ಎಲ್ಲ ವಸ್ತುಗಳಿಗೂ ಜಿಎಸ್‌ಟಿ: ಕೇಂದ್ರದ ವಿರುದ್ಧ ಆಕ್ರೋಶ

Team Udayavani, Jul 25, 2022, 3:39 PM IST

ಎಲ್ಲ ವಸ್ತುಗಳಿಗೂ ಜಿಎಸ್‌ಟಿ: ಕೇಂದ್ರದ ವಿರುದ್ಧ ಆಕ್ರೋಶ

ಚಾಮರಾಜನಗರ: ಕೇಂದ್ರದ ಬಿಜೆಪಿ ಸರ್ಕಾರ ಎಲ್ಲ ವಸ್ತುಗಳಿಗೂ ಜಿಎಸ್‌ಟಿ ವಿಧಿಸುವ ಮೂಲಕಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಇದುರೈತರು ಮತ್ತು ಬಡವರ ರಕ್ತ ಹೀರುವ ಕೆಟ್ಟ ಸರ್ಕಾರ ಎಂದು ಜಿಲ್ಲಾ ಕಾಂಗ್ರೆಸ್‌ ವಕ್ತಾರ ಕೆರೆಹಳ್ಳಿ ನವೀನ್‌ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಶವಕ್ಕೆ ಇನ್ನೂ ಜಿಎಸ್‌ಟಿ ಹಾಕಿಲ್ಲ. ಅದನ್ನು ಹೊರತುಪಡಿಸಿದರೆ ಇನ್ನು ಎಲ್ಲದಕ್ಕೂ ಜಿಎಸ್‌ಟಿ ವಿಧಿಸಿದೆ. ಅವಶ್ಯಕ ಸೇವೆಗಳು, ಬಡವರು ಬಳಸುವ ವಸ್ತುಗಳು ಎಂದು ಜಿಎಸ್‌ಟಿ ವಿಧಿಸದೇಬಿಡಲಾಗಿದ್ದಕ್ಕೆಲ್ಲ ಈ ಸರ್ಕಾರ ಜಿಎಸ್‌ಟಿ ವಿಧಿಸುತ್ತದೆ.ಈ ಮೂಲಕ ದುರಾಡಳಿತ ನಡೆಸುತ್ತಿದ್ದು, ತುಘಲಕ್‌ ದರ್ಬಾರ್‌ ನಡೆಸುತ್ತಿದೆ ಎಂದು ಟೀಕಿಸಿದರು.

ಕಳೆದ ಎಂಟು ವರ್ಷಗಳ ಬಿಜೆಪಿ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರು ಆಚ್ಚೆ ದಿನ್‌ ಬರುತ್ತದೆ ಎಂದು ಜನರು ವಂಚಿಸುತ್ತಾ. ಕೆಲವೇ ಕೆಲವು ಮಂದಿ ಬಂಡವಾಳ ಶಾಹಿಗಳಿಗೆ ಅಚ್ಛೇ ದಿನ್‌ ನೀಡಿದ್ದಾರೆ. ದೇಶ ಜನರು ಜಿಎಸ್‌ಟಿ ತೆರಿಗೆ ಭಾರವನ್ನು ಹೊರಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಜಿಎಸ್‌ಟಿ ಜಾರಿ ಮಾಡಿ, ಸರ್ಕಾರ ಬೊಕ್ಕಸಕ್ಕೆಸೋರಿಕೆಯಾಗುವ ಹಣವನ್ನು ತಡೆದು, ಜನರು ನೀಡುವ ತೆರಿಗೆಯಿಂದ ದೇಶದ ಅಭಿವೃದ್ದಿಪಡಿಸುತ್ತೇವೆ ಎಂದು ಸುಳ್ಳು ಹೇಳುತ್ತಿರುವ ಮೋದಿ ಹಾಗು ಸಹೋದ್ಯೋಗಿಗಳು ಜಿಎಸ್‌ಟಿಮೂಲಕ ಜನರು ಪಾವತಿಸುತ್ತಿರುವ ತೆರಿಗೆಹಣವನ್ನು ವಿವಿಧ ರಾಜ್ಯಗಳಲ್ಲಿ ಆಪರೇಷನ್‌ ಕಮಲ ಮಾಡಲು ಬಳಕೆ ಮಾಡುತ್ತಿದೆ. ಜನರು ತೆರಿಗೆ ಕಟ್ಟಿ ಮತ್ತಷ್ಟು ಬಡವರಾಗುತ್ತಿದೆ. ಜಿಎಸ್‌ಟಿಜಾರಿ ಪರಿಣಾಮ ಲಕ್ಷಾಂತರ ಸಣ್ಣ ಸಣ್ಣ ಕಂಪನಿಗಳು ಮುಚ್ಚಿವೆ. ಕೋಟ್ಯಂತರ ಮಂದಿ ನಿರುದ್ಯೋಗಿ ಗಳಾಗಿದ್ದಾರೆ ಎಂದು ಆರೋಪಿಸಿದರು.

ಮೊಸರು, ಪನೀರ್‌, ಲಸ್ಸಿ ಸೇರಿದಂತೆ ವಿವಿಧ ರೈತರ ಉತ್ಪನ್ನಗಳಿಗೆ ಶೇ. 5 ರಷ್ಟು ಜಿಎಸ್‌ಟಿಹಾಕಿರುವುದು ಬಿಜೆಪಿ ಸರ್ಕಾರದ ಅವೈಜ್ಞಾನಿಕತೆರಿಗೆ ನೀತಿಯಾಗಿದೆ. ಅಲ್ಲದೇ ಜನರನ್ನು ಜಿಎಸ್‌ಟಿತೆರಿಗೆಯ ಮೂಲಕ ಶೋಷಣೆ ಮಾಡಲಾಗುತ್ತಿದೆ.ಪ್ರತಿ ಹಂತದಲ್ಲಿಯೂ ಸಹ ತೆರಿಗೆಯನ್ನು ಕಟ್ಟುವಜನಸಾಮಾನ್ಯರು ಜೀವನ ನಡೆಸುವುದುಕಷ್ಟಸಾಧ್ಯವಾಗಿದೆ. ಇದು ಪ್ರಧಾನಿ ಮೋದಿಗೆಅರ್ಥವಾಗುತ್ತಿಲ್ಲ. ಕೇವಲ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ದೇಶದ ಭದ್ರತೆ ಬಿಜೆಪಿಯಿಂದ ಮಾತ್ರಎಂಬ ಸುಳ್ಳು ಆಶ್ವಾಸನೆಯನ್ನು ನೀಡುತ್ತಾ ಜನರನ್ನುಮರಳುಮಾಡುತ್ತಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಸಮಿತಿ ರಾಜ್ಯ ಎಸ್‌ಟಿ ಘಟಕದ ಪ್ರಧಾನ ಕಾರ್ಯದರ್ಶಿ ಪು. ಶ್ರೀನಿವಾಸನಾಯಕ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಬಳಿಕ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ತೆರಿಗೆಗಳು ಹೆಚ್ಚಾಗಿ ಜನರ ಜೀವನ ದುಸ್ತರವಾಗಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಯಾವುದಾದರೂ ಯುದ್ಧವನ್ನು ಸೃಷ್ಟಿ ಮಾಡಿ, ಜನರನ್ನುಭಾವನಾತ್ಮಕವಾಗಿ ಕೆರಳಿಸಿ ಮತ ಪಡೆಯಲಾಗುತ್ತಿದೆಎಂದು ಆರೋಪಿಸಿದರು.

ಜಿಪಂ ಮಾಜಿ ಸದಸ್ಯಶಿವಕುಮಾರ್‌, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ ಅಜೀಜ್‌ ಇತರರು ಇದ್ದರು.

ಟಾಪ್ ನ್ಯೂಸ್

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Champions Trophy: New Zealand squad announced; Three mark key players return to the team

Champions Trophy: ನ್ಯೂಜಿಲ್ಯಾಂಡ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು

4-bng

Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್

Snaehamayi-krishna-GTD

MUDA: ಮಗಳ-ಅಳಿಯಗೆ ಮುಡಾ ಸೈಟ್‌: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು

Congress-Symbol

CLP Meeting: ನಾಳೆ ಶಾಸಕಾಂಗ ಪಕ್ಷದ ಸಭೆ: ಗರಿಗೆದರಿದ ಕುತೂಹಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

CHN-Social

Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು

9-chamarajanagara

Chamarajanagar: ದಲಿತರಿಗೆ ಬಾಡಿಗೆ ಮನೆ ನೀಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Chikkamagaluru: ಮಲಗಿದ್ದವನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಕಾಡಾನೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Los Angeles: ಹತೋಟಿಗೆ ಬಾರದ ಕಾಡ್ಗಿಚ್ಚು, ಸಾವಿರಾರು ಮನೆಗಳು ಆಹುತಿ, ಮೃತರ ಸಂಖ್ಯೆ 16ಕ್ಕೆ

Champions Trophy: New Zealand squad announced; Three mark key players return to the team

Champions Trophy: ನ್ಯೂಜಿಲ್ಯಾಂಡ್‌ ತಂಡ ಪ್ರಕಟ; ತಂಡಕ್ಕೆ ಮರಳಿದ ಮೂವರು ಘಟಾನುಘಟಿಗಳು

4-bng

Bengaluru Crime: ಪ್ರಿಯಕರ ಆತ್ಮಹತ್ಯೆ: ಪ್ರೇಯಸಿಯೂ ನೇಣಿಗೆ ಶರಣು

3-shimogga

Shivamogga: ಖ್ಯಾತ ಫೋಟೋ ಜರ್ನಲಿಸ್ಟ್ ಗೆ ಹೃದಯಾಘಾತ, ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.