Kollegala: ಐತಿಹಾಸಿಕ ಮರಳೇಶ್ವರ ಚಂದ್ರ ಪುಷ್ಕರಣಿ ಅಭಿವೃದ್ಧಿ ನನೆಗುದಿಗೆ
Team Udayavani, Sep 18, 2023, 3:36 PM IST
ಕೊಳ್ಳೇಗಾಲ: ನಗರದ ಹೃದಯ ಭಾಗದ 1800 ವರ್ಷದ ಇತಿಹಾಸವುಳ್ಳ ಮರಳೇಶ್ವರ ದೇವಾಲಯದ ಚಂದ್ರ ಪುಷ್ಕರಣಿ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡು ಅಭಿವೃದ್ಧಿಯಾಗದೆ ನನೆಗುದಿಗೆ ಬಿದ್ದಿದೆ.
ಪುಷ್ಕರಣಿಯ ಇತಿಹಾಸ: ಕಳೆದ 1800 ವರ್ಷಗಳ ಹಿಂದೆ ನಗರದ ಮರಳೇಶ್ವರ ದೇವಾಲಯ ಮತ್ತು ಪುಷ್ಕರಣಿ ಸ್ಥಾಪನೆಯಾಗಿರುವ ಬಗ್ಗೆ ಶಿಲಾ ಶಾಸನದಲ್ಲಿ ಉಲ್ಲೇಖವಿರುವುದು ದಂತಕಥೆ. ಈ ದೇವಾಲಯಕ್ಕೆ ಅಕ್ಷಯ ತೃತೀಯ ದಿನದಂದು ಕಾಶಿಗಂತೆ ಬರುತ್ತದೆ. ಇದರ ಬಗ್ಗೆ ಮೈಸೂರಿನ ಪಂಚಾಂಗದಲ್ಲಿ ಉಲ್ಲೇಖವಿದೆ. ದೇವಾಲಯಗಳಲ್ಲೇ ಶ್ರೇಷ್ಠ ದೇವಾಲಯವಾಗಿದೆ. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಪುಷ್ಕರಣಿ ಅಭಿವೃದ್ಧಿಗೆ 2.50 ಕೋಟಿ ಮಂಜೂರು ಆಗಿ ವಿನ್ಯಾಸ ಕಾಮಗಾರಿಗೆ ಚಾಲನೆ ಲಭಿಸಿತ್ತು. ಕಾಮಗಾರಿಯನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಕೆಲಸವನ್ನು ಆರಂಭಿಸಿ ಅರ್ಧಕ್ಕೆ ಸ್ಥಗಿತಗೊಳಿಸಿ ಕಳೆದ ಮೂರು ತಿಂಗಳಿಂದ ಯಾವುದೇ ತರಹದ ಕೆಲಸ ನಡೆಯದೆ ಸಂಪೂರ್ಣ ನೆಲಕಚ್ಚಿದೆ.
ಮರಗಳ ತೆರವು: ಪುಷ್ಕರಣಿ ಅಭಿವೃದ್ಧಿಗಾಗಿ ಇದ್ದ ಮರಗಳನ್ನು ಬೇರು ಸಹಿತ ಕಿತ್ತು ಸ್ಥಳದಲ್ಲೇ ಬಿಸಾಡಿದ್ದು ಮರಳು ಬಿಸಿಲಿನ ತಾಪಕ್ಕೆ ಒಣಗಿ ಕೊಳದ ಸೌಂದ ರ್ಯಕ್ಕೆ ಮರೆಮಾಚುವಂತೆ ದಿಕ್ಕಾಪಾಲಾಗಿ ಬಿದ್ದಿವೆ. ಪರಸೆ ಜನರಿಗೆ ನಿರಾಸೆ: ಹನೂರು ತಾಲೂಕಿನ ಮಲೈ ಮಹದೇಶ್ವರ ಬೆಟ್ಟಕ್ಕೆ ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿ ಪೂಜೆಯ ಬಳಿಕ ಪರಸೆ ಜನ ನಗರದ ಮರಳೇಶ್ವರ ಚಂದ್ರ ಪುಷ್ಕರಣಿ ಸ್ಥಳದಲ್ಲಿ ತಂಗುತ್ತಾರೆ. ನಂತರ ಬೆಳಗ್ಗೆ ಎದ್ದು ದೇವರಿಗೆ ಪೂಜೆ ಸಲ್ಲಿಸಿ ತಮ್ಮ ಊರುಗಳಿಗೆ ತೆರಳುವುದು ಪದ್ಧತಿ. ಆದರೆ, ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಸುತ್ತ ಬೇಲಿ ನಿರ್ಮಾಣದಿಂದ ಭಕ್ತರು ದೇವರ ದರ್ಶನದಿಂದ ವಂಚಿತರಾಗಿ ನಿರಾಸೆಯಿಂದ ತೆರಳುತ್ತಿದ್ದಾರೆ.
ಭಕ್ತರ ಆಗ್ರಹ: ದೇವಾಲಯ ಸರ್ಕಾರಿ ಸ್ವಾಮ್ಯದಲ್ಲಿ ಇದ್ದು ಕೂಡಲೇ ಕುಂಟಿತಗೊಂಡಿರುವ ಕಾಮಗಾರಿ ಬಗ್ಗೆ ಗಮನ ಹರಿಸಿ ಶೀಘ್ರದಲ್ಲಿ ಕಾಮಗಾರಿ ಆರಂಭಿಸಬೇಕು. ಈ ಮೂಲಕ ಭಕ್ತರಿಗೆ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.
ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ ಬಹಳ ವರ್ಷಗಳಿಂದ ಅಭಿವೃದ್ಧಿಯಲ್ಲಿ ಕುಂಠಿತವಾಗಿರುವ ದೇವಾಲಯದ ಬಗ್ಗೆ ಸರ್ಕಾರ ಗಮನ ಹರಿಸಿ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕು. ● ಡಾ.ನಾಗೇಂದ್ರ ಎನ್.ಭಟ್,ದೇವಾಲಯದ ಪ್ರಧಾನ ಅರ್ಚಕರು
ದೇವಾಲಯದ ಅಭಿವೃದ್ಧಿ ಕಾಮಗಾರಿ ಕುಂಠಿತ ವಾಗಿರುವ ಬಗ್ಗೆ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಚರ್ಚೆ ಮಾಡುತ್ತೇನೆ. ಅಲ್ಲದೇ, ಕೂಡಲೇ ಕಾಮಗಾರಿಗೆ ಚಾಲನೆ ನೀಡಲು ಕ್ರಮ ವಹಿಸುತ್ತೇನೆ. ● ಎ.ಆರ್.ಕೃಷ್ಣಮೂರ್ತಿ, ಶಾಸಕರು
– ಡಿ.ನಟರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PAK Vs SA: ಸರಣಿ ಕ್ಲೀನ್ ಸ್ವೀಪ್ ಗೈದ ಪಾಕಿಸ್ಥಾನ
Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್ ವರದಿ ಸಂಪೂರ್ಣ ತಿರಸ್ಕಾರ
BCCI: ಇನ್ನೆರಡು ಟೆಸ್ಟ್ ನಿಂದ ಮೊಹಮ್ಮದ್ ಶಮಿ ಹೊರಕ್ಕೆ
Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ
Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್ ಹೆಸರಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.