ಎಫ್ಟಿಎ ವಿರುದ್ಧ ಹೋರಾಟ: ರೈತರ ಕರ್ತವ್ಯ
Team Udayavani, Feb 14, 2023, 1:11 PM IST
ಚಾಮರಾಜನಗರ: ಕೃಷಿಕರಿಗೆ ಮಾರಕವಾಗಿದ್ದ ವಿಶ್ವವ್ಯಾಪಾರ ಒಪ್ಪಂದದ ಮತ್ತೂಂದು ಮುಖವಾಗಿರುವ ಎಫ್ಟಿಎ (ಪ್ರೀಟ್ರೇಡ್ ಅಗ್ರಿಮೆಂಟ್) ವಿರುದ್ಧ ಹೋರಾಟ ನಡೆಸಬೇಕಾಗಿರುವುದು ಯುವ ರೈತ ಸಂಘಟನೆಗಳ ಕರ್ತವ್ಯ ಎಂದು ಸ್ವರಾಜ್ ಇಂಡಿಯಾದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳಿದರು.
ನಗರದ ನಂದಿಭವನದಲ್ಲಿ ರಾಜ್ಯರೈತಸಂಘದಿಂದ ವಿಶ್ವ ರೈತಚೇತನ ಪೊ›.ಎಂ.ಡಿ.ನಂಜುಂಡಸ್ವಾಮಿ ಅವರ 87ನೇ ಜನ್ಮದಿನಾಚರಣೆ ಅಂಗವಾಗಿ ನಡೆದ, ನಗರದ ರಸ್ತೆ ಮತ್ತು ವೃತ್ತಕ್ಕೆ ಪ್ರೊ.ಎಂಡಿಎನ್ ಹೆಸರು ನಾಮಕರಣ ಕಾರ್ಯಕ್ರಮ ಹಾಗೂ ಯುವರೈತಘಟಕ ಕಾಯìಕ್ರಮ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಉತ್ತರಭಾರತದಲ್ಲಿ ರೈತಚಳವಳಿಯಲ್ಲಿ ಮುಂಚೂ ಣಿಯಲ್ಲಿದ್ದ ಕಿಶನ್ ಪಟ್ನಾಯಕ್ ಅವರಂತೆ ನಂಜುಂಡಸ್ವಾಮಿ ಅವರು ಒಂದೇ ನೆಲೆಯಲ್ಲಿ ಚಿಂತನೆ ಮಾಡಿದವರು. 80 ರದಶಕದಲ್ಲಿ ಸರಕಾರ ಗ್ಯಾಟ್, ಡಂಕಲ್ ಪ್ರಸ್ತಾವನೆಗೆ ಸಹಿಹಾಕಿದಾಗ ಕೃಷಿಯ ಅಸ್ತಿತ್ವಕ್ಕೆ ಮುಗಿಯಿತು ಎಂಬ ಸಂದರ್ಭ ಎದುರಾಯಿತು. ಅದನ್ನು ವಿರೋಧಿಸಿ ಹೋರಾಟಕ್ಕಿಳಿದ ಕೇಂದ್ರಬಿಂದು ಪ್ರೊ.ಎಂ ಡಿನಂಜುಂಡಸ್ವಾಮಿ ಅವರು, ಮಹಾರಾಷ್ಟ್ರದ ಶರದ್ ಜೋಶಿ ಎಂಬವರು ದೇಶದೊಳಗೆ ಬಹುರಾಷ್ಟ್ರಿಯ ಕಂಪನಿಗಳು ಬಂದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಲಿದೆ ಎಂದಿದ್ದರು. ಆ ಸಂದರ್ಭದಲ್ಲಿ ನಂಜುಂಡಸ್ವಾಮಿ ಬಹುರಾಷ್ಟ್ರಿಯ ಕಂಪನಿಗಳು ದೇಶದ ಅಭಿವೃದ್ಧಿಗೆ ಮಾರಕವೇ ಹೊರತು, ಪೂರಕವಲ್ಲ ಎಂದು ಹೋರಾಟಕ್ಕಿಳಿದರು ಎಂದರು.
ಚಾಮರಾಜನಗರದಿಂದಲೇ ಹೋರಾಟ ಆರಂಭಿಸಿ: ಕೇಂದ್ರ ಸರಕಾರ ಜಾರಿಗೆ ತಂದಿದ್ದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒಂದೂವರೆ ವರ್ಷಗಳ ಕಾಲ ರೈತರು ಹೋರಾಟ ಮಾಡಿದರು. ಹೋರಾಟದಿಂದ ರೈತರ ಒಗ್ಗಟ್ಟು ಪ್ರದ‚ರ್ಶನವಾಯಿತೇ ಹೊರತೂ ಕಾಯ್ದೆ ವಾಪಸ್ ಆಗಿದ್ದರಿಂದ ರೈತರಸ್ಥಿತಿ ಬದಲಾಗಲಿಲ್ಲ. ಯುವಘಟಕದ ಕಾರ್ಯಕರ್ತರು ತಮ್ಮ ಹೋರಾಟದ ಹಾದಿಯನ್ನು ಚಾಮರಾಜ ನಗರದಿಂದಲೇ ಆರಂಭಿಸಬೇಕು ಎಂದರು.
ಆಶಯನುಡಿಗಳನ್ನಾಡಿದ ರಾಜ್ಯರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಇಂದಿನದಿನಗಳಲ್ಲಿ ರೈತರ ಹೋರಾಟಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಯುವಕರು ಚಳವಳಿಗಳತ್ತ ಮುಖಮಾಡಬೇಕು, ಯುವಕರಿಂದ ಮಾತ್ರ ರೈತಚಳವಳಿ ಉಳಿಯಲು ಸಾಧ್ಯವಿದೆ ಎಂದರು. ನಾನಾ ಜಿಲ್ಲೆಗಳ ಯುವರೈತಘಟಕದ ಸಂಚಾಲಕರಿಗೆ ರೈತಬಾವುಟ ವಿತರಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ದೀಪಕ್‌ಲಂಬು ಸೇರಿದಂತೆ ಯುವ ರೈತ ಮುಖಂಡರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಾಹಿತಿ ಬಂಜಗೆರೆ ಜಯಪ್ರಕಾಶ್. ರೈತಸಂಘದ ಉಪಾಧ್ಯಕ್ಷ ಎ.ಎಂ.ಮಹೇಶ್‌ಪ್ರಭು, ಕರ್ನಾಟಕಸರ್ವೋದಯ ಪಕ್ಷದ ರಾಜ್ಯಾಧ್ಯಕ್ಷ ಚಾಮರಸಮಾಲಿ ಪಾಟೀಲ್, ,ಯುವ ರೈತ ಹೋರಾಟಗಾರ ಮಳವಳ್ಳಿ ಪೃಥ್ವಿರಾಜ್, ಸೇರಿದಂತೆ ಜಿಲ್ಲಾಪದಾಧಿಕಾರಿಗಳು, ರಾಜ್ಯದ ನಾನಾಜಿಲ್ಲೆಗಳ ರೈತಮುಖಂಡರು, ಯುವ ಕೃಷಿಕರು ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.