“ಬರ ವೀಕ್ಷಣೆಗೆ ಸರ್ವಪಕ್ಷಗಳ ಸಮನ್ವಯ ಸಮಿತಿ ರಚಿಸಿ’
Team Udayavani, Feb 2, 2017, 3:16 PM IST
ಚಾಮರಾಜನಗರ: ರಾಜ್ಯದಲ್ಲಿ ತೀವ್ರ ಬರಗಾಲ ಕಾಣಿಸಿಕೊಂಡಿದ್ದು, ಮುಖ್ಯಮಂತ್ರಿಯವರು ಸರ್ವಪಕ್ಷಗಳನ್ನೊಳಗೊಂಡ ಬರಗಾಲ ವೀಕ್ಷಣಾ ಸಮನ್ವಯ ಸಮಿತಿ ರಚನೆ ಮಾಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದರು. ತಾಲೂಕಿನ ಪ್ರಮುಖ ಕೆರೆಗಳಾದ ಮರಗದ ಕೆರೆ, ಕೊತ್ತಲವಾಡಿ ಕೆರೆ, ಸುವರ್ಣನಗರ ಕೆರೆ, ಅರಕಲವಾಡಿ ಕೆರೆ, ಎಣ್ಣೆಹೊಳೆ ಕೆರೆಗಳಿಗೆ ಭೇಟಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಚಾಮರಾಜನಗರದಿಂದ – ಬೀದರ್, ಕೋಲಾರದಿಂದ – ಮಂಗಳೂರು ಸೇರಿದಂತೆ ಇಡೀ ರಾಜ್ಯದಲ್ಲಿ ಬೀಕರ ಬರಗಾಲ ಆವರಿಸಿದೆ. ರಾಜ್ಯದಲ್ಲಿ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಹಾರಂಗಿ, ಕಬಿನಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ತಳ ಮುಟ್ಟಿದೆ. ಕಾವೇರಿ, ಕಪಿ ಲಾ, ಹೇಮಾವತಿ ಸೇರಿದಂತೆ ರಾಜ್ಯದ ಅನೇಕ ನದಿಗಳು ಮಳೆ ಇಲ್ಲದೆ ನೀರಿಲ್ಲದೆ ಬತ್ತಿಹೋಗಿವೆ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಪರಿಹಾರ ಕಂಡು ಹಿಡಿಯುವ ಸಲುವಾಗಿ ಬರಗಾಲ ವೀಕ್ಷಣಾ ಸಮಿತಿ ರಚನೆ ಮಾಡಬೇಕು. ಈ ಸಮಿತಿಯು ರಾಜ್ಯದ ಪ್ರತಿ ಗ್ರಾಮ, ಹೋಬಳಿ ತಾಲೂಕು ಗಳಿಗೆ ಭೇಟಿ ನೀಡಿ ಸರ್ಕಾರಕ್ಕೆ ಕೂಡಲೇ ವರದಿ ಕೊಡಬೇಕು ಎಂದು ಒತ್ತಾಯಿಸಿದರು.
ಗುಳೆ ಹೋಗುವುದನ್ನು ತಪ್ಪಿಸಿ: ಪ್ರತಿ ಗ್ರಾಮಗಳಲ್ಲಿ ಜನರಿಗೆ ಕುಡಿಯುವ ನೀರು, ಜಾನು ವಾರುಗಳಿಗೆ ಕುಡಿಯಲು ನೀರು ಮತ್ತು ಮೇವು ಒದಗಿಸಬೇಕು, ನಮ್ಮ ರಾಜ್ಯದಿಂದ ಕೂಲಿ ಗಾಗಿ ನೆರೆಹೊರೆ ರಾಜ್ಯಗಳಿಗೆ ಜನರು ಗುಳೆ ಹೋಗುತ್ತಿದ್ದಾರೆ ಆದ್ದರಿಂದ ಕೂಡಲೇ ಅಧಿಕಾರಿಗಳ ತಂಡವನ್ನು ರಚಿಸಿ ಪ್ರತಿ ಹಳ್ಳಿಗಳಿಗೆ ಕಳುಹಿ ಸಬೇಕು ಎಂದು ವಾಟಾಳ್ ಒತ್ತಾಯಿಸಿದರು.
ನಾಡಿದ್ದು ಗಡಿಯಲ್ಲಿ ರಸ್ತೆ ತಡೆ: ಕೊತ್ತಲವಾಡಿ ಕೆರೆ, ಸುವರ್ಣನಗರಕೆರೆ, ಎಣ್ಣೆಹೊಳೆಕೆರೆ, ಅರಕಲ ವಾಡಿಕೆರೆ, ಬಂಡೀಗೆರೆ, ಮರಗದ ಕೆರೆ, ಚಿಕ್ಕಕೆರೆ ದೊಡ್ಡಕೆರೆ, ಸಿಂಡನಕೆರೆ, ಕೋಡಿಮೋಳೆಕೆರೆ, ದೊಡ್ಡರಾಯಪೇಟೆಕೆರೆ, ಮಾಲೆಗೆರೆ ಸೇರಿದಂತೆ ತಾಲೂಕಿನ ಇನ್ನಿತರ ಕೆರೆಗಳಿಗೆ ನದಿಗಳ ಪಾತ್ರದಿಂದ ಕುಡಿಯುವ ನೀರು ತುಂಬಿಸಬೇಕು ಎಂದು ಒತ್ತಾಯಿಸಿ ಫೆ.4ರಂದು ಹರದನಹಳ್ಳಿ ಗ್ರಾಮದಲ್ಲಿ ಚಾಮರಾಜನಗರ-ಸತ್ಯಮಂಗಲಕ್ಕೆ ಹೋಗುವ 209 ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಬಂದಿದ್ದರೂ ನಮ್ಮ ರಾಜ್ಯದ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರ ಲೋಕಸಭೆ ಸದಸ್ಯರು, ಪ್ರಧಾ ನಿಯವರನ್ನ ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿ ಮಾತುಕತೆ ಮಾಡಿಲ್ಲ. ಕೇಂದ್ರದಿಂದ ರಾಜ್ಯಕ್ಕೆ ಹಣ ಬಿಡುಗಡೆ ಮಾಡಿಸಲು ನಮ್ಮ ಸಂಸದರು ಸಂಪೂರ್ಣ ವಿಫಲರಾಗಿದ್ದಾರೆ. ಲೋಕ
ಸಭೆಯಲ್ಲಿ ಗಲಾಟೆ, ಧರಣಿ, ಸಭಾತ್ಯಾಗ, ಸತ್ಯಾ ಗ್ರಹ ಒತ್ತಡ ಮಾಡದೆ ರಾಜ್ಯದ ಹಿತ ಕಾಯಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಾಟಾಳ್ ಟೀಕಿಸಿದರು.
ಸಂಸದರ ವಿರುದ್ಧ ಪ್ರತಿಭಟನೆ: ಒಂದು ವಾರದ ಒಳಗೆ ನಮ್ಮ ರಾಜ್ಯದ ಸಂಸದರು ಕೇಂದ್ರದಿಂದ ಬರಗಾಲ ಸೇರಿದಂತೆ ರಾಜ್ಯದ ಅನೇಕ ಸಮಸ್ಯೆಗಳ ಬಗ್ಗೆ ಪ್ರಧಾನಿಯವರನ್ನ ಭೇಟಿ ಮಾಡಬೇಕು. ಒತ್ತಡ ಹೇರಬೇಕು, ಹಣ ತರಬೇಕು, ಇಲ್ಲದಿದ್ದಲ್ಲಿ ಸಂಸದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ವಾಟಾಳ್ ತಿಳಿಸಿದರು.
ಬರಗಾಲ ವಿಷಯದಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ತಾರತಮ್ಯ ಎಸಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶಕ್ಕೆ ಹೆಚ್ಚಿನ ನೆರವು ನೀಡುತ್ತದೆ. ರಾಜ್ಯಕ್ಕೆ ಕಡಿಮೆ ಹಣ ನೀಡುತ್ತಿದೆ ಎಂದು ಅವರು ಆರೋಪಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ರವಿಕುಮಾರ್, ಮಹೇಶ, ಹರದನಹಳ್ಳಿ ಗ್ರಾಪಂ ಅಧ್ಯಕ್ಷ ಸುಬ್ಬಶೆಟ್ಟಿ, ಶಿವಸ್ವಾಮಿ ಪ್ರಕಾಶ್, ಶಿವಸ್ವಾಮಿ, ನಾರಾ ಯಣಸ್ವಾಮಿ, ವಿಜಯ್, ಶ್ರೀನಿವಾಸ್, ಕಾರ್‌ನಾಗೇಶ್, ಹುಂಡಿ ಬಸವಣ್ಣ ವರದರಾಜು, ಮಹದೇವನಾಯ್ಕ, ಶಿವಲಿಂಗಮೂರ್ತಿ, ನಾಗ ರಾಜು, ಸುಬ್ರಹ್ಮಣ್ಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.