ಕೈ ಅಭ್ಯರ್ಥಿ ಎಆರ್‌ಕೆ ಪರ ಬಿರುಸಿನ ಪ್ರಚಾರ
Team Udayavani, May 6, 2023, 3:53 PM IST
ಕೊಳ್ಳೇಗಾಲ: ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಕೊಪ್ಪಾಳಿ ಮಹದೇವ ನಾಯಕ ನಗರದ ದೊಡ್ಡನಾಯಕರ ಬೀದಿ ಬಡಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ. ಆರ್.ಕೃಷ್ಣಮೂರ್ತಿ ಪರ ಬಿರುಸಿನ ಶುಕ್ರವಾರ ಮತಯಾಚನೆ ಮಾಡಿದರು.
ನಗರದ 10ನೇ ವಾರ್ಡಿನ ದೊಡ್ಡನಾಯಕರ ಬಡಾವಣೆಯಲ್ಲಿ ಮನೆ ಮನೆಗೆ ತೆರಳಿದ ಮುಖಂಡರು ಕರಪತ್ರವನ್ನು ಹಂಚಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗುರುತು ಹಸ್ತಕ್ಕೆ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು. ಮನೆ ಮನೆಗೆ ತೆರಳಿ ಕರಪತ್ರವನ್ನು ಹಂಚಿದ ಬಳಿಕ ಮಾತನಾಡಿದ ಕೊಪ್ಪಾಳಿ ಮಹದೇವನಾಯಕ, ಕಾಂಗ್ರೆಸ್ ಸಾಮಾಜಿಕ ನ್ಯಾಯ ಕೊಡುವ ಪಕ್ಷವಾಗಿದ್ದು ಇಲ್ಲಿ ಎಲ್ಲರಿಗೂ ರಾಜಕೀಯ ಅವಕಾಶ ದೊರೆಯಲಿದೆ. ಆದ್ದರಿಂದ ಮೇ 10ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಅತಿ ಹೆಚ್ಚು ಮತ ನೀಡಿ ಜಯಶೀಲರನ್ನಾಗಿ ಮಾಡಬೇಕು ಎಂದರು.
ನಗರಸಭೆಯ ಉಪಾಧ್ಯಕ್ಷೆ ಸುಶೀಲಾ ಮಾತನಾಡಿ, ನಾಯಕ ಸಮಾಜ ಅತ್ಯಂತ ಹಿಂದುಳಿದ ಸಮಾಜವಾ ಗಿದ್ದು ಕಾಂಗ್ರೆಸ್ ನನಗೆ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನೀಡಿತ್ತು. ಅವಧಿಯ ಬಳಿಕ ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ನಗರಸಭೆಯಲ್ಲಿ ಉತ್ತಮ ಸೇವೆ ಮಾಡುವಲ್ಲಿ ಮುಂದಾದ ವೇಳೆಯಲ್ಲಿ ಶಾಸಕ ಎನ್. ಮಹೇಶ್ ಮಧ್ಯಪ್ರವೇಶ ಮಾಡಿ ಅಭಿವೃದ್ಧಿ ಕೆಲಸಗಳಿಗೆ ಕುಂಠಿತವಾಯಿತು ಎಂದು ತಮ್ಮ ಆಢಳಿತ ಅವಧಿಯ ಬಗ್ಗೆ ಅಸಮಾಧಾನ ತೊಡಿಕೊಂಡರು.
ನಗರಸಭಾ ಸದಸ್ಯರಾದ ಶಾಂತರಾಜು, ರಾಘವೇಂದ್ರ, ಸುರೇಶ್, ಸುಮಾ, ಜಿಪಿ ಶಿವಕುಮಾರ್, ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರವಿ, ಮುಖಂಡರಾದ ಮಾದಪ್ಪ, ನರಸಿಂಹನ್, ನಟರಾಜು ಮಾಳಿಗೆ, ಕೃಷ್ಣರಾಜು, ಚಿನ್ನಸ್ವಾಮಿ ಮಾಳಿಗೆ, ಪ್ರಕಾಶ್, ಸುರೇಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.