ಶಿಕ್ಷಣ ಮಾನವೀಯ ಸಮಾಜಕ್ಕೆ ನೆಲೆಯಾಗಬೇಕು
ಮಕ್ಕಳ ಲೋಕದ ಮನಸುಗಳ ದುಂಡು ಮೇಜಿನ ಸಭೆಯಲ್ಲಿ ದೇವನೂರು ಮಹಾದೇವ ಅಭಿಮತ
Team Udayavani, Jul 14, 2019, 11:57 AM IST
ಚಾಮರಾಜನಗರ: ಶಿಕ್ಷಣದ ಹೆಸರಿನಲ್ಲಿ ಮಕ್ಕಳ ತಲೆಗೆ ಮಾಹಿತಿ ತುಂಬಲಾಗುತ್ತಿದೆ. ಹೀಗೆ ಕೇವಲ ಮಾಹಿತಿ ತುಂಬುವುದರಿಂದ ಮಕ್ಕಳ ಸಹಜ ಭಾವನೆ, ಕಲ್ಪನೆ, ಸಂವೇದನೆಯನ್ನು ನಾವೇ ಕೊಲ್ಲುತ್ತಿದ್ದೇವೆ ಎಂದು ಹಿರಿಯ ಸಾಹಿತಿ ದೇವನೂರು ಮಹಾದೇವ ವಿಷಾದಿಸಿದರು.
ನಗರದ ದೀನಬಂಧು ಆಶ್ರಮದಲ್ಲಿ, ದೀನ ಬಂಧು ಟ್ರಸ್ಟ್, ರಂಗವಾಹಿನಿ ಸಂಸ್ಥೆ, ಧಾರವಾ ಡದ ಚಿಲಿಪಿಲಿ ಬಳಗದಿಂದ ಆಯೋಜಿಸಲಾಗಿದ್ದ ಮಕ್ಕಳ ಲೋಕದ ಮನಸುಗಳ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದರು.
ಸೃಜನಶೀಲ ಚಟುವಟಿಕೆ ಕಲಿಯಲು ಪ್ರೇರೇಪಿ: ಮಕ್ಕಳ ಕಲಿಕೆಗೆ ಪ್ರಸ್ತುತ ಕಟ್ ಅಂಡ್ ಪೇಸ್ಟ್ ಮಾದರಿ ಅನುಸರಿಸಲಾಗುತ್ತಿದೆ. ಶಿಕ್ಷಣ ಮಾನ ವೀಯ ಸಮಾಜಕ್ಕೆ ಒಂದು ನೆಲೆಯಾಗಬೇಕು. ನಾಟಕ ಅಥವಾ ಯಾವುದೇ ಸೃಜನಶೀಲ ಚಟುವಟಿಕೆಗಳನ್ನು ಕಲಿಯಲು ಪ್ರೇರೇಪಿಸಬೇಕು. ಮಾನವೀಯ ಸಮಾಜ ಕಟ್ಟಲು ಪೂರಕವಾಗಿ ಒತ್ತಾಸೆಯಾಗಿರಬೇಕು ಎಂದರು.
ಕಲೆ, ಸಾಹಿತ್ಯ ಕಲಿಸಿ:ಮಕ್ಕಳು ತಮ್ಮ ಸುತ್ತಮು ತ್ತಲಿನ ಪರಿಸರದ ಕಲೆ ಸಾಹಿತ್ಯವನ್ನು ಕಲಿಯಬೇಕು. ಶಾಲೆ ಮುಗಿದ ಮೇಲೆ ಒಂದು ಗಂಟೆ, ರಜಾದಿನಗಳಲ್ಲಿ ವಿಶೇಷವಾಗಿ ಮಕ್ಕಳ ಪ್ರತಿಭೆ ಯನ್ನು ಅರಳಿಸುವ ದೃಷ್ಟಿಕೋನದ ಶಿಕ್ಷಣ ವ್ಯವಸ್ಥೆ ಬರಬೇಕು. ಮಕ್ಕಳಿಗೆ ಶಿಕ್ಷಣ ನೀಡುತ್ತೇ ವೆಂದು ಅವುಗಳು ಸಂವೇದನೆಯನ್ನು ನಾವೇ ಕಳೆದುಕೊ ಳ್ಳುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಇತ್ತೀಚೆಗೆ ಸೃಜನಶೀಲ ಸಿನಿಮಾಗಳು ಕಡಿಮೆ: ಚಲನಚಿತ್ರ ನಿರ್ದೇಶಕ ಬಿ. ಸುರೇಶ್ ಮಾತನಾಡಿ, ಕನ್ನಡದಲ್ಲಿ ಅತಿ ಹೆಚ್ಚು ಮಕ್ಕಳ ಸಿನಿಮಾ ತಯಾರಿಸಲಾಗುತ್ತಿದೆ. ಅವುಗಳಲ್ಲಿ ಹೆಚ್ಚು ಸಿನಿಮಾಗಳು ತಯಾರಾಗುತ್ತಿರುವುದು ಸರ್ಕಾರ ದಿಂದ ಸಬ್ಸಿಡಿ ದೊರಕುತ್ತದೆ ಎಂಬ ಕಾರಣದಿಂದ. ಸೃಜನಶೀಲ ಸಿನಿಮಾಗಳು ಕಡಿಮೆ. ಶಾಲಾ ಮಕ್ಕಳನ್ನು ಸಿನಿಮಾಕ್ಕೆ ಬಳಸಿಕೊಳ್ಳುತ್ತೇವೆ. ಮಕ್ಕಳಿಗೆ ಆ ಸಮಸ್ಯೆಗಳ ಅರಿವೇ ಇರುವುದಿಲ್ಲ. ಅದರ ಭಾವವೇ ಗೊತ್ತಿರುವುದಿಲ್ಲ. ಮಕ್ಕಳ ಸಮಸ್ಯೆಯನ್ನು ಸಿನಿಮಾಗಳಲ್ಲಿ ತೋರಿಸುತ್ತಿಲ್ಲ. ಅದರ ಬದಲು ಅವರ ಪೋಷಕರ ಸಮಸ್ಯೆಗಳನ್ನೇ ಹೆಚ್ಚಾಗಿ ತೋರಿಸಲಾಗುತ್ತದೆ ಎಂದರು.
ಪ್ರಾದೇಶಿಕ ಸಂಸ್ಕೃತಿ ಇರುವುದಿಲ್ಲ: ತಯಾರಾದ ಸಿನಿಮಾಗಳ ಪ್ರದರ್ಶಿಸಲು ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಶಾಲೆಗಳಿಗೆ ಟಿಕೆಟ್ ನೀಡಿ ಸಿನಿಮಾ ಪ್ರದರ್ಶಿಸಲಾಗುತ್ತದೆ. ಇದನ್ನೇ ಒಂದು ದಂಧೆ ಮಾಡಿಕೊಡಲಾಗುತ್ತಿದೆ ಎಂದ ಅವರು, ಟಿವಿ ರಿಯಾಲಿಟಿ ಶೋಗಳಿಗೆ ಹಾಡು ಹೇಳಲು ಮಕ್ಕಳನ್ನು ಬಳಸಿಕೊಳ್ಳಲಾಗುತ್ತದೆ. ಪ್ರಾದೇಶಿಕ ಸಂಸ್ಕೃತಿ ಇರುವುದಿಲ್ಲ ಎಂದು ಟೀಕಿಸಿದರು.
ಮಕ್ಕಳ ಮೇಲೆ ದೌರ್ಜನ್ಯ ನಿಲ್ಲಿಸಿ: ರಂಗ ನಿರ್ದೇಶಕ ಮಂಡ್ಯ ರಮೇಶ್ ದೃಶ್ಯ ಮಾಧ್ಯಮದ ಕುರಿತು ಮಾತನಾಡಿ, ನಾಳೆಯೇ ನಮ್ಮ ಮಕ್ಕಳು ಸ್ಟಾರ್‌ಗಳಾಗಬೇಕೆಂಬ ಪೋಷಕರ ಅತಿಯಾಸೆ ಯಿಂದಾಗಿ ಮಕ್ಕಳ ಮೇಲೆ ದೌರ್ಜನ್ಯ ಎಸಗಲಾಗುತ್ತದೆ. ಇದು ಒಣ ಪ್ರತಿಷ್ಠೆಯಾಗಿದೆ ಮಕ್ಕಳ ಮೇಲೆ ಅತಿಯಾದ ಒತ್ತಡ ಹೇರಬಾರದು. ಇದು ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇದೊಂ ದು ಸಮಾಜಿಕ ಪೀಡುಗಗಾಗಿದೆ ಎಂದರು.
ಮಕ್ಕಳು ಶಾಲೆ ಬಿಟ್ಟು ಹೋಗದಿರಿ: ಒಂದು ಸಿನಿಮಾ, ಧಾರಾವಾಹಿಯಲ್ಲಿ ನಟಿಸಿದ ಹುಡು ಗನ್ನು ವೈಭವದಿಂದ ನೋಡುವುದು ಒಳ್ಳೆಯದಲ್ಲ. ಇನ್ನೊಬ್ಬರ ಸಂತೋಷಕ್ಕಾಗಿ ಬದುಕುವ ಸ್ಥಿತಿ ಬಂದಿದೆ. ಸ್ಥಳೀಯ ನೆಲಕ್ಕೆ ಅಂಟಿಕೊಳ್ಳದೇ ಆಕಾಶಕ್ಕೆ ಜಿಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಆದರ್ಶ ವ್ಯಕ್ತಿತ್ವಗಳನ್ನು ರೂಪಿಸುವುದು ಕಡಿಮೆಯಾಗುತ್ತಿದೆ ಎಂದ ಅವರು, ದೃಶ್ಯ ಮಾಧ್ಯಮದಲ್ಲಿ ಒಂದು ವರ್ಷ ಅಥವಾ 6 ತಿಂಗಳು ಚಿತ್ರೀಕರಣಕ್ಕಾಗಿ ಮಕ್ಕಳು ಶಾಲೆ ಬಿಟ್ಟು ಹೋಗುವುದು ಮಕ್ಕಳ ಶೋಷಣೆ. ಇದಕ್ಕೆ ಯಾವುದೇ ಕಾನೂನು, ಹಕ್ಕು ಇಲ್ಲವೇ ಎಂದು ಪ್ರಶ್ನಿಸಿದರು.
ಮಕ್ಕಳಲ್ಲಿ ಪ್ರೀತಿ ತುಂಬಿ:ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಜಿ.ಎಸ್. ಜಯದೇವ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೀತಿಸುವ ಮನಸ್ಸು ಗಳನ್ನು ಬೆಳೆಸಬೇಕು. ಮಕ್ಕಳಿಗೆ ಸ್ವಾತಂತ್ರ್ಯ ನೀಡ ಬೇಕು. ಪ್ರೀತಿ ಸ್ವಾತಂತ್ರ್ಯದ ಹೂವು. ಮಕ್ಕಳ ಅನೈತಿಕ ಯಶಸ್ಸನ್ನು ಪ್ರೋತ್ಸಾಹಿಸಿದರೆ, ಮುಂದೆ ಅವರ ಭವಿಷ್ಯವನ್ನು ನರಕವಾಗುತ್ತದೆ. ಮಕ್ಕಳಿಗೆ ಅವರ ಬಾಲ್ಯವನ್ನು ಪ್ರೀತಿಸಲು, ಅನುಭವಿಸಲು ಅವಕಾಶ ನೀಡಬೇಕು. ನನ್ನ ಊರು, ನನ್ನ ಶಾಲೆ, ಇದು ನನ್ನದು ಎಂಬ ಪ್ರೀತಿ ಮಕ್ಕಳಲ್ಲಿ ಬೆಳೆಯಬೇಕು ಎಂದರು.
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಶಂಕರ್ ಹಲಗತ್ತಿ ಪ್ರಾಸ್ತಾವಿ ಕವಾಗಿ ಮಾತನಾಡಿ, ಚಾಮರಾಜನಗರದ ಮಕ್ಕಳ ಲೋಕ ಮನಸಗಳ ದುಂಡು ಮೇಜಿನ ಸಭೆಯಲ್ಲಿ ಮಕ್ಕಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ. ಈ ಸಭೆ ಮಕ್ಕಳ ಸಮಸ್ಯೆ ನಿವಾರಣೆಗೆ ಧ್ವನಿಯಾಗಬೇಕು. ಸರ್ಕಾರ ಹಾಗೂ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡು ವ ನಿಟ್ಟಿನಲ್ಲಿ ಚರ್ಚೆಯಾಗಬೇಕಿದೆ ಎಂದರು.
ಮಕ್ಕಳ ದೃಶ್ಯ ಮಾಧ್ಯಮ ಶಿಕ್ಷಣ, ಮಕ್ಕಳ ಹಕ್ಕುಗಳು ಕುಟುಂಬ ಸಾಂಸ್ಕೃತಿಕ, ರಂಗಭೂಮಿ, ಸಾಹಿತ್ಯ ಕುರಿತು ಮಕ್ಕಳ ತಜ್ಞರಿಂದ ಚರ್ಚೆ ನಡೆಯಿತು. ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿ.ಎಂ. ನರಸಿಂಹಮೂರ್ತಿ, ದೀನಬಂಧು ಸಂಸ್ಥೆಯ ಪ್ರಜ್ಞಾ, ಸುನೀಲ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pro Kabaddi;ಬೆಂಗಳೂರು ಬುಲ್ಸ್ ಜಯಭೇರಿ: ತಮಿಳ್ ತಲೈವಾಸ್‌ಗೆ 32-36 ಅಂಕಗಳ ಸೋಲು
Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡರ್ ಸ್ಫೋ*ಟ: ಅಪಾರ ಹಾನಿ
Kasaragod: ಪಟಾಕಿ ದುರಂತ ಪ್ರಕರಣ; ಸಾವಿನ ಸಂಖ್ಯೆ 4ಕ್ಕೆ ಏರಿಕೆ
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
Manipal: ಸಾಲದಿಂದ ಬೇಸತ್ತು ಮಹಿಳೆ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.