ಡಾ.ಅಂಬೇಡ್ಕರ್ ತತ್ವ ಆದರ್ಶ ಪಾಲಿಸಿ
Team Udayavani, May 16, 2022, 4:45 PM IST
ಕೊಳ್ಳೇಗಾಲ: ಮನುಷ್ಯ ಮನುಷ್ಯನನ್ನು ಪ್ರೀತಿಸುವ ಗುಣ ಬೆಳೆಸಿಕೊಂಡಾಗ ಮಾತ್ರಭಾವೈಕ್ಯತೆ ಮೂಡಲು ಸಾಧ್ಯ ಎಂದುಮೈಸೂರಿನ ಉರಿಲಿಂಗಿ ಪೆದ್ದಿಮಠದ ಡಾ. ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ತಾಲೂಕಿನ ಹಳೇ ಅಣಗಳ್ಳಿ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ “ಒಂದಾಗಿ ಬಾಳ್ಳೋಣ ಭಾವೈಕ್ಯತೆ’ ಕಾರ್ಯಕ್ರಮಉದ್ಘಾಟಿಸಿ ಬಳಿಕ ಗ್ರಾಮದ ನಾಟಕ ಕಲಾವಿದರು, ನಿವೃತ್ತ, ಹಾಲಿ ನೌಕರರು, ಎಸ್ಸೆಸ್ಸೆಲ್ಸಿ,ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವಆದರ್ಶವನ್ನು ಪ್ರತಿಯೊಬ್ಬರು ಪಾಲನೆ ಮಾಡಿಗ್ರಾಮಕ್ಕೆ ಕೀರ್ತಿ ತರಬೇಕೆಂದು ತಿಳಿಸಿದರು.12ನೇ ಶತಮಾನದಲ್ಲಿ ಬಸವಣ್ಣನವರುಸಮಾನತೆ ಬೀಜ ಬಿತ್ತಿ ಕ್ರಾಂತಿ ಮಾಡಿದ್ದರು.ಬುದ್ಧನ ಶಾಂತಿಯ ದೀಪ, ಬಸವಣ್ಣನವರ ಕ್ರಾಂತಿಯ ದೀಪ, ಅಂಬೇಡ್ಕರ್ ಅವರ ಜ್ಞಾನದದೀಪ ಆರದಂತೆ ಗ್ರಾಮದ ಪ್ರತಿಯೊಬ್ಬರುಕಾಪಾಡಿಕೊಳ್ಳಬೇಕು. ನಾವೆಲ್ಲರೂ ಸಾಮರಸ್ಯದಿಂದ ಬದುಕಿ, ಮನುಷ್ಯ, ಮನುಷ್ಯರ ನಡುವೆಕಂದಕ ಇಟ್ಟುಕೊಳ್ಳಬಾರದು ಎಂದು ವಿವರಿಸಿದರು. ಬೆಂಗಳೂರಿನ ಕೆಎಸ್‌ಐಡಿಸಿಎಲ್
ಪ್ರಧಾನ ವ್ಯವಸ್ಥಾಪಕ ಹಾಗೂ ಚಾಮರಾಜನಗರ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ಸಮಾಜದಲ್ಲಿ ಬುದ್ಧಿವಂತರು, ವಿದ್ಯಾವಂತರು ಹೆಚ್ಚಾಗಿದ್ದಾರೆ. ಆದರೆ, ಅವರಲ್ಲಿ ಹೃದಯವಂತಿಕೆ ಕ್ಷಿಣೀಸುತ್ತಿದೆ. ವಿದ್ಯೆ ಕಲಿತವರು ಸ್ವಾರ್ಥಿಗಳಾಗುತ್ತಿದ್ದಾರೆ. ವಿದ್ಯೆ ವಿನಯ ಕಲಿಸುವ ಸಾಧನ.ಆದರೆ, ನಾವು ಅಹಂಕಾರ, ಸ್ವಪ್ರತಿಷ್ಠೆ, ಒಣ ಪ್ರತಿಷ್ಠೆಗೆ ದಾಸರಾಗುತ್ತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎನ್.ಮಹೇಶ್, ಜಿಲ್ಲಾ ಪೊಲೀಸ್ ಅಪರ ವರಿಷ್ಠಾಧಿಕಾರಿ ಸುಂದರರಾಜು, ಬೆಂಗಳೂರು ವಾಣಿಜ್ಯ ತೆರಿಗೆ ಅಧಿಕಾರಿ ಎಂ.ನಂಜುಂಡಸ್ವಾಮಿ, ಚಾಮರಾಜನಗರ ಗ್ರಾಮಾಂತರ ಠಾಣೆ ಇನ್ಸ್‌ಪೆಕ್ಟರ್ ಪುಟ್ಟಸ್ವಾಮಿ, ನಿವೃತ್ತ ಪ್ರಾಂಶುಪಾಲ ಕೆಂಪರಾಜು, ಮುಖಂಡರಾದ ಕೃಷ್ಣಮೂರ್ತಿ, ರμಕ್‌ಅಹಮ್ಮದ್, ಛಲವಾದಿ ಮಹಾಸಭಾದ ಅಧ್ಯಕ್ಷಅಣಗಳ್ಳಿ ಬಸವರಾಜು, ಬಸವಣ್ಣ, ಆರ್‌ಟಿಐಕಾರ್ಯಕರ್ತ ದಶರಥ್, ಕಾಂತರಾಜು, ರವಿ, ಲೋಕೇಶ್, ಬಾಬು, ಕಾಶಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.