![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 3, 2019, 3:00 AM IST
ಕೊಳ್ಳೇಗಾಲ: ಸರ್ಕಾರಿ ನೌಕರರು ಹೆಚ್ಚು ಸಂಘಟಿತರಾಗಿ ಗ್ರಾಮದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹೆಚ್ಚು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ ಹೇಳಿದರು. ತಾಲೂಕಿನ ಪಾಳ್ಯ ಗ್ರಾಮದ ನಾಯಕ ಸರ್ಕಾರಿ ನೌಕರರ ಸೇವಾ ಸಂಘ ಉದ್ಘಾಟಿಸಿದ ಬಳಿಕ ಮಾತನಾಡಿದರು.
ನಾಯಕ ಸಮುದಾಯ ಹಿಂದುಳಿದ ಸಮುದಾಯವಾಗಿದ್ದು, ಸಮುದಾಯವನ್ನು ಮುಂದೆ ತರುವ ಸಲುವಾಗಿ ಯುವಕ ಯುವತಿಯರಿಗೆ ಶಿಕ್ಷಣ ಕೊಡಿಸಿಕೊಡಲು ಸಹಕಾರಿಯಾಗಬೇಕು ಎಂದರು.
ಶಿಕ್ಷಣವೇ ಮಕ್ಕಳಿಗೆ ಆಸ್ತಿ: ಶಿಕ್ಷಣವೇ ಆಸ್ತಿಯಾಗಿದ್ದು, ಶಿಕ್ಷಣದ ಮೂಲಕ ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಹೆಚ್ಚು ಅನುಕೂಲ ಮಾಡಬೇಕು. ಅಲ್ಲದೇ, ನೌಕರರು ಹೆಚ್ಚು ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ಸಂಘದಿಂದ ಸೌಲಭ್ಯ ದೊರಕಿಸಿ: ಜಿಲ್ಲಾ ಪಂಚಾಯ್ತಿ ಸ್ವಗ್ರಾಮದಲ್ಲಿ ಈ ರೀತಿಯ ಸರ್ಕಾರಿ ನೌಕರರ ಸಂಘವನ್ನು ಆರಂಭಿಸಿರುವುದು ಸ್ವಾಗತ. ಸಂಘವನ್ನು ಇಷ್ಟಕ್ಕೆ ಸ್ಥಗಿತಗೊಳಿಸದೆ ಉನ್ನತ ಮಟ್ಟದಲ್ಲಿ ಬೆಳೆಯುವಂತೆ ಮಾಡಬೇಕು. ಆಗ ಮಾತ್ರ ಸಂಘದಿಂದ ಅನೇಕ ಸೌಲಭ್ಯ ದೊರಕಿಸಿಕೊಡಲು ಸಾಧ್ಯವಾಗುತ್ತದೆಂದು ಹೇಳಿದರು.
ಅಭಿವೃದ್ಧಿ ಕಡೆ ಗಮನಹರಿಸಿ: ಗ್ರಾಮೀಣ ಅಭಿವೃದ್ಧಿಗೆ ಬೇಕಾದ ಅನುದಾನವನ್ನು ಜಿಪಂ ವತಿಯಿಂದ ಕೊಡಿಸಿಕೊಡುವ ಭರವಸೆ ನೀಡಿದ ಅವರು ಸಮಾಜದ ಜನರು ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕೆಂದು ಹೇಳಿದರು.
ಮೊಟ್ಟ ಮೊದಲ ಬಾರಿಗೆ ಸರ್ಕಾರಿ ನೌಕರರ ನಾಯಕ ಸಮಾಜದ ಸಂಘದ ಅಸ್ತಿತ್ವಕ್ಕೆ ಬಂದಿದ್ದು, ಮತ್ತಷ್ಟು ನೌಕರರನ್ನು ಗುರುತಿಸಿ ಸಂಘಕ್ಕೆ ತರುವ ಪ್ರಯತ್ನ ಮಾಡಬೇಕೆಂದು ಸಂಘದ ಪದಾಧಿಕಾರಿಗಳಿಗೆ ಸೂಚಿಸಿದರು.
ಮನವಿ ಪತ್ರ: ಕಾಂಗ್ರೆಸ್ ಜಿಲ್ಲಾ ಘಟಕದ ಪರಿಶಿಷ್ಟ ಪಂಗಡ ಅಧ್ಯಕ್ಷ ಕೃಷ್ಣ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ನಾಯಕ ಸಮಾಜಕ್ಕೆ ಮೀಸಲಾತಿ ನೀಡುವಲ್ಲಿ ವಿಫಲರಾಗಿದ್ದು, ಜೂನ್ 6ರಂದು ನಾಯಕ ಸಮಾಜಕ್ಕೆ ಶೇ.7.5 ಮೀಸಲಾತಿಗೆ ಒತ್ತಾಯಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ಪಾದಯಾತ್ರೆ: ಮೀಸಲಾತಿಗಾಗಿ ಜೂ.9ರಂದು ದಾವಣಗೆರೆ ವಾಲ್ಮೀಕಿ ಸಮಾಜದ ಪುಣ್ಯನಂದ ಮಹಾಸ್ವಾಮೀಜಿ, ಜೂ.9ರಂದು ದಾವಣಗೆರೆಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ರಾಜ್ಯದ ಎಲ್ಲಾ ತಾಲೂಕಿನಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಭಾಸ್ಕರ, ಅಧ್ಯಕ್ಷ ಶ್ರೀಧರನಾಯಕ, ಕಾರ್ಯದರ್ಶಿ ಗೋವಿಂದನಾಯಕ, ಖಜಾಂಚಿ ಪ್ರಜ್ವಲ್ ನಾಯಕ, ನಿರ್ದೇಶಕರಾದ ಬಸವರಾಜು, ಮಹದೇವಸ್ವಾಮಿ, ಪ್ರದೀಪ್‌ಕುಮಾರ, ಸಿದ್ದಪ್ಪಾಜಿ, ಎಂ.ಕುಮಾರ್, ಗ್ರಾಮದ ಮುಖಂಡರಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.