ನಾಗಮಲೆಗೆ ಜಿಲ್ಲಾಧಿಕಾರಿ ಭೇಟಿ: ಜನರ ಅಹವಾಲು ಆಲಿಕೆ
Team Udayavani, Mar 28, 2021, 3:50 PM IST
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧಯಾತ್ರಾಕ್ಷೇತ್ರ ಮಲೆ ಮಹದೇಶ್ವರ ಬೆಟ್ಟವ್ಯಾಪ್ತಿಯ ನಾಗಮಲೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಶನಿವಾರ ಭೇಟಿ ನೀಡಿದ್ದರು.
ದುರ್ಗಮ ಪ್ರದೇಶವಾಗಿರುವ ನಾಗಮಲೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಅಲ್ಲಿನದೇವಸ್ಥಾನಕ್ಕೆ ತೆರಳಿ ಅರ್ಚಕವೃಂದ ಹಾಗೂಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಅಹವಾಲುಗಳನ್ನು ಆಲಿಸಿದರು.ಇದೇ ವೇಳೆ ಗ್ರಾಮಸ್ಥರು ಸ್ಥಳೀಯವಾಗಿರಸ್ತೆ ಮಾಡಿಕೊಡಬೇಕಿದೆ.
ಈಗಿರುವ ರಸ್ತೆತೀರಾ ಹದಗೆಟ್ಟಿದ್ದು, ಜನರ ಓಡಾಟಕ್ಕೆ ಅನಾನುಕೂಲವಾಗಿದೆ. ಅಲ್ಲದೆ ವೈದ್ಯಕೀಯ ಚಿಕಿತ್ಸೆಪಡೆಯಲು ತುರ್ತು ಅಗತ್ಯವಿದ್ದಾಗ ಪ್ರಸ್ತುತರಸ್ತೆಯಲ್ಲಿ ತೆರಳಲು ಕಷ್ಟಸಾಧ್ಯವಾಗಿದೆ ಎಂದುಹೇಳಿದರು.
ಬೆಟ್ಟದ ಆಸ್ಪತ್ರೆಯಲ್ಲಿ ಉಳಿಯಲು ವ್ಯವಸ್ಥೆ:ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಗರ್ಭಿಣಿಯರು ಹೆರಿಗೆಗಾಗಿಆಸ್ಪತ್ರೆಗೆ ದಾಖಲಾಗುವ ತುರ್ತು ಸಂದರ್ಭದಲ್ಲಿ ರಸ್ತೆ ಇಲ್ಲದೇ ತೊಂದರೆಯಾಗಿರುವುದನ್ನುಗಮನಿಸಲಾಗಿದೆ. ಹೀಗಾಗಿ ಹೆರಿಗೆ ಸಮಯದಒಂದು ತಿಂಗಳ ಮುಂಚಿತವಾಗಿಯೇ ಮಹದೇಶ್ವರ ಬೆಟ್ಟದಲ್ಲಿರುವ ಆಸ್ಪತ್ರೆಗೆ ದಾಖಲಾಗಲು ಅನುಕೂಲವಾಗುವಂತೆ ಹಾಗೂಬೆಟ್ಟ ದಲ್ಲಿಯೇ ಉಳಿಯಲು ಅಗತ್ಯ ವ್ಯವಸ್ಥೆಕಲ್ಪಿಸಲು ಪರಿಶೀಲಿಸಲಾಗುವುದು ಎಂದರು.
ಆರೋಗ್ಯ ಸೌಲಭ್ಯಗಳಿಗಾಗಿ ಸ್ಥಳೀಯ ಗ್ರಾಮಗಳಿಗೆ ಸಂಚಾರಿ ವೈದ್ಯಕೀಯ ವಾಹನದವ್ಯವಸ್ಥೆ ಮಾಡಲಾಗುತ್ತದೆ. ಮಲೆ ಮಹದೇಶ್ವರಬೆಟ್ಟದ ಆಸ್ಪತ್ರೆಯನ್ನು ಸಮುದಾಯಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆ ಗೇರಿಸಲು ಆದೇಶ ಆಗಲಿದೆ ಎಂದು ತಿಳಿಸಿದರು.
ದುರಸ್ತಿಗೆ ನೆರವು: ನಂತರ ಸ್ಥಳೀಯರಸ್ತೆಯನ್ನು ಸಾಧ್ಯ ವಾದಷ್ಟು ಸುಧಾರಿಸುವಜೊತೆಗೆ ಸ್ಥಳೀಯ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು.ಬಳಿಕ ನಾಗಮಲೆಯಲ್ಲಿರುವ ಪ್ರಾಥಮಿಕಶಾಲೆಗೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಈಗಿರುವ ಕಟ್ಟಡದ ಬಲವರ್ಧನೆಗಾಗಿ ದುರಸ್ತಿ ಕೆಲಸವನ್ನು ಕೈಗೊಳ್ಳಲು ಎಂಜಿನಿಯರ್ ಅವರು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ. ಶಾಲೆಯ ದುರಸ್ತಿಗೆ ಅಗತ್ಯ ನೆರವುನೀಡಿ ಸೌಲಭ್ಯ ಕಲ್ಪಿಸಲಾಗುವುದೆಂದರು.
ಶಾಲೆಗೆ ಸೌಲಭ್ಯ: ಪ್ರಸ್ತುತ ಶಾಲೆಗೆ ನಿಯೋಜಿತರಾಗಿರುವ ಶಿಕ್ಷಕರು ಸರಿಯಾಗಿ ಹಾಜರಾಗುತ್ತಿದ್ದಾರೆಂದು ವರದಿ ಬಂದಿರುವುದರಿಂದಶಿಕ್ಷಕರ ಕೊರತೆ ಇಲ್ಲವೆಂಬ ಮಾಹಿತಿ ತಿಳಿದುಬಂದಿದೆ. ಶಾಲೆಗೆ ಬೇಕಿರುವ ಯಾವುದೇಸೌಲಭ್ಯ ಒದಗಿಸಲಾಗುವುದೆಂದು ಡೀಸಿಹೇಳಿದರು.ಈ ವೇಳೆ ಗ್ರಾಮಸ್ಥರು, ವ್ಯಾಪಾರಸ್ಥರ ಬಳಿಗೆತೆರಳಿದ ಜಿಲ್ಲಾಧಿಕಾರಿ, ಅವರ ಕುಂದುಕೊರತೆವಿಚಾರಿಸಿದರು. ಪ್ರತಿದಿನ ಅಂಗಡಿ ಮುಂಗಟ್ಟುಗಳಿಗೆ ಎಷ್ಟು ಜನ ಭಕ್ತರು ಭೇಟಿ ನೀಡುತ್ತಿದ್ದಾರೆ? ವ್ಯಾಪಾರ-ವಹಿವಾಟು ಹೇಗೆನಡೆಯುತ್ತಿದೆ? ಎಂಬ ಬಗ್ಗೆತಿಳಿದುಕೊಂಡರು.
ಭಕ್ತರಿಗೆ ತಿಳಿ ಹೇಳಿ: ಶಾಲಾ ಅವರಣದಲ್ಲಿಸ್ಥಳೀಯರು, ವ್ಯಾಪಾರಿಗಳು, ಅಂಗಡಿಮುಂಗಟ್ಟುಗಳ ಮಾಲಿಕರೊಂದಿಗೆ ಸಮಾಲೋಚನೆ ನಡೆಸಿದ ಜಿಲ್ಲಾಧಿಕಾರಿ, ಇಲ್ಲಿನಪರಂಪರೆ ಉಳಿಸಿಕೊಳ್ಳುವುದರ ಜೊತೆಗೆಪರಿಸರ ಉತ್ತಮವಾಗಿ ಕಾಪಾಡಿಕೊಳ್ಳಬೇಕು.ಪ್ಲಾಸ್ಟಿಕ್ ಬಳಸಬಾರದು, ಹೊರಗಿನವರುಯಾರೇ ಬರಲಿ ತ್ಯಾಜ್ಯವನ್ನು ಇಲ್ಲಿಸುರಿಯಬಾರದು. ತಾವೇ ತೆಗೆದುಕೊಂಡುಹೋಗಿ ಹೊರಗಿನ ಭಾಗದ ನಿಗದಿತ ಜಾಗದಲ್ಲಿಕಸವನ್ನು ಹಾಕಬೇಕು. ಈ ಬಗ್ಗೆ ಭಕ್ತರಿಗೆತಿಳಿಹೇಳುವ ಪ್ರಕ್ರಿಯೆ ಕೈಗೊಳ್ಳುವಂತೆಸೂಚಿಸಿದರು.ಈ ಸಮಯದಲ್ಲಿ ಲೋಕೋಪಯೋಗಿಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ಸುರೇಂದ್ರ, ಕಾವೇರಿ ವನ್ಯಜೀವಿ ವಲಯದಅರಣ್ಯಾಧಿಕಾರಿ ರಮೇಶ್, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Yelandur: ಮೂಗುರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆ; ಬಂಡಿ ಹರಿದು ಓರ್ವ ಮೃತ
Chamarajnagar: ತೂಕ ಇಳಿಸಿಕೊಳ್ಳಲು ಪೊಲೀಸರಿಗೆ ಬೆಟ್ಟ ಹತ್ತುವ ವ್ಯಾಯಾಮ!
Finance Debt: ಫೈನಾನ್ಸ್ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.