ವಿಶ್ವಕ್ಕೆ ಹೊಸ ಸಂದೇಶ ನೀಡಿದ ಸ್ವಾತಂತ್ರ್ಯ ಚಳವಳಿ
Team Udayavani, Jan 27, 2021, 12:12 PM IST
ಚಾಮರಾಜನಗರ: ಅಂಬೇಡ್ಕರ್ ಚಿಂತನೆಯ ಫಲವಾಗಿ ರೂಪಿತವಾದ ಭಾರತದ ಸಂವಿಧಾನವು ರಾಷ್ಟ್ರದ ಏಕತೆ, ದುರ್ಬಲ ವರ್ಗಗಳ ಏಳಿಗೆ, ಶೋಷಣೆ ವಿರುದ್ಧ ರಕ್ಷಣೆ, ಬಲಿಷ್ಠ ಒಕ್ಕೂಟ ಮಾದರಿ ಸರ್ಕಾರವನ್ನು ರೂಪಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ನಗರದ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿಜಿಲ್ಲಾಡಳಿತದಿಂದ ಮಂಗಳವಾರ ಆಯೋಜಿಸಿದ್ದ 72ನೇ ಗಣರಾಜ್ಯೋತ್ಸವದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಭಾರತೀಯರ ಮುಂದಿದ್ದ ಪ್ರಥಮ ಸವಾಲೆಂದರೆ ನಮ್ಮದೇ ಆದ ಸಂವಿಧಾನರಚಿಸುವುದಾಗಿತ್ತು. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಕೊಡುಗೆ ಅನನ್ಯ. ಸಂವಿಧಾನವನ್ನು 1950ರ ಜ.26 ರಂದು ಜಾರಿಗೆ ತರಲಾಯಿತು. ಗಣ ರಾಜ್ಯವೆಂದರೆ ಜನರ ರಾಜ್ಯವೆಂದು ಅರ್ಥ. ಜನರು ಜನರಿಗಾಗಿ ಜನರ ಪ್ರತಿನಿಧಿಯ ಮೂಲಕ ರಾಜ್ಯನಡೆಸುವ ವಿಧಾನವೇ ಗಣರಾಜ್ಯವಾಗಿದೆ ಎಂದರು. ದೇಶವು ಸ್ವಾತಂತ್ರ್ಯ ಗಳಿಸಿ 74 ವರ್ಷಗಳಲ್ಲಿ ಹಾಗೂ ಗಣರಾಜ್ಯವಾದ 71 ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ
ಮಾಡಿರುವ ಸಾಧನೆ ಗಣನೀಯವಾಗಿದೆ. ಎಲ್ಲ ಸಾಧನೆಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಕಾರಣ ಕರ್ತರಾಗಿದ್ದಾರೆ. ಪಾಶ್ಚಿಮಾತ್ಯರ ದಾಸ್ಯಕ್ಕೆ ಸಿಲುಕಿದ ನಾವು ಸ್ವಾತಂತ್ರ್ಯ ಗಳಿಸಲು ನಡೆಸಿದ ಹೋರಾಟ ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧೀಜಿ, ಬಾಲಗಂಗಾಧರ ತಿಲಕ್, ಲಾಲಾ ಲಜಪತರಾಯ್, ಬಿಪಿನ್ ಚಂದ್ರಪಾಲ್, ಸುಭಾಷ್ ಚಂದ್ರಬೋಸ್, ಜವಾಹರಲಾಲ್ ನೆಹರು ನಾಯಕತ್ವದಲ್ಲಿ ನಡೆದ ಹೋರಾಟ ಮತ್ತು ಲಕ್ಷಾಂತರ ಜನರ ತ್ಯಾಗ, ಬಲಿದಾನದಿಂದ ದೇಶ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಭಾರತದ ಸ್ವಾತಂತ್ರ್ಯ ಚಳವಳಿಯು ವಿಶ್ವಕ್ಕೆ ಹೊಸ ಸಂದೇಶಗಳನ್ನು ನೀಡಿತು. ಮಹಾತ್ಮ ಗಾಂಧೀಜಿಯವರು ನೀಡಿದ ಸತ್ಯ, ಶಾಂತಿ, ತ್ಯಾಗ, ಅಹಿಂಸಾ ತತ್ವಗಳನ್ನು ಇಂದು ಇಡೀ ಜಗತ್ತು ಸ್ಮರಿಸುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ:ಏರ್‌ಪೋರ್ಟ್‌ನಲ್ಲಿ ಅದ್ದೂರಿ ಗಣರಾಜ್ಯೋತ್ಸವ
ಇದೇ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಕೊರೊನಾ ಯೋಧರಿಗೆ, ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಇನ್ಸ್‌ಪೆಕ್ಟರ್ ಬಿ. ಪುಟ್ಟಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮ ದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಪಂ ಅಧ್ಯಕ್ಷೆ ಅಶ್ವಿನಿ, ತಾಪಂ ಅಧ್ಯಕ್ಷೆ ಶೋಭಾ, ನಗರಸಭಾ ಅಧ್ಯಕ್ಷೆ ಆಶಾ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣರಾವ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.