ಕುಶಾಲನಗರ ಅರಣ್ಯ ರಕ್ಷಕರಿಗೆ ಅಧಿಕಾರಿಗಳ ಪ್ರಾತ್ಯಕ್ಷಿಕ


Team Udayavani, Sep 3, 2017, 12:49 PM IST

cham.jpg

ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಿದ್ದ ಕುಶಾಲ
ನಗರ ಅರಣ್ಯ ವ್ಯಾಪ್ತಿಯ ತರಬೇತಿ ಅರಣ್ಯ ರಕ್ಷಕರಿಗೆ ವಿವಿಧ ಕ್ಲಿಷ್ಟಕರ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಯ ಬಗ್ಗೆ ಬೋಧನೆ ಹಾಗೂ ಪ್ರಾತ್ಯಕ್ಷಿಕೆ ನೀಡಲಾಯಿತು.

ಕೊಡಗಿನ ಕುಶಾಲನಗರ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಯಾಗಿರುವ 54 ಅರಣ್ಯ ರಕ್ಷಕರು ಬಂಡೀಪುರ ಹುಲಿ ಯೋಜನೆಯಲ್ಲಿ ಇಲ್ಲಿನ ವ್ಯವಸ್ಥೆಗಳ ಬಗ್ಗೆ ತರಬೇತಿ ಪಡೆಯಲು ಪ್ರವಾಸಕ್ಕೆ
ಆಗಮಿಸಿದ್ದಾರೆ. ಇವರಿಗೆ  ಗೋಪಾಲಸ್ವಾಮಿ ಬೆಟ್ಟವಲಯಾರಣ್ಯ ಕಚೇರಿಯಲ್ಲಿ ಇಲಾಖೆಯ ಕಾರ್ಯ ನಿರ್ವಹಣೆಯ ಬಗ್ಗೆ ಸಂವಾದ ನಡೆಸುವ ಮೂಲಕ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ ವಿವರಣೆ
ನೀಡಿದರು.

ಬೇಸಿಗೆಯಲ್ಲಿ ಎಚ್ಚರ ವಹಿಸಿ: ಬೇಸಿಗೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಕಿರೇಖೆ ನಿರ್ಮಾಣ, ಕಾಡಂಚಿನ ಜನರನ್ನು ಬೆಂಕಿಕಾವಲಿಗೆ ನಿಯೋಜಿಸಿ ಎಚ್ಚರಿಕೆ ವಹಿಸುವುದು, ಆಯಕಟ್ಟಿನ ಸ್ಥಳಗಳಲ್ಲಿ ನೀರು ಸಂಗ್ರಹಿಸುವುದು, ರಸ್ತೆಬದಿಗಳಲ್ಲಿ ಒಣಗಿದ ಹುಲ್ಲುಗಳನ್ನು ತೆರವುಗೊಳಿಸುವುದು, ಆಕಸ್ಮಿಕ
ಬೆಂಕಿ ಬಿದ್ದರೆ ಅಗ್ನಿಶಾಮಕ ದಳದ ನೆರವಿನಿಂದ ಆರಿಸುವುದು, ಮಾನವ ವನ್ಯಜೀವಿ ಸಂಘರ್ಷ ಸಂದರ್ಭದಲ್ಲಿ ನಡೆದುಕೊಳ್ಳುವ ವಿಧಾನಗಳು.

ಬಂಡೀಪುರದಲ್ಲಿ ಬೇಸಿಗೆ ಸಂದರ್ಭದಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಸೋಲಾರ್‌ ಮೋಟಾರ್‌ ಮೂಲಕ ನೀರೊದಗಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅರಣ್ಯ ಅಪರಾಧಗಳು ನಡೆದಾಗ ರಾಣಾ ಹೆಸರಿನ ಷಫ‌ರ್ಡ್‌ ನಾಯಿ ನೆರವಿನಿಂದ ಆರೋಪಿಗಳ
ಪತ್ತೆ, ಕಾಡಂಚಿನ ಜನರಲ್ಲಿ ಅರಣ್ಯ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವುದು ಹಾಗೂ ಸಂಕಷ್ಟ ಸಂದರ್ಭದಲ್ಲಿ ಸಹಕಾರ ಪಡೆಯುವ ಮುಂತಾದ ಕ್ರಮಗಳ ಬಗ್ಗೆ ವಿವರಿಸಿ ಅವರ ಅನುಮಾನಗಳಿಗೆ ಉತ್ತರ ನೀಡಿದರು.

ನಂತರ ಎಸ್‌ಟಿಪಿಎಫ್ ಕ್ಯಾಂಪಿನಲ್ಲಿ ರಾಣಾ ನಾಯಿಯ ಕಾರ್ಯನಿರ್ವಹಣೆ ವೀಕ್ಷಣೆ, ಅರಣ್ಯದೊಳಗಿನ ಸೋಲಾರ್‌ ಮೋಟಾರ್‌ ಅಳವಡಿಸಿದ ಕೆರೆಗಳು, ಗೋಪಾಲಸ್ವಾಮಿ ಬೆಟ್ಟ ವಲಯದಲ್ಲಿನ
ಸಸ್ಯವರ್ಗಗಳ ಅಧ್ಯಯನ ನಡೆಸಿದರು.

ಬಸವರಾಜು ಎಂಬ ತರಬೇತಿ ಅರಣ್ಯ ರಕ್ಷಕ ಮಾತನಾಡಿ, ಉತ್ತರ ಕರ್ನಾಟಕದಲ್ಲಿನ ಹೆಚ್ಚಿನ ಯುವಕರು ಆಸಕ್ತಿಯಿಂದ ಅರಣ್ಯ ಸೇವೆಯಲ್ಲಿ ಸೇರಲು ಬಯಸುತ್ತಿದ್ದಾರೆ. ಅವರಿಗೆ ಪರಿಸರದ ಮೇಲಿರುವ ಪ್ರೀತಿ ಕಾರಣ ಎಂದರು.

ಈ ಸಂದರ್ಭದಲ್ಲಿ ಕುಶಾಲನಗರ ತರಬೇತಿ ವಿಭಾಗದ ಆರ್‌ಎಫ್ಒ ರಾಘವೇಂದ್ರ,
ಗೋಪಾಲಸ್ವಾಮಿಬೆಟ್ಟ ವಲಯದ ಡಿಆರ್‌ ಎಫ್ಒಗಳಾದ ಅನಿಲ್‌ ಕುಮಾರ್‌, ಪ್ರತಾಪರೆಡ್ಡಿ, ಇತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ

Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ

6-gundlupete

Gundlupete: ಬೈಕ್ ಗೆ ಗುದ್ದಿದ ಪಿಕ್ ಅಪ್; ಸವಾರರ ಕಾಲು ಮುರಿತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.