“ಬಾಲಕಿ ಅತ್ಯಾಚಾರ: ಜಯ ಕರ್ನಾಟಕ ಹೋರಾಡಲಿ’
Team Udayavani, Dec 24, 2017, 2:27 PM IST
ಕೊಳ್ಳೇಗಾಲ: ವಿಜಯಪುರ ದಲಿತ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿರುದ್ಧ ನಡೆಸುತ್ತಿರುವ ಹೋರಾಟಕ್ಕೆ ಜಯ ಕರ್ನಾಟಕ ಬೆಂಬಲ ಸೂಚಿಸದಿರುವುದು ಹಲವು ಅನುಮಾನಗಳಿಗೆ ಅಸ್ಪದ ನೀಡಿದೆ. ಕೂಡಲೇ ಸಂಘಟನೆ ಮುಖಂಡರು ರಾಜ್ಯವ್ಯಾಪ್ತಿ ವಿದ್ಯಾರ್ಥಿನಿಯ ಪರ ಹೋರಾಟ ಮಾಡಬೇಕು ಎಂದು ರಾಜ್ಯ ಬಿಎಸ್ಪಿ ಅಧ್ಯಕ್ಷ ಎನ್.ಮಹೇಶ್ ಸಲಹೆ ನೀಡಿದರು. ನಗರದ ವೆಂಕಟೇಶ್ವರ ಮಹಲ್‌ನಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಅಧ್ಯಕ್ಷ ಪ್ರಭುಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಘದ 4ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಎಸ್. ನಾರಾಯಣ್, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅದನ್ನು ತಡೆಗಟ್ಟಲು ಘಟನೆ ಸದಸ್ಯರು ಒಗ್ಗಟ್ಟಿನ ಪ್ರದರ್ಶನ ಮಾಡಬೇಕು. ರಾಜ್ಯದಲ್ಲಿ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ನೇತೃತ್ವದಲ್ಲಿ ರಾಜ್ಯವ್ಯಾಪಿ ಏಕಮುಖ ಶಿಕ್ಷಣಕ್ಕೆ ನಿರಂತರ ಹೋರಾಟ ನಡೆಯುತ್ತಿದೆ. ಸರ್ಕಾರ ಏಕರೂಪ ಶಿಕ್ಷಣ ಜಾರಿಗೆ ತರುವವರೆಗೂ ನಿರಂತರ ಹೋರಾಟ ಮಾಡುತ್ತದೆ ಎಂದು ಹೇಳಿದರು.
ಸನ್ಮಾನ: ಪತ್ರಕರ್ತ ಎ.ಎಚ್.ಗೋವಿಂದ, ಕೆ.ಆರ್.ಓಂ ಸಂಸ್ಥೆಯ ಪುಟ್ಟಬುದ್ಧಿ, ಬುದ್ಧಿಮಾಂದ್ಯ ಸಂಸ್ಥೆಯ ಉದಯಕುಮಾರ್, ಆದಿಕ್ ಪಾಷ, ಈಜುಪಟು ರಾಜು, ಪೌರ ಕಾರ್ಮಿಕರಾದ ರಾಜು, ಪಳನಿಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಆರ್ .ಪಿ.ನಂಜುಂಡಸ್ವಾಮಿ, ಜಿಪಂ ಸದಸ್ಯ ನಾಗರಾಜು, ನಗರಸಭೆ ಮಾಜಿ ಸದಸ್ಯ ಕೆ.ಕೆ. ಮೂರ್ತಿ, ಚಂದ್ರಶೇಖರ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಡಿ.ನಟರಾಜು, ಕಾಂಗ್ರೆಸ್ ಮುಖಂಡ ಡಿ.ಎನ್.ನಟರಾಜು, ಜಯ ಕರ್ನಾಟಕ ಕಾರ್ಯದರ್ಶಿ ಬಸವರಾಜು, ಮಹಿಳಾಧ್ಯಕ್ಷೆ ದೇವಿಕಾ, ನೀಲಮ್ಮ, ವಿಶ್ವನಾಥ್, ಪ್ರಕಾಶ್, ಸುರೇಶ್, ಪುಟ್ಟಬುದ್ಧಿ, ಆದಿಕ್ ಪಾಷ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ
Road Mishap: ಶಾಲಾ ವಾಹನ ಹರಿದು 4 ವರ್ಷದ ಬಾಲಕಿ ಸಾ*ವು
Minister K.J. George: ಒಂದೇ ದಿನದಲ್ಲಿ 2500 ಲೈನ್‌ಮ್ಯಾನ್ ನೇಮಕ ಸಂದರ್ಶನ
MUST WATCH
ಹೊಸ ಸೇರ್ಪಡೆ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Snake; ಕಾಳಿಂಗದ ವೈಜ್ಞಾನಿಕ ಹೆಸರು ‘ಓಫಿಯೋಫೆಗಸ್ ಕಾಳಿಂಗ’:ಅಧಿಕೃತವಾಗಿ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.