ಆಶ್ರಯ ನಿವಾಸಿಗಳಿಗೆ ವಿದ್ಯುತ್ ಹೊರೆ
Team Udayavani, Jun 18, 2020, 5:07 AM IST
ಯಳಂದೂರು: ಪಟ್ಟಣದ ಒಂದನೇ ವಾರ್ಡಿನ ಆಶ್ರಯ ಬಡಾವಣೆ ನಿವಾಸಿಗಳೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಿದ್ದು ಸಾವಿರಾರು ರೂ. ಬಿಲ್ ಪಾವತಿಸಲಾಗದೆ ನಿವಾಸಿಗಳು ಬಿಲ್ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಬಡಾವಣೆಯಲ್ಲಿ ಮನೆಗಳಿಗೆ ಬರುವ ಬಿಲ್ ಮಾತ್ರ ಇನ್ನೂ ತಾತ್ಕಾಲಿಕ ಸಂಪರ್ಕಲ್ಲಿದ್ದು, 1ರಿಂದ 3 ಸಾವಿರ ರೂ. ಗಳ ವರೆಗೂ ಬಿಲ್ ಬರುತ್ತಿದೆ. ಇಲ್ಲಿ ಪಟ್ಟಣ ಪಂಚಾಯಿತಿ ಖಾಲಿ ನಿವೇಶನಗಳು ಬಡವರಿಗೆ ನೀಡಿ ದಶಕವೇ ಕಳೆದಿದೆ. ಆದರೆ, ಮೂಲ ಸೌಲಭ್ಯ ಮಾತ್ರ ಕಲ್ಪಿಸಿಲ್ಲ. ನಾವು ಮನೆ ನಿರ್ಮಿಸಿ ಐದು ವರ್ಷಗಳಾಗಿದೆ. ಅಲ್ಲಿಂದ ಇಲ್ಲಿವರೆಗೆ 70 ಸಾವಿರ ರೂ.ಗಿಂತಲೂ ಹೆಚ್ಚು ವಿದ್ಯುತ್ ಬಿಲ್ ಪಾವತಿಸಿದ್ದೇನೆ. ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.
ಈ ಬಗ್ಗೆ ಹಲವು ಬಾರಿ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ. ಕೂಡಲೇ ಸಂಬಂಧಪಟ್ಟವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ನಿವಾಸಿಗಳಾದ ಸ್ವಾಮಿ, ರತ್ನಮ್ಮ ದೂರಿದರು. ಇಲ್ಲಿನ ವಾಸಿಗಳಾದ ಇರ್ಷಾದ್, ಪಾರ್ವತಿ, ಲಕ್ಷ್ಮಮ್ಮ, ಯಶೋಧಾ, ಭಾಗ್ಯ, ಜಯಲಕ್ಷ್ಮೀ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Puttur: ಕೆರೆಗೆ ಬಿದ್ದು ವ್ಯಕ್ತಿ ಸಾವು
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.