ಅಳಿದುಳಿದ ಆಹಾರ ನಾಶಪಡಿಸಿದ ಅರಣ್ಯ ಸಿಬ್ಬಂದಿ
Team Udayavani, Dec 15, 2018, 7:32 AM IST
ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನ, ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ರಾಮಾಪುರ ವಲಯ, ಯಡಿಯಾರಳ್ಳಿ ಮೀಸಲು ಅರಣ್ಯದೊಳಗಿದೆ. ಗ್ರಾಮ ಕಂದಾಯ ಪ್ರದೇಶದಲ್ಲಿದ್ದು, ಮಾರಮ್ಮ ದೇವಾಲಯ ಅರಣ್ಯ ಪ್ರದೇಶಕ್ಕೆ ಸೇರಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದೆಂದು ಅರಣ್ಯಾಧಿಕಾರಿಗಳು ದೇವಾಲಯಕ್ಕೆ ಜನರ ಪ್ರವೇಶವನ್ನು ನಿರ್ಬಂಧಿಸಿರಲಿಲ್ಲ. ಶುಕ್ರವಾರ ವಿಷಯುಕ್ತ ಆಹಾರ ಸೇವನೆಯಿಂದ 11 ಜನರು ಮೃತಪಟ್ಟು, ಕಾಗೆಗಳೂ ಸತ್ತಿದ್ದರಿಂದ ಅರಣ್ಯಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅರಣ್ಯದಂಚಿನಲ್ಲೇ ದೇವಾಲಯ
ಇರುವುದರಿಂದ ಎಲೆಗಳಲ್ಲಿದ್ದ ಅಳಿದುಳಿದ ವಿಷಯುಕ್ತ ಆಹಾರ ವನ್ಯಜೀವಿಗಳು ತಿನ್ನಬಾರದೆಂದು ಕ್ರಮ ಕೈಗೊಂಡರು. ಸತ್ತಿದ್ದ ಕಾಗೆಗಳನ್ನೂ ವಶಕ್ಕೆ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಕ್ರಮ ಕೈಗೊಂಡರು. ಸ್ಥಳದಲ್ಲೇ ಪೊಲೀಸ್ ಮತ್ತು ಅರಣ್ಯ
ಸಿಬ್ಬಂದಿ ಮೊಕ್ಕಾಂ ಹೂಡಿದ್ದು, ಇಡೀ ಪ್ರದೇಶವನ್ನು ಕಾಯುತ್ತಿದ್ದಾರೆ. ತೀವ್ರ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಎಲ್ಲಿದೆ ಸುಳ್ವಾಡಿ?
ಸುಳ್ವಾಡಿ ಗ್ರಾಮ ಕೊಳ್ಳೇಗಾಲ ತಾಲೂಕಿನ ಹನೂರಿ ನಿಂದ ಸುಮಾರು 35 ಕಿ.ಮೀ. ಅಂತರದಲ್ಲಿದೆ. ಜಿಲ್ಲಾ ಕೇಂದ್ರ ಚಾಮರಾಜನಗರದಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ. ಹನೂರಿನಿಂದ ಹೊರಟು, ರಾಮಾಪುರ ಹಾದು, ನಾಲ್‌ರೋಡ್
ನಿಂದ ಎಡಕ್ಕೆ ಹೋದರೆ ಈ ಗ್ರಾಮ ಸಿಗುತ್ತದೆ. ಸುಳ್ವಾಡಿ ಗ್ರಾಮ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಯಡಿಯಾರಳ್ಳಿ ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿದೆ. ರಾಮಾಪುರ ವಲಯಕ್ಕೆ ಸೇರಿದೆ. ಈ ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆಯಿದೆ. ಗ್ರಾಮದಲ್ಲಿರುವ ಮಾರಮ್ಮ ದೇವಸ್ಥಾನ ಪುಟ್ಟದಾಗಿದ್ದು, ಇದಕ್ಕೆ ಗೋಪುರ ನಿರ್ಮಾಣ ಮಾಡುವ ಸಂಬಂಧ ನಡೆದ ಕಾರ್ಯಕ್ರಮವೇ ಎಂಟು ಜನರ ಪ್ರಾಣಕ್ಕೆ ಎರವಾಗಿದ್ದು ವಿಪರ್ಯಾಸ.
ಘಟನೆ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದೇವೆ. ನಿಖರವಾದ ಕಾರಣವನ್ನು ಈಗಲೇ ಹೇಳಲಾಗುವುದಿಲ್ಲ. ಆಹಾರದ ಮಾದರಿ,
ವಾಂತಿಯ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪೋಸ್ಟ್‌ಮಾರ್ಟಂ ವರದಿ ಹಾಗೂ ಆಹಾರ ಮಾದರಿ
ಪರೀಕ್ಷೆ ಎಲ್ಲವೂ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ.
●ಠರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.