ಆಹಾರ ಅರಸಿ ಬಂದ ಆನೆ ವಿದ್ಯುತ್ ಸ್ಪರ್ಶಿಸಿ ಸಾವು
Team Udayavani, Jul 9, 2017, 3:50 AM IST
ಗುಂಡ್ಲುಪೇಟೆ: ಆಹಾರವನ್ನು ಅರಸಿ ಬಂದ ಸಲಗವೊಂದು ಜಮೀನಿನಲ್ಲಿ ವಿದ್ಯುತ್ ಸ್ಪರ್ಶಕ್ಕೆ ಬಲಿಯಾಗಿದೆ. ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಗೆ ಬರುವ ಕುಂದಕೆರೆ ಅರಣ್ಯ ವಲಯದ ಅಂಚಿನ ಗ್ರಾಮವಾದ ಬೊಮ್ಮನಹಳ್ಳಿ ಸಮೀಪದಲ್ಲಿರುವ ನಂಜರಾಜು ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದೆ.
ವಿಷಯ ತಿಳಿದ ಅರಣ್ಯಾಧಿಕಾರಿಗಳು, ಪೊಲೀಸ್, ಸೆಸ್ಕ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಸುಮಾರು 20 ವರ್ಷ ಪ್ರಾಯದ ಗಂಡಾನೆಯು ವನ್ಯಪ್ರಾಣಿಗಳಿಂದ ರಕ್ಷಣೆಗಾಗಿ ಹಾಕಿದ್ದ ಬೇಲಿಗೆ ಅಕ್ರಮವಾಗಿ ಸಂಪರ್ಕಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಈ ವಾದವನ್ನು ಒಪ್ಪದ ರೈತರು, ಜಮೀನಿನ ಪಂಪ್‌ಸೆಟ್ಟಿಗೆ ಸಂಪರ್ಕ ಕಲ್ಪಿಸುವ ತಂತಿಗಳು ಸೆಸ್ಕ್ ನಿರ್ಲಕ್ಷ್ಯದಿಂದ ನಿರ್ವಹಣೆ ಇಲ್ಲದೇ ಕೆಳಗೆ ಜೋತು ಬಿದ್ದಿವೆ. ಇದನ್ನು ಸ್ಪರ್ಶಿಸಿರುವ ಕಾರಣ ಆನೆ ಮೃತಪಟ್ಟಿದೆ ಎಂದು ವಾದಿಸಿದ್ದಾರೆ.
ಅರಣ್ಯ ಇಲಾಖೆಯ ಪಶುವೈದ್ಯ ಡಾ.ನಾಗರಾಜು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಆನೆಗೆ ಹೊಟ್ಟೆಯಲ್ಲಿ ಹುಳಗಳಿವೆ.
ಸರಿಯಾಗಿ ಆಹಾರ ಸೇವನೆ ಮಾಡಲಾಗದೆ ನಿತ್ರಾಣವಾಗಿತ್ತು ಎಂದು ತಿಳಿಸಿದರು. ಈಚೆಗಷ್ಟೇ ಕೊಡಗು ಜಿಲ್ಲೆಯಲ್ಲಿ ವಿದ್ಯುತ್ ಸ್ಪರ್ಶದಿಂದ 6 ಆನೆಗಳು ಮೃತಪಟ್ಟಿದ್ದನ್ನು ಸ್ಮರಿಸಬಹುದು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.