ಮುಂಗಾರು ಅಬ್ಬರಕ್ಕೆ ರೈತರ ಸಂತಸ
Team Udayavani, Apr 20, 2019, 3:00 AM IST
ಗುಂಡ್ಲುಪೇಟೆ: ತಾಲೂಕಿನ ಹಲವೆಡೆ ಗುರುವಾರ ಮತ್ತು ಶುಕ್ರವಾರ ಸುರಿದ ಮುಂಗಾರು ಮಳೆಯ ಅಬ್ಬರಕ್ಕೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬಿಸಿಲಿನ ಬೇಗೆಯಿಂದ ಚುನಾವಣಾ ಕಾವಿನಿಂದ ಬಳಲಿದ್ದವರಿಗೆ ತಂಪನ್ನುಂಟು ಮಾಡಿದೆ.
ತಾಲೂಕಿನ ತೆರಕಣಾಂಬಿ ಮತ್ತು ಕಸಬಾ ಹೋಬಳಿಯ ಹಲವು ಕಡೆಗಳಲ್ಲಿ ಗುರುವಾರ ಮತ್ತು ಶುಕ್ರವಾರ ಉತ್ತಮ ಮಳೆಯಾಗಿದೆ. ಮಳೆಯಿಂದಾಗಿ ಬಿಗಿಯಾಗಿದ್ದ ಭೂಮಿ ತಂಪಿನಿಂದ ತಣ್ಣಗಾಗಿದ್ದರೆ, ಮುಂಗಾರಿನ ಫಸಲು ತೆಗೆಯುವ ಹುಮ್ಮಸ್ಸಿನಲ್ಲಿ ರೈತರು ವ್ಯವಸಾಯ ಚಟುವಟಿಕೆ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಪ್ರಮುಖವಾಗಿ ಖುಷ್ಕಿ ಪದ್ಧತಿಯ ಮಳೆಯಾಶ್ರಿತ ವ್ಯವಸಾಯ ನೆಚ್ಚಿಕೊಂಡಿರುವ ತಾಲೂಕಿನ ಶೇ.70 ರೈತರು ಮುಂಗಾರಿನಲ್ಲಿ ಚಟುವಟಿಕೆ ನಡೆಸುವ ಸಲುವಾಗಿ ಭೂಮಿಯನ್ನು ಹದ ಮಾಡಲು ತೊಡಗಿದ್ದಾರೆ.
ತಾಲೂಕಿನ ತೆರಕಣಾಂಬಿ ಹೋಬಳಿಯ ಕೊಡಸೋಗೆ, ಬೊಮ್ಮಲಾಪುರ, ಶೀಲವಂತಪುರ, ಸೋಮನಪುರ ಯಾನಗಹಳ್ಳಿ ಪ್ರದೇಶದ ಹಲವು ಗ್ರಾಮಗಳಲ್ಲಿ ಗುರುವಾರ ಸುರಿದ ಮಳೆಯಿಂದ ಕೆಲಕಾಲ ಮತದಾನ ಮಾಡಲು ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ಉದ್ಭವವಾಗಿತ್ತು.
ಸುಮಾರು 3 ಗಂಟೆಗಳ ಕಾಲ ಸುರಿದ ಮಳೆ ರೈತನಿಗೆ ಹರ್ಷ ತಂದಿತು. ಶುಕ್ರವಾರ ಆ ಪ್ರದೇಶದ ರೈತರು ಕೃಷಿ ಚಟುವಟಿಕೆಗಳನ್ನು ನಡೆಸಿದರು. ಮುಂಗಾರಿನಲ್ಲಿ ಹತ್ತಿ, ಜೋಳ, ಚೆಂಡುಮಲ್ಲಿಗೆ ಮುಂತಾದ ಬೆಳೆಗಳನ್ನು ಬೆಳೆಯುವ ಸಲುವಾಗಿ ಭೂಮಿಯನ್ನು ಹದಗೊಳಿಸುವ ಸಿದ್ಧತೆಯಲ್ಲಿ ಇದ್ದಾಗಲೇ ಇಂದು ಮತ್ತೂಮ್ಮೆ ಸುರಿದ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅಡ್ಡಿಯುಂಟಾಯಿತು.
ಅದೇ ರೀತಿ ಕಸಬಾ ಹೋಬಳಿಯ ಪಶ್ಚಿಮ ಭಾಗದ ಕಾಡಂಚಿನ ಗ್ರಾಮಗಳಾದ ಬರಗಿ, ಹೊಂಗಹಳ್ಳಿ, ಚನ್ನಮಲ್ಲಿಪುರ, ಬೇರಂಬಾಡಿ, ಗೋಪಾಲಪುರ, ಭೀಮನಬೀಡು ಸುತ್ತಮುತ್ತ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಪ್ರಾರಂಭವಾದ ಮಳೆ ಸತತವಾಗಿ 4 ಗಂಟೆಗಳ ಕಾಲು ಸುರಿಯಿತು.
ತುಂಬಾ ದಿನಗಳಿಂದ ಬಿಸಿಲ ಬೇಗೆಯಿಂದ ಗಟ್ಟಿಯಾಗಿದ್ದ ಭೂಮಿಗೆ ಇದರಿಂದ ಉಳುಮೆ ಮಾಡಲು ಆಸಕ್ತ ವಾತಾವರಣ ಉಂಟಾಯಿತು. ಈ ಪ್ರದೇಶದ ಜನರು ಶೀಘ್ರದಲ್ಲಿ ಚೆಂಡುಮಲ್ಲಿಗೆ ಹೂವಿನ ಬಿತ್ತನೆ ಬೀಜ ಪಡೆದು ಒಟ್ಟು ಮಾಡಲಿದ್ದಾರೆ. 15 -20 ದಿನಗಳಲ್ಲಿ ನಾಟಿ ಮಾಡುವ ಮೂಲಕ ಮುಂಗಾರಿನ ಫಸಲಿನ ಪ್ರಾರಂಭವಾಗುತ್ತದೆ. ಇನ್ನು ಪಟ್ಟಣ ಪ್ರದೇಶದಲ್ಲಿ ಮಳೆ ಹೆಚ್ಚಿನ ಘರ್ಜನೆ ನಡೆಸದಿದ್ದರೂ, ಚುನಾವಣಾ ಕಾವಿನಲ್ಲಿ ಮುಳುಗಿದ್ದ ಜನರಲ್ಲಿ ಉತ್ಸಾಹದ ಸೆಲೆ ಚಿಮ್ಮಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.