ಡಯಾಲಿಸಿಸ್‌ ಕೇಂದ್ರದ ಕಾಮಗಾರಿಗೆ ಗ್ರಹಣ


Team Udayavani, Jan 3, 2020, 11:52 AM IST

cn–tdy-1

ಯಳಂದೂರು: ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯ ಆವರಣದಲ್ಲಿ ನಿರ್ಮಾಣಗೊಳ್ಳುತ್ತಿರುವ ಡಯಾಲಿಸಿದ್‌ ಕೇಂದ್ರದ ಕಟ್ಟಡ ಕಾಮಗಾರಿಯು ಕಳೆದ 2 ವರ್ಷದಿಂದಲ್ಲೂ ಆಮೆ ವೇಗದಲ್ಲಿ ಸಾಗುತ್ತಿರುವುದರಿಂದ ಬಡ ರೋಗಿಗಳಿಗೆ ತೊಂದರೆಯಾಗುತ್ತಿದೆ.

ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರವನ್ನು ತೆರೆಯುವುದರಿಂದ ಮೂತ್ರ ಪಿಂಡದ ವೈಫ‌ಲ್ಯದಿಂದ ಬಳಲುತ್ತಿರುವ ಅನೇಕ ರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ತಾಲೂಕು ಪಂಚಾಯ್ತಿ 2017-18ನೇ ಸಾಲಿನಲ್ಲಿ ತಾಪಂ ಅನುದಾನದಲ್ಲಿ 1.80 ಲಕ್ಷ ರೂ., 2018-19ರಲ್ಲಿ 4.90 ಲಕ್ಷ ರೂ., ಸೇರಿ ಒಟ್ಟು 6.70 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದೆ.

ಅನುದಾನದ ಕೊರತೆ: ಕಳೆದ 2 ವರ್ಷದಿಂದ ಡಯಾಲಿಸಿಸ್‌ ಕಟ್ಟಡವು ಹೆಚ್ಚು ಅನುದಾನದ ಕೊರತೆಯಿಂದ ಕುಂಟುತ್ತಾ ಸಾಗುತ್ತಿದೆ. ಪ್ರಸುತ್ತ ಡಯಾಲಿಸಿಸ್‌ ರೋಗವು ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಜನರನ್ನು ಬಲಿ ತೆಗೆದುಕೊಳ್ಳುತ್ತಿರುವ ಮಾರಣಾಂತಿಕ ರೋಗವಾಗಿದೆ. ಇದರ ಹತೋಟಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅತ್ಯಂತ ದುಬಾರಿ ವೆಚ್ಚದ ಔಷಧವನ್ನು ರಿಯಾಯಿತಿ ದರದಲ್ಲಿ ಲಭಿಸಲಿ ಎಂಬುದು ಸರ್ಕಾರದ ಉದ್ದೇಶವಾಗಿದೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮೂತ್ರಪಿಂಡ ವೈಫ‌ಲ್ಯ ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ಬಡ ರೋಗಿಗಳು ಮೈಸೂರು ಅಥವಾ ಚಾಮರಾಜನಗರ ಜಿಲ್ಲಾ ಕೇಂದ್ರಗಳ ಸರ್ಕಾರಿ ಆಸ್ಪತ್ರೆಗಳಿಗೆ ತೆರಳಬೇಕು. ಆದರೆ, ಇಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಕೆಲವೊಮ್ಮೆ ಚಿಕಿತ್ಸೆ ಲಭಿಸುವುದೇ ಇಲ್ಲ.

ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ: ಖಾಸಗಿ ಆಸ್ಪತ್ರೆಯಲ್ಲಿ ಒಂದು ಬಾರಿ ಡಯಾಲಿಸಿಸ್‌ ಮಾಡಲು ಸುಮಾರು 1 ಸಾವಿರಕ್ಕೂ ಹಣವನ್ನು ಪಾವತಿಸಬೇಕಾಗುತ್ತದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಬಡ ವರ್ಗದ ಜನರು ಅಧಿಕ ಹಣವನ್ನು ನೀಡಿ, ಚಿಕಿತ್ಸೆಯನ್ನು ಪಡೆಯಲು ಅಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲೇ ತಾಲೂಕಿಗೊಂದು ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡುವ ಉದ್ದೇಶದಿಂದ ಆರಂಭವಾಗಿದ್ದ ಕೇಂದ್ರ ಅನುದಾನದ ಕೊರತೆಯಿಂದ ಸೊರಗಿದೆ.

ಅವೈಜ್ಞಾನಿಕ ಕಾಮಗಾರಿ: ಸಾರ್ವಜನಿಕರ ಆಸ್ಪತ್ರೆಯು ಮುಂಭಾಗದಲ್ಲಿ ಆಸ್ಪತ್ರೆಯ ಲೆಕ್ಕ ಶೀರ್ಷಿಕೆಯ ಯೋಜನೆಯ ಅನುದಾನದಲ್ಲಿ ಈ ಹಿಂದೆ ಗೇಟ್‌ನ ಮುಂಭಾಗ ನಿರ್ಮಾಣವಾಗಿದ್ದ ಕಬ್ಬಿಣದ ಪಟ್ಟಿ (ಕೌ ಕ್ಯಾಚರ್‌) ಕಳಪೆ ಗುಣಮಟ್ಟದಿಂದ ಕೂಡಿತ್ತು. ಇಲ್ಲಿನ ಪೈಪ್‌ಗ್ಳು ಕಳಪೆ ದರ್ಜೆಯದಾಗಿದ್ದು, ಇದು ಬಾಗಿ ಕೊಂಡಿತ್ತು. ಇದನ್ನು ತೆಗೆದು ಈಗ ಕಬ್ಬಿಣದ ಚಾನೆಲ್‌ಗ‌ಳನ್ನು ಹಾಕಲಾಗಿದೆ. ಆದರೆ, ಇದರ ಅಂತರ ಹೆಚ್ಚಾಗಿದ್ದು, ಚಿಕ್ಕ ಮಕ್ಕಳ ಪಾದಗಳು ಸಿಲುಕಿಕೊಳ್ಳುವ ಅಪಾಯವಿದೆ. ಅಲ್ಲದೆ, ಇದಕ್ಕೆ ಪೈಪ್‌ಗ್ಳನ್ನು ಮಾತ್ರ ಬಳಸಲಾಗುತ್ತದೆ. ಆದರೆ, ಚಾನೆಲ್‌ಗ‌ಳ ಬಳಕೆಯಿಂದ ಕಾಲು ಸಿಲುಕಿದರೆ ಗಾಯವಾಗುವ ಸಾಧ್ಯತೆಯೂ ಅಧಿಕವಾಗಿದೆ.

ಮಕ್ಕಳು, ವೃದ್ಧರಿಗೆ ಅಪಾಯ: ಆಸ್ಪತ್ರೆ ಆವರಣಕ್ಕೆ ದನ ಕರುಗಳು ಹಾಗೂ ಇತರೆ ಪ್ರಾಣಿಗಳು ಬಾರದಿರಲಿ ಎಂಬ ಉದ್ದೇಶದಿಂದ ಇದನ್ನು ಹಾಕಿದ್ದಾರೆ. ಆದರೆ, ಸಾರ್ವಜನಿಕರಿಗೆ ಅದರಲ್ಲೂ ಮಕ್ಕಳು, ವಯೋವೃದ್ಧರಿಗೆ ಇದರಿಂದ ಅಧಿಕ ಅಪಾಯವಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ತಾಲೂಕು ಆಸ್ಪತ್ರೆ ಆಡಳಿತ ಮಂಡಳಿಯು ಕೂಡಲೇ ಕ್ರಮ ವಹಿಸಬೇಕು ಎಂಬುದು ಪ್ರಕಾಶ್‌, ನಾಗರಾಜು ಅವರ ಆಗ್ರಹವಾಗಿದೆ.

ಪ್ರಸುತ್ತ ಸಾಲಿನಲ್ಲಿ ತಾಪಂನಿಂದ ಮತ್ತೆ 2.45 ಲಕ್ಷ ರೂ. ಅನುದಾನವನ್ನು ಕಟ್ಟಡ ಕಾಮಗಾರಿಗೆ ಬಿಡುಗಡೆ ಮಾಡಿದೆ. ಬಾಕಿ ಇರುವ ಕೆಲಸವು ಪೂರ್ಣಗೊಂಡ ಬಳಿಕ ಡಯಾಲಿಸಿಸ್‌ ಕೇಂದ್ರವನ್ನು ತೆರೆಯುವ ನಿಟ್ಟಿನಲ್ಲಿ ಗಮನಹರಿಸಲಾಗುವುದು. ಡಾ.ಶ್ರೀಧರ್‌, ಆಡಳಿತಾಧಿಕಾರಿ, ಯಳಂದೂರು ತಾಲೂಕು ಆಸ್ಪತ್ರೆ

 

-ಪೈರೋಜ್‌ ಖಾನ್‌

ಟಾಪ್ ನ್ಯೂಸ್

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Drone: ಪುರಿ ದೇಗುಲದ ಮೇಲೆ ಡ್ರೋನ್‌ ಹಾರಾಟ: ಪೊಲೀಸರಿಂದ ತನಿಖೆ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Washington: ಹಿಲರಿ, ಸೊರೋಸ್‌ ಸೇರಿ 19 ಮಂದಿಗೆ ಅಮೆರಿಕ ನಾಗರಿಕ ಪ್ರಶಸ್ತಿ ಪ್ರದಾನ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

Govt.,: ಖಾಸಗಿ ಚಾಟ್‌ ತನಿಖಾ ಸಂಸ್ಥೆಗಳ ಕೈಗೆ ಸಿಗದಂತೆ ತಡೆಯಲು ಕೇಂದ್ರ ಕ್ರಮ

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

ಫೈನಲ್‌ ವೇಳೆ ನವೋಮಿ ಒಸಾಕಾ ಗಾಯಾಳು

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Tennis: ಅಲೆಕ್ಸಾಂಡರ್‌ ಮುಲ್ಲರ್‌ಗೆ ಹಾಂಕಾಂಗ್‌ ಪ್ರಶಸ್ತಿ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

9-chamarajanagara

Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ

Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

YouTuber: 40 ಗಂಟೆಗಳ ಕಾಲ ಖ್ಯಾತ ಯುಟ್ಯೂಬರ್‌ ಅಂಕುಶ್‌”ಡಿಜಿಟಲ್‌ ಅರೆಸ್ಟ್‌’

1-hrb

Hebri; ಬೈಕ್‌ಗೆ ಕಾರು ಢಿಕ್ಕಿ: ಯುವಕ ಸಾ*ವು

police

Mudbidri; ಎಂಟು ತಿಂಗಳ ಹಿಂದೆ ಬ್ಯಾಟರಿ ಕಳವು: ಇಬ್ಬರು ಆರೋಪಿಗಳ ಬಂಧನ

Exam

Udupi:ಕಾಲೇಜುಗಳಲ್ಲಿ ಯುವನಿಧಿ ನೋಂದಣಿ

1-aaaa

ಬಡ ದಂಪತಿಗೆ ಮಾಜಿ ಮೇಯರ್‌ ಸುಧೀರ್‌ ಶೆಟ್ಟಿ ನಿರ್ಮಿಸಿಕೊಟ್ಟ 12 ಲ.ರೂ. ಮನೆಯ ಗೃಹ ಪ್ರವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.