನಿಗೊಳ ಗಾಗಿ ರುವ ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ವಿವಿಧ ಗ್ರಾಮಗಳ ಜಮೀನುಗಳಿಗೆ ಜಿಲ್ಲಾಧಿಕಾರಿ ಕಾವೇರಿ ಭೇಟಿ ನೀಡಿ ಪರಿಶೀಲಿಸಿದರು.
ಕೊಳ್ಳೇಗಾಲ ತಾಲೂಕಿನ ಟಗರಪುರ ಮೋಳೆ, ಮೊಳಗನಕಟ್ಟೆ, ತೆಳ್ಳನೂರು, ಚಿಕ್ಕಲ್ಲೂರು, ಇಕ್ಕಡಹಳ್ಳಿಗೆ ಭೇಟಿ ನೀಡಿ ಮಳೆಯಿಂದ ಹಾನಿಗೆ ಒಳಗಾಗಿರುವ ಬಾಳೆ ಬೆಳೆಯನ್ನು ಜಿಲ್ಲಾಧಿಕಾರಿ ಯವರು ವೀಕ್ಷಿಸಿದರು.
ಸ್ಥಳೀಯ ರೈತರು, ಬೆಳೆಗಾರರು ಜಿಲ್ಲಾಧಿಕಾರಿ ಬಳಿ ಅಹವಾಲು ತೋಡಿಕೊಂಡರು. ಅದಷ್ಟು ಶೀಘ್ರವೇ ನಮಗೆ ಹೆಚ್ಚಿನ ಪರಿಹಾರವನ್ನು ಕೊಡಿಸುವಂತೆ ಮನವಿ ಮಾಡಿದರು.
ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿಯವರು ತಕ್ಷಣವೇ ಬೆಳೆ ನಷ್ಟ ಅಂದಾಜು ಮಾಡಬೇಕು. ತೋಟಗಾರಿಕೆ ಇಲಾಖೆ ಯಿಂದ ವರದಿ ಪಡೆದು ಬೆಳೆ ಹಾನಿ ಸಂಬಂಧ ರೈತರಿಗೆ ಪರಿಹಾರವನ್ನು ತುರ್ತಾಗಿ ನೀಡುವಂತೆ ಸೂಚನೆ ನೀಡಿದರು. ಹನೂರು ಭಾಗದ ಕೂಡೂ ್ಲ ರು, ಹೂಗ್ಯಂ ಸೇರಿದಂತೆ ಇತರ ಪ್ರದೆಶಗಳಿಗೆ ಭೇಟಿ ನೀಡಿ ಅಲ್ಲಿಯೂ ಮಳೆಯಿಂದಾಗಿ ಹಾನಿಯಾ ಗಿರುವ ಬಾಳೆ ಬೆಳೆಯನ್ನು ಜಿಲ್ಲಾಧಿಕಾರಿಯವರು ವೀಕ್ಷಿಸಿದರು. ಇದೇ ವೇಳೆ ರೈತರು, ಬೆಳೆಗಾರರು ತಾವು ಕಷ್ಟಪಟ್ಟು ಬೆಳೆದ ಬಾಳೆ ಕೈಸೇರಬೇಕಿತ್ತು. ಈ ಹಂತದಲ್ಲಿ ಬೆಳೆ ನಾಶವಾಗಿದೆ. ನಷ್ಟಕ್ಕೆ ಅನುಗು ಣವಾಗಿ ಪರಿಹಾರ ನೀಡಬೇಕೆಂದು ಕೋರಿ ಕೊಂಡರು. ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ ಪರಿಹಾರ ನೀಡಲು ತಕ್ಷಣವೇ ಕ್ರಮ ವಹಿಸ ಲಾಗುವುದು. ಬೆಳೆ ನಷ್ಟ ಅನುಭವಿಸಿರುವ ರೈತರ ಪಟ್ಟಿ ಮಾಡಲು ಅಧಿಕಾರಿಗಳಿಗೆ ಸೂಚಿಸ ಲಾಗಿದೆ. ಬೆಳೆ ಹಾನಿ ಕುರಿತ ಪರಿಹಾರವನ್ನು ವಿಳಂಬ ಮಾಡದೇ ವಿತರಿಸಲಾ ಗುವುದು ಎಂದರು.
ಕೂಡ್ಲೂರಿನಲ್ಲಿ ಸಮರ್ಪಕ ವಿದ್ಯುತ್ ಸರಬರಾಜಿಗೆ ತೊಂದರೆಯಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನ ಸೆಳೆದರು. ಕೂಡಲೇ ವಿದ್ಯುತ್ ಸರಬರಾಜು ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಿ ಮಾತನಾಡಿದ ಜಿಲ್ಲಾಧಿಕಾರಿ ಕಾವೇರಿ ಅವರು ತಕ್ಷಣವೇ ವಿದ್ಯುತ್ ಸರಬರಾಜಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು. ಉಪ ವಿಭಾಗಾಧಿಕಾರಿ ನಿಖೀತಾ ಎಂ. ಚಿನ್ನಸ್ವಾಮಿ, ತಹಶೀಲ್ದಾರ್ ನಾಗರಾಜು, ಆನಂದಯ್ಯ, ಕಂದಾಯ ನಿರೀಕ್ಷಕರಾದ ನಂಜಯ್ಯ, ಸತೀಶ್, ಇತರೆ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Kundapura: ಬಸ್ ತಂಗುದಾಣಗಳೇ ಮಾಯ; ಜನರು ಅಯೋಮಯ!
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.