ಜನರಿಗೆ ಕಲುಷಿತ ಕೆರೆ ನೀರೇ ಗತಿ, ರೋಗ ಬಂದರೆ ಯಾರು ಹೊಣೆ?
Team Udayavani, Apr 12, 2021, 12:23 PM IST
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಅಭಯಾರಣ್ಯ ವ್ಯಾಪಿಯ ಕುಂದಕೆರೆ ವಲಯಕ್ಕೆಸೇರಿದ ಕಾಡಂಚಿನ ಗ್ರಾಮವಾದ ‘ಉಪಕಾರ ಕಾಲೋನಿ’ಯಲ್ಲಿ ನೀರಿಗೆ ಹಾಹಾಕಾರಉಂಟಾಗಿದ್ದು, ಇಲ್ಲಿನ ಜನರು ಕೆರೆ-ಕಟ್ಟೆಗಳಿಂದಕಲುಷಿತ ನೀರು ತಂದು ಕುಡಿಯುವ ಪರಿಸ್ಥಿತಿತಲೆದೋರಿದೆ. ಕಲುಷಿತ ನೀರು ಸೇವನೆಯಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ.ಆದರೆ, ಇದೇ ನೀರೇ ಜನರು ವಿಧಿಯಲ್ಲದೇ ಬಳಸುವಂತಾಗಿದೆ.
ಬಂಡೀಪುರ ವ್ಯಾಪ್ತಿಯ ಕುಂದಕೆರೆ ವಲಯಕ್ಕೆಸೇರಿದ ಕೊನೆಯ ಕಾಡಂಚಿನ ಗ್ರಾಮ ಇದಾಗಿದ್ದು,ಸುಮಾರು 70 ರಿಂದ 80 ಜೇನು ಕುರುಬರಮನೆಗಳಿವೆ. 200 ರಿಂದ 250 ಜನಸಂಖ್ಯೆಹೊಂದಿದ್ದರೂ ಇಲ್ಲಿಗೆ ನೀರು ಪೂರೈಸಲು ಒಂದುಕೊಳವೆ ಬಾವಿ ಇಲ್ಲ. ಇದರ ಬಗ್ಗೆ ಅರಿತಿದ್ದರೂಕ್ಷೇತ್ರದ ಶಾಸಕ ನಿರಂಜನಕುಮಾರ್,ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.
ಒಂದೂವರೆ ಕಿ.ಮೀ. ದೂರದಿಂದ ನೀರು:ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆಉಪಕಾರ ಕಾಲೋನಿ ಒಳಪಡಲಿದ್ದು, ಇಲ್ಲಿನಜನರು ಕುಡಿಯುವ ನೀರಿಗಾಗಿ ಒಂದೂವರೆಕಿ.ಮೀ. ದೂರದಿಂದ ಹೊತ್ತು ತರಬೇಕಿದೆ.ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಕೆಮಾಡುವುದು ಅನಿವಾರ್ಯವಾಗಿದ್ದರೂ ಸಹಪಂಚಾಯಿತಿಯಲ್ಲಿ ಹಣದ ಸಮಸ್ಯೆಯಿಂದಟ್ಯಾಂಕರ್ ನೀರು ಸರಬರಾಜು ಆಗದೆ ಜನರು ಪರದಾಡುವಂತಾಗಿದೆ.
ಕೆರೆ-ಕಟ್ಟೆ ನೀರು ಬಳಕೆ: ಗ್ರಾಮದಲ್ಲಿ ಈಗಾಗಲೇ ಅಳವಡಿಸಿರುವ ಪೈಪ್‌ಲೈನ್ ನಲ್ಲಿಗಳು,ತೊಂಬೆಗಳಲ್ಲಿ ನೀರು ಬಾರದ ಕಾರಣ ಜನರು ಕಾಡು ಪ್ರಾಣಿಗಳು ಕುಡಿಯುವ ನೀರನ್ನು ಕೆರೆ-ಕಟ್ಟೆಗಳಿಂದ ತಂದು ಕುಡಿಯುವ ಪರಿಸ್ಥಿತಿನಿರ್ಮಾಣವಾಗಿದೆ. ಈ ಬಗ್ಗೆ ಪಿಡಿಒ ರವಿಚಂದ್ರಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದುಸ್ಥಳೀಯರು ಅಳಲು ತೋಡಿಕೊಂಡರು.
ಕಾಲೋನಿಗೆ ಟ್ಯಾಂಕರ್ ಮೂಲಕ ತರುವ ನೀರು ಸ್ಥಗಿತವಾದರೆ ಅಕ್ಕಪಕ್ಕದ ಜಮೀನುಮಾಲಿಕರಿಂದ ಕಾಡಿಬೇಡಿ ನೀರು ತರಬೇಕಿದೆ.ಹಗಲಿನ ವೇಳೆ ನೀರು ತರಲು ಹೋದರೆ ಕೂಲಿಇಲ್ಲ, ಕೂಲಿಗೆ ಹೋದರೆ ನೀರಿಲ್ಲ ಎನ್ನುವಂತಾಗಿದೆ.ಇನ್ನು ತ್ರಿಫೇಸ್ ಕರೆಂಟ್ ಮಧ್ಯರಾತ್ರಿ ಇದ್ದಾಗವಿಷ ಜಂತು, ಕಾಡುಪ್ರಾಣಿಗಳ ಭಯದಲ್ಲಿ ನಲುಗುವಂತಾಗಿದೆ. ಬೇಸಿಗೆ ಆರಂಭದ ದಿನಗಳಲ್ಲೇ ಸಮಸ್ಯೆ ಮಿತಿಮೀರಿದ್ದು, ಮುಂದಿನ ದಿನಗಳನ್ನು ಹೇಗೆಎದುರಿಸುವುದು ಎನ್ನುವ ಆತಂಕ ಇಲ್ಲಿನ ನಿವಾಸಿಗಳಲ್ಲಿ ಮನೆ ಮಾಡಿದೆ.
ಉಪಕಾರ ಕಾಲೋನಿಯಲ್ಲಿ ನೀರಿನಸಮಸ್ಯೆ ಕುರಿತು ಅಧಿಕಾರಿಗಳಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನಪ್ರತಿನಿಧಿಗಳು ಆಗಮಿಸಿ ಮತ ಕೇಳುತ್ತಾರೆ.ನಂತರ ಇತ್ತ ಸುಳಿಯುವುದು ಇಲ್ಲ. ನಮ್ಮಸಮಸ್ಯೆ ಆಲಿಸುವುದಿಲ್ಲ. ಇಷ್ಟೆಲ್ಲ ಮಾಡುವಬದಲು ವಿಷ ಕೊಟ್ಟು ಬಿಡಿ ಎಲ್ಲರೂ ಸತ್ತು ಹೋಗುತ್ತೇವೆ. – ದೇವಮ್ಮ, ಉಪಕಾರ ಕಾಲೋನಿ ನಿವಾಸಿ
ಬಹುಗ್ರಾಮ ಕುಡಿಯುವ ನೀರುಯೋಜನೆಯಡಿ ಉಪಕಾರಕಾಲೋನಿಯಲ್ಲಿ ಸೇರಿದ್ದರೂ ಸಹ ನೀರಿನ ಸಮಸ್ಯೆ ತಲೆದೊರಿದೆ. ಈ ಬಗ್ಗೆ ಶೀಘ್ರಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರು ಪೂರೈಕೆಗೆ ಕ್ರಮ ವಹಸಿಲಾಗುವುದು. – ಶ್ರೀಕಂಠರಾಜೇ ಅರಸ್, ತಾಪಂ ಇಒ
– ಬಸವರಾಜು ಎಸ್.ಹಂಗಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.