ಜಲ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರು ಗಮನಹರಿಸಿ
Team Udayavani, Aug 28, 2019, 3:00 AM IST
ಕೊಳ್ಳೇಗಾಲ: ಗ್ರಾಮೀಣ ಅಭಿವೃದ್ಧಿಗೆ ಸಾರ್ವಜನಿಕರು ಗ್ರಾಮ ಪಂಚಾಯಿತಿಯನ್ನೇ ಅವಲಂಬಿಸದೆ ಪ್ರಗತಿಪರ ಸಂಘಟನೆಯ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಮಾದರಿ ಗ್ರಾಮವನ್ನಾಗಿ ಮಾಡಬೇಕು ಎಂದು ಜಿಪಂ ಸಿಇಒ ಲತಾಕುಮಾರಿ ಹೇಳಿದರು.
ತಾಲೂಕಿನ ಸತ್ತೇಗಾಲ ಗ್ರಾಪಂ ಅಧ್ಯಕ್ಷೆ ಮಂಜುಳಾ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜಲಶಕ್ತಿ, ಜಲಾಮೃತ ಅಭಿಯಾನದ ವಿಶೇಷ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಂದು ಅಭಿವೃದ್ಧಿ ಕೆಲಸವನ್ನು ಗ್ರಾಪಂ ನಿರ್ವಹಣೆ ಮಾಡಲು ಕಷ್ಟಕರ ಆದ್ದರಿಂದ ಸಾರ್ವಜನಿಕರು ಹಾಗು ಪ್ರಗತಿಪರ ಸಂಘಟನೆಯ ಮುಖಂಡರು ಪ್ರೋತ್ಸಾಹಿಸಿದಾಗ ಗ್ರಾಮ ಅಭಿವೃದ್ಧಿಯಾಗಲಿದೆ ಎಂದರು.
ಜಲಶಕ್ತಿ ಹೆಚ್ಚಿಸಿ: ಗ್ರಾಮದಲ್ಲಿ ಜಲಶಕ್ತಿ ವೃದ್ಧಿಗೊಳಿಸುವ ಸಲುವಾಗಿ ಜಲಾಮೃತ ಅಭಿಯಾನದ ವಿಶೇಷ ಗ್ರಾಮಸಭೆಯನ್ನು ಆಹ್ವಾನ ಮಾಡಲಾಗಿದೆ. ಗ್ರಾಮದಲ್ಲಿ ಈಗಾಗಲೇ 2008 ಜನಗಣತಿಯ ಪ್ರಕಾರ 13 ಸಾವಿರ ಇದ್ದು, 2019ರಲ್ಲಿ 18 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವುದು ಕಂಡು ಬಂದಿದ್ದು, ಜಲರಕ್ಷಣೆ ಕಡೆ ಪ್ರತಿಯೊಬ್ಬರು ಗಮನ ಹರಿಸಬೇಕು ಎಂದು ತಿಳಿಸಿದರು.
ಜಲಸಾಕ್ಷರತೆ: ಜಿಲ್ಲಾ ಪಂಚಾಯಿತಿ ಈಗಾಗಲೇ ಪ್ರತಿ ಗ್ರಾಮೀಣ ಪ್ರದೇಶದಲ್ಲಿ ಜಲಸಾಕ್ಷರತೆ ಅರಿವು ಮೂಡಿಸಲು ಅನೇಕ ಸಭೆಗಳ ಮೂಲಕ ಮತ್ತು ಇತರ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಲಾಗಿದ್ದು, ಪ್ರತಿಯೊಬ್ಬರು ಜಲರಕ್ಷಣೆ ಮಾಡಬೇಕು ಎಂದರು.
ನೀರಿನ ಶೇಖರಣೆ: ಗ್ರಾಮದಲ್ಲಿರುವ ಕೆರೆಕಟ್ಟೆ, ಕೊಳಗಳಿಗೆ ಬೇಕಾದ ತಡೆಗೋಡೆಗಳನ್ನು ನಿರ್ಮಾಣ ಮಾಡಿ ನೀರು ಶೇಖರಣೆ ಮಾಡಬೇಕು. ಮತ್ತು ಮಳೆಯ ನೀರನ್ನು ವ್ಯರ್ಥಮಾಡದೆ ಸಂಗ್ರಹಿಸಿ ರೈತರ ಜಮೀನುಗಳಿಗೆ ನೀರು ಪೂರೈಕೆ ಮಾಡಬೇಕು ಎಂದು ತಿಳಿಸಿದರು.
ಹಸೀರಿಕರಣ: ಇತ್ತೀಚಿನ ದಿನಗಳಲ್ಲಿ ಅರಣ್ಯವನ್ನು ನಾಶ ಮಾಡುವುದರಿಂದ ವಾತವರಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು, ಕೂಡಲೇ ಗ್ರಾಮಸ್ಥರು ಹಸೀರಕರಣಕ್ಕೆ ಮುಂದಾಗಬೇಕು. ಆಗಮಾತ್ರ ಋತುಮಾನದಲ್ಲಿ ಯಾವುದೆ ತರಹದ ಆಡಚಣೆ ಉಂಟಾಗದೆ ಸಕಾಲದಲ್ಲಿ ಮಳೆ ಲಭ್ಯವಾಗಲಿದ್ದು, ಪ್ರತಿಯೊಬ್ಬರು ಹಸೀರಿಕರಣಕ್ಕೆ ಮುಂದಾಗಬೇಕು ಎಂದರು.
ನಾಲೆಗಳ ಅಭಿವೃದ್ಧಿ: ಈಗಾಗಲೇ ರೈತರ ಜಮೀನುಗಳಿಗೆ ನೀರು ಹರಿಸಲು ನಾಲೆಗಳನ್ನು ನಿರ್ಮಾಣ ಮಾಡಿದ್ದು, ಕೆಲವು ನಾಲೆಗಳು ಕಸ-ಕಡ್ಡಿ ಬೆಳೆದು, ನೀರು ಸರಾಗವಾಗಿ ಹರಿದು ಹೋಗದಂತೆ ತಡೆಗಳಿದ್ದು, ಕೂಡಲೇ ಅಂತಹ ಗಿಡಗಂಟೆಗಳನ್ನು ತೆರವು ಮಾಡಿ ನಾಲೆಯಲ್ಲಿರುವ ಊಳನ್ನು ತೆಗೆಸಿ, ನಾಲೆಯ ಅಭಿವೃದ್ಧಿ ಮಾಡಲು ಈಗಾಗಲೇ ಕ್ರಿಯಾಯೋಜನೆ ಸಿದ್ಧಗೊಂಡಿದೆ ಎಂದರು.
ಪರಿಹಾರಕ್ಕೆ ಮನವಿ: ಈಗಾಗಲೇ ವಿವಿಧೆಡೆಗಳಲ್ಲಿ ನೆರೆ ಹಾವಳಿಯಿಂದಾಗಿ ಆಸ್ತಿಪಾಸ್ತಿ ಕಳೆದುಕೊಂಡಿರುವವರಿಗಾಗಿ ತಾಲೂಕಿನ ಸಂಜೀವಿನಿ ಮಹಿಳಾ ಒಕ್ಕೂಟದ ಸಂಚಾಲಕಿ ಚಂದ್ರಮ್ಮ ಅವರ ನೇತೃತ್ವದಲ್ಲಿ ಸಂಗ್ರಹಿಸಲಾಗಿದ್ದ ಸುಮಾರು 26 ಸಾವಿರ ರೂ. ಪರಿಹಾರವನ್ನು ನೆರೆ ಸಂತ್ರಸ್ತರಿಗೆ ನೀಡುವಂತೆ ಸಿಇಒ ಅವರಿಗೆ ಸಲ್ಲಿಸಿದರು.
ಗ್ರಾಮಸ್ಥರು ನೀಡಿರುವ ಹಲವಾರು ಅಹವಾಲುಗಳನ್ನು ಪರಿಗಣಿಸಿ ಸೂಕ್ತ ಸೌಕರ್ಯ ಕಲ್ಪಿಸಲು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಗ್ರಾಮ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಲಾಗುವುದೆಂದು ಗ್ರಾಮಸ್ಥರಿಗೆ ಹೇಳಿದರು. ಗ್ರಾಪಂ ಅಧ್ಯಕ್ಷೆ ಮಂಜುಳ, ಉಪಾದ್ಯಕ್ಷ ರಾಜಪ್ಪ, ಜಿಪಂ ಸದಸ್ಯೆ ಜಯಂತಿ, ತಾಪಂ ಸದಸ್ಯ ಅರುಣ್‌ಕುಮಾರ್, ಇಒ ಚಂದ್ರು, ಗ್ರಾಪಂ ಪಿಡಿಒ ನಮಿತ ತೇಜಶ್ವಿನಿಗೌಡ ಹಾಗೂ ಸಿಬ್ಬಂದಿವರ್ಗ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
Bandipur: ಸಫಾರಿಯಲ್ಲಿ ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ
Birla Opus Paints: ಚಾಮರಾಜನಗರದಲ್ಲಿ ಬಿರ್ಲಾ ಒಪಸ್ ಪೇಂಟ್ಸ್ 4ನೇ ಕಾರ್ಖಾನೆ ಆರಂಭ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.