ನೀರಿನ ಸಮಸ್ಯೆಗೆ ಅಂತರ್ಜಲ ಮರುಪೂರಣ ಪರಿಹಾರ
Team Udayavani, Feb 4, 2020, 3:00 AM IST
ಚಾಮರಾಜನಗರ: ಮುಂಬರುವ ದಿನಗಳಲ್ಲಿ ಎದುರಾಗಬಹುದಾದ ನಿರೀನ ಸಮಸ್ಯೆ ತಪ್ಪಿಸಲು ಅಂತರ್ಜಲ ಮರುಪೂರಣ ಕಾರ್ಯ ಅತ್ಯವಶ್ಯಕ ಎಂದು ಜಿಯೊ ರೈನ್ ವಾಟರ್ ಬೋರ್ಡ್‌ನ ಭೂವಿಜ್ಞಾನಿ ಎನ್.ಜೆ.ದೇವರಾಜ್ ರೆಡ್ಡಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸಹಯೋಗದಲ್ಲಿ ನಡೆದ ಜಲಮೂಲಗಳ ಪುನಶ್ಚೇತನ ಹಾಗೂ ವೈಜ್ಞಾನಿಕ ನಿರ್ಮಾಣ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೆಚ್ಚುತ್ತಿರುವ ನೀರಿನ ಅಭಾವ: ಭಾರತ ದೇಶ ಪ್ರಪಂಚದಲ್ಲೇ ಎರಡನೇ ಅತೀ ದೊಡ್ಡ ಜಲ ಸಂಪತ್ತನ್ನು ಹೊಂದಿದೆ. ಹೀಗಿದ್ದೂ ಸಹ ದಿನ ಕಳೆದಂತೆ ನೀರಿನ ಅಭಾವ ಹೆಚ್ಚುತ್ತಲಿದೆ. ಸಾವಿರಾರು ಕೆರೆಗಳಿದ್ದರೂ, ವರ್ಷ ಪೂರ್ತಿ ನೀರು ಹೊಂದಿರದ ಕಾರಣ ಹಾಗೂ ಮಾಲಿನ್ಯದಿಂದಾಗಿ ಬಳಕೆಗೆ ಅಲಭ್ಯವಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಲು ವೈಜ್ಞಾನಿಕ ರೀತಿಯಲ್ಲಿ ಅಂತರ್ಜಲ ಮರುಪೂರಣ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದರು.
ಮಳೆ ಕೊರತೆಯಿಂದ ಅಂತರ್ಜಲ ಕಡಿಮೆ: ಮಳೆ ಕೊರತೆಯಿಂದಾಗಿ ಅಂತರ್ಜಲ ಪ್ರಮಾಣ ಕಡಿಮೆಯಾಗಿದೆ. ಸಮುದ್ರ ತೀರ ಅಥವಾ ನೀರು ಹರಿವಿನ ಹತ್ತಿರ ಕೊಳವೆ ಬಾವಿ ಕೊರೆದರೆ ನೀರು ಬರುತ್ತದೆ ಎಂಬ ಮನಸ್ಥಿತಿ ಇದೆ. ಆದರೆ ಅಂತರ್ಜಲದ ಬಗೆಗೆ ಇದ್ಯಾವುದು ಪೂರ್ಣ ಸತ್ಯವಲ್ಲ. ಮಳೆ ಪ್ರಮಾಣ ಹೆಚ್ಚಿರುವ ಜಾಗದಲ್ಲೂ ಅಂತರ್ಜಲ ಮಟ್ಟ ಕಡಿಮೆ ಇರುವ ಎಷ್ಟೋ ಉದಾಹರಣೆಗಳಿವೆ. ನೀರು ಹತ್ತಿರವಿರುವೆಡೆ ತೆರೆದ ಕೊಳವೆ ಬಾವಿಗಳು ವಿಫಲವಾದ ನಿದರ್ಶನಗಳಿವೆ. ನೈಜವಾಗಿ ಮಾನವ ಅನುಸರಿಸುವ ಅವೈಜ್ಞಾನಿಕ ಪದ್ಧತಿಗಳು ಅಂತರ್ಜಲ ಕುಸಿತಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಅಂತರ್ಜಲ ಮರುಪೂರಣದಿಂದ ಜಲ ಪ್ರಮಾಣ ಹೆಚ್ಚಳ: ನೀರಿನ ಸಮಸ್ಯೆಗಳನ್ನು ದೀರ್ಘಕಾಲಿಕವಾಗಿ ನಿವಾರಿಸುವ ನಿಟ್ಟಿನಲ್ಲಿ ಅಂತರ್ಜಲ ಮರುಪೂರಣ ಕಾರ್ಯವನ್ನು ಮಾಡಲಾಗುತ್ತದೆ. ನೀರು ಬತ್ತಿ ಹೋದ ಅಥವಾ ಬಾರದೇ ಇರುವ ಕೊಳವೆ ಬಾವಿಗಳನ್ನು ಪರೀಕ್ಷಿಸಿ, ಅಲ್ಲಿ ನೀರಿನ ಪೊರೆಗಳ ಇರುವಿಕೆ ಕಂಡುಬಂದಲ್ಲಿ ಮರುಪೂರಣ ಪದ್ಧತಿಯನ್ನು ಅನುಷ್ಠಾಗೊಳಿಸಲಾಗುತ್ತದೆ. ಇದರಿಂದ ಜಲ ಪ್ರಮಾಣ ಹೆಚ್ಚುವು ದಲ್ಲದೇ ನೀರು ಸದಾ ಕಾಲ ಇರುವಂತೆ ಮಾಡುತ್ತದೆ ಎಂದು ಮಾಹಿತಿ ನೀಡಿದರು.
ನೀರನ್ನು ಪೋಲು ಮಾಡದಿರಿ: ನೀರಿನ ಸಮಸ್ಯೆಯನ್ನು ಮೂಲದಿಂದ ಸರಿಪಡಿಸಿಕೊಳ್ಳಲು ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯ. ನೀರನ್ನು ಅನವಶ್ಯಕವಾಗಿ ಪೋಲು ಮಾಡದಂತೆ ಎಚ್ಚರ ವಹಿಸುವುದು, ಮಳೆ ನೀರು ಕೋಯ್ಲು ಮೂಲಕ ಮಳೆ ನೀರಿನ ಶೇಖರಣೆ ಮತ್ತು ಬಳಕೆಯಂಥಹ ಕೆಲವು ಉಪಕ್ರಮಗಳು ಎಲ್ಲರಿಂದ ಆಗಬೇಕು. ಕೊಳವೆ ಬಾವಿಗಳ ಬದಲಾಗಿ ತೆರೆದ ಬಾವಿಗಳಿಗೆ ಆದ್ಯತೆ ನೀಡಬೇಕು. ಇದು ಅಂತರ್ಜಲ ಮಟ್ಟವನ್ನು ಕಾಪಾಡಲು ಸಹಾಯಕಯವಾಗಲಿದೆ ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಉಪ ಕಾರ್ಯದರ್ಶಿ ಧರಣೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Election: ರಾಜ್ ಠಾಕ್ರೆ ಎಂಎನ್‌ಎಸ್ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!
Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್
Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ
Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.