Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Team Udayavani, Apr 26, 2024, 8:36 PM IST

voter

ಚಾಮರಾಜನಗರ : ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಇಂಡಿಗನಾಥ ಗ್ರಾಮದ ಮತಗಟ್ಟೆಯಲ್ಲಿ ಶುಕ್ರವಾರ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಬೇಕೋ ಬೇಡವೋ ಎಂಬ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನೇ ಧ್ವಂಸಗೊಳಿಸಲಾಗಿದೆ.

ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ, ಸಮರ್ಪಕ ಮೂಲಸೌಕರ್ಯ ಅಭಿವೃದ್ಧಿಯ ಕೊರತೆಯನ್ನು ಮುಂದಿಟ್ಟುಕೊಂಡು ಗ್ರಾಮಸ್ಥರು ಮತದಾನ ಬಹಿಷ್ಕರಿಸಲು ಹಿಂದಿನ ದಿನ ನಿರ್ಧರಿಸಿದ್ದರು. ಆದಾಗ್ಯೂ, ಸ್ಥಳೀಯ ಅಧಿಕಾರಿಗಳ ಭರವಸೆ ಮತ್ತು ಪ್ರಯತ್ನದ ನಂತರ, ಮತದಾನ ಆರಂಭವಾಗಿತ್ತು. ಒಂದು ಗುಂಪು ಮತದಾನ ಮಾಡಲು ಬಯಸಿದ್ದರೆ, ಇನ್ನೊಂದು ಗುಂಪು ಬಹಿಷ್ಕಾರಕ್ಕೆ ಬದ್ದವಾಗಿತ್ತು. ಈ ವೇಳೆ ವಾಗ್ವಾದ ನಡೆದು ಇಂಡಿಗನಾಥ ಮತ್ತು ಮೆಂದರೆ ಗ್ರಾಮಗಳ 250 ರಿಂದ 300 ಸಾರ್ವಜನಿಕರು ಇವಿಎಂಗಳನ್ನು ಧ್ವಂಸಗೊಳಿಸಿ, ಕಲ್ಲು ತೂರಾಟ ನಡೆಸಿ ಮತಗಟ್ಟೆಯೊಳಗಿದ್ದ ಎಲ್ಲ ಪೀಠೋಪಕರಣಗಳನ್ನೂ ಧ್ವಂಸಗೊಳಿಸಿದ್ದಾರೆ.

ಅಧಿಕಾರಿಗಳನ್ನೂ ಕೂಡಿಹಾಕಿ ಬೆಂಕಿ ಬೆಂಕಿ ಹಚ್ಚಿ ವಯರ್ಲೆಸ್ ಸಲಕರಣೆಗಳನ್ನು ಸುಟ್ಟು ಹಾಕಿದ್ದಾರೆ. ಪೊಲೀಸ್ ಸಿಬಂದಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಧ್ಯಾಹ್ನ 3.20 ರವರೆಗೆ ಯಾರು ಸಹ ಒಂದು ಮತ ಕೂಡ ಹಾಕಿರಲಿಲ್ಲ.

ಗ್ರಾಮಸ್ಥರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ಮಾಹಿತಿ ಬಂದಿದ್ದು, ದಾಂಧಲೆ ನಡೆಸಿದವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿ – ರಸ್ತೆಗಳು – ಸರಿಯಿಲ್ಲ ಎಂದು ಅವರು ದೂರಿದ್ದಾರೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ.

“ಇವಿಎಂಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರಿಂದ ಯಾವುದೇ ಗಾಯವಾಗಲಿಲ್ಲ. ಸ್ಥಳದಲ್ಲಿದ್ದ ಪೊಲೀಸರು ಉದ್ರಿಕ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು ವಿವರವಾದ ವರದಿ ಪಡೆದು ಚುನಾವಣ ಆಯೋಗ ಕ್ರಮ ಕೈಗೊಳ್ಳಲಿದೆ.ಘಟನೆಯಲ್ಲಿ ಭಾಗಿಯಾದವರು ಪರಾರಿಯಾಗಿದ್ದು, ಪೊಲೀಸರು ಅವರನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Police-Head

Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ

Prahalad-Joshi

MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

RadhaMohan-das

Karnataka New Incharge: ಬಿಜೆಪಿ ನಾಯಕರಿಗೆ ಡಾ.ಅಗರ್ವಾಲ್‌ “ಇಂಜೆಕ್ಷನ್‌’

ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ

ಕಾರು ಚಾಲನೆ ವೇಳೆ ಚಾಲಕನಿಗೆ ಹೃದಯಾಘಾತ… ಹಲವು ವಾಹನಗಳಿಗೆ ಡಿಕ್ಕಿ, ನಾಲ್ವರಿಗೆ ಗಾಯ

Cheluvaray-swamy

Janatha Darshana: ಯಾರಿಗೂ ಇಲ್ಲದ ನಿರ್ಬಂಧ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Police-Head

Karnataka Police ಸುಳ್ಳು ಸುದ್ದಿ ತಡೆಗೆ ಎಐ ಬಳಸಿ: ಸಿಎಂ ಸಿದ್ದರಾಮಯ್ಯ ಸೂಚನೆ

Prahalad-Joshi

MUDA Scam ತನಿಖೆ ಸಿಬಿಐಗೆ ವಹಿಸಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

Masoud Pezeshkian: ಇರಾನ್‌ನಲ್ಲಿ ಸುಧಾರಣ ಆಡಳಿತದ ಜಮಾನ ಶುರು

23

“140ಕ್ಕೂ ಹೆಚ್ಚು ಮುಡಾ ಕಡತ ಕದ್ದೊಯ್ದ ಅಧಿಕಾರಿಗಳು’ʼ: ಶಾಸಕ ಟಿ.ಎಸ್‌. ಶ್ರೀವತ್ಸ

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

Earthquake: ತಿಕೋಟಾ ಭಾಗದಲ್ಲಿ ಲಘು ಭೂಕಂಪ… ಮನೆಯಿಂದ ಹೊರ ಓಡಿಬಂದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.