ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಿ: ಯದುವೀರ್
Team Udayavani, Jun 30, 2019, 3:00 AM IST
ಕೊಳ್ಳೇಗಾಲ: ಪೋಷಕರು ತಮ್ಮ ಮಕ್ಕಳಿಗೆ ಸಸಿ ನೆಡುವ ಮತ್ತು ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸಿದರೆ ಉತ್ತಮ ವಾತಾವರಣ ಸೃಷ್ಟಿಯಾಗಲು ಸಾಧ್ಯ ಎಂದು ಮೈಸೂರಿನ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಪಟ್ಟಣದ ವಾಸವಿ ಶಿಕ್ಷಣ ಸಂಸ್ಥೆಯಲ್ಲಿ ನೂತನವಾಗಿ ಆರಂಭಿಸಿರುವ ಸಿಬಿಎಸ್‌ಸಿ ವಿಭಾಗವನ್ನು ಶನಿವಾರ ಉದ್ಘಾಟಿಸಿದ ಬಳಿಕ ಮಾತನಾಡಿದರು. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಇಲ್ಲಿ ಅವರಿಗೆ ಪರಿಸರದ ಬಗ್ಗೆ ಸಂಪೂರ್ಣ ತಿಳಿವಳಿಕೆ ದೊರಕಿಸಿಕೊಡಬೇಕು. ಮತ್ತು ಪರಿಸರವನ್ನು ಸ್ವಚ್ಛವಾಗಿಡುವಂತೆ ಅರಿವು ಮೂಡಿಸಬೇಕೆಂದರು.
ಕಳೆದ 1ತಿಂಗಳಿನಿಂದ ವಾಸವಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯವರು ನೂತನವಾಗಿ ಆರಂಭವಾಗಿರುವ ಸಿಬಿಎಸ್‌ಸಿ ವಿಭಾಗವನ್ನು ಮೈಸೂರು ಸಂಸ್ಥಾನದ ಯದುವೀರ್ ಅವರಿಂದಲೇ ಉದ್ಘಾಟಿಸಬೇಕೆಂದು ಕೇಳಿಕೊಂಡ ಹಿನ್ನೆಲೆಯಲ್ಲಿ ಮತ್ತು ವಿದ್ಯಾರ್ಥಿಗಳಿಗೆ ಸೂಕ್ತ ತಿಳಿವಳಿಕೆ ನೀಡಬೇಕೆಂಬ ಸಲಹೆ ಮೇರೆಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಗಿದೆ ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ಪರಿಸರ ನಾಶದಿಂದ ಬರಬೇಕಾದ ಮಳೆ ಸರಿಯಾಗಿ ಬಾರದೆ ನದಿ ಪ್ರದೇಶಗಳಲ್ಲಿ ನೀರು ತಳ ಹಿಡಿದಿದೆ. ನೀರಿಲ್ಲದೆ ರೈತರು ಕೃಷಿ ಮಾಡಲಾಗದೆ ಕಷ್ಟದಲ್ಲಿ ಸಿಲುಕುವಂತೆ ಆಗಿದೆ. ಇದಕ್ಕೆಲ್ಲಾ ಪರಿಹಾರ ಕಂಡುಕೊಳ್ಳಲು ಸಸಿಗಳನ್ನು ಹೆಚ್ಚು ಬೆಳೆದು ಮೋಡದ ವಾತವರಣ ಸೃಷ್ಟಿಸಿ ಸರಾಗವಾಗಿ ಮಳೆ ಬಂದು ಜನರಲ್ಲಿ ಸುಭಿಕ್ಷತೆ ಕಾಣಬಹುದು ಎಂದು ಹೇಳಿದರು.
ಅರಣ್ಯ ಇಲಾಖೆ ಶಾಲಾ ಕಾಲೇಜುಗಳ ಮೂಲಕ ಮತ್ತು ವಿವಿಧ ಪ್ರಗತಿಪರ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಸಂಘಸಂಸ್ಥೆಯವರು ಸಕ್ರಿಯವಾಗಿ ಪಾಲ್ಗೊಂಡು ಸಸಿ ನೆಡಬೇಕೆಂದರು.
ಮೈಸೂರು, ಚಾಮರಾಜನಗರ ಜಿಲ್ಲೆಗೆ ಅವಿನಾಭಾವ ಸಂಬಂಧ ಇದ್ದು, ರಾಜಮನೆತನದವರು ಅನೇಕ ರೀತಿಯ ಕೊಡುಗೆ ನೀಡಿದ್ದಾರೆ. ಮತ್ತಷ್ಟು ಕೊಡುಗೆ ನೀಡಲು ಸದಾ ಸಿದ್ಧವಾಗಿರುತ್ತದೆ ಎಂದು ತಿಳಿಸಿದರು.
ಹಾಗೆಯೇ ರಾಜ ವೈಭವವನ್ನು ಎರಡು ಜಿಲ್ಲೆಯ ಜನರು ಹತ್ತಿರದಿಂದ ಕಂಡಿದ್ದು, ರಾಜಮನೆತನದ ಮತ್ತಷ್ಟು ವೈಭವವನ್ನು ಪರಿಚಯಿಸಲು ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಲಾಗುವುದೆಂದರು. ಭಾರತೀಯ ಸಂಸ್ಕೃತಿಗೆ ಇತಿಹಾಸದಲ್ಲೇ ಅತ್ಯಂತ ಹೆಸರು ಇದ್ದು, ಅದನ್ನು ಮತ್ತಷ್ಟು ಬಲಗೊಳಿಸುವ ಪ್ರಯತ್ನ ಮಾಡಬೇಕು. ಸಂಸ್ಕೃತಿಯಿಂದ ಭಾರತ ಸಮೃದ್ಧಿ ಎನ್ನುವುದನ್ನು ಪ್ರತಿಯೊಬ್ಬರು ಮನಗಾನಬೇಕೆಂದರು.
ಪುಸ್ತಕ ಬಿಡುಗಡೆ: ಇದೇ ವೇಳೆ ಮಣಗಳ್ಳಿಯ ಡಿ.ಮಹದೇವಕುಮಾರ್ ಹೊರ ತಂದಿರುವ ಬುದ್ಧ ಧಮ್ಮ ಬೆಳೆಸಿದ ವೈಶ್ಯ ಸಮಾಜದ ಅನಾಥಪಿಂಡಿಕ ಪುಸ್ತಕ ಬಿಡುಗಡೆ ಮಾಡಿದರು.
ವಾಸವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕುಮಾರಕೃಷ್ಣ, ಮೈಸೂರು ಸಹಾಯಕ ರೋಟರಿ ಗೌರ್ನರ್ ಅನಂತರಾಜ ಅರಸ್, ಸಂಸ್ಥೆ ಕಾರ್ಯದರ್ಶಿ ಡಾ.ಶ್ರೀಧರ್,
ಉಪಾಧ್ಯಕ್ಷ ಸತ್ಯನಾರಾಯಣ, ಖಜಾಂಚಿ ಸುಮನ್, ಸಂಘಟನಾ ಕಾರ್ಯದರ್ಶಿಗಳಾದ ಚೇತನ್, ಡಾ. ಸಿ.ಪಿ.ಶರತ್, ಸಿ.ಪಿ.ವೆಂಕಟೇಶ್ ಬಾಬು, ಸಿಬಿಎಸ್‌ಸಿ ಪ್ರಾಂಶುಪಾಲರಾದ ರೀತುಮೋನಿ ಶರ್ಮ, ಮುಖ್ಯ ಶಿಕ್ಷಕಿ ಗೀತಾ, ಪ್ರಾಂಶುಪಾಲ ಸೋಮಸುಂದರ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.