ಗುಂಡ್ಲುಪೇಟೆ- ಚಾಮರಾಜನಗರದ ರಸ್ತೆ ಗುಂಡಿ: ಸವಾರರಿಗೆ ತೊಂದರೆ
Team Udayavani, Feb 12, 2023, 11:13 AM IST
![tdy-9](https://www.udayavani.com/wp-content/uploads/2023/02/tdy-9-11-620x372.jpg)
![tdy-9](https://www.udayavani.com/wp-content/uploads/2023/02/tdy-9-11-620x372.jpg)
ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ಜಿಲ್ಲಾ ಕೇಂದ್ರ ಚಾಮರಾಜನಗರದ ರಸ್ತೆ ತೀರ ಹದಗೆಟ್ಟಿದ್ದು, ನೂರಕ್ಕೂ ಅಧಿಕ ಕಡೆ ಬೃಹತ್ ಗಾತ್ರದ ಗುಂಡಿಗಳು ಬಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗಿದೆ. ಗುಂಡ್ಲುಪೇಟೆ-ಚಾಮರಾಜನಗರದ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನ ಸಂಚಾರ ಮಾಡುತ್ತಿವೆ.
ಹೀಗಿದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ಪತ್ರಿಕೆ ಗಳಲ್ಲಿ ವರದಿ ಬಂದಾಗ ಮಾತ್ರ ಕೇವಲ ತೇಪೆ ಹಾಕುವ ಕೆಲಸ ಮಾಡುತ್ತಿ ದ್ದಾರೆಯೇ ವಿನಃ ಡಾಂಬರು ಮಾಡಲು ಮುಂದಾಗುತ್ತಿಲ್ಲ. ಈ ಕಾರಣದಿಂದ ತೇಪ ಹಾಕಿದ ಸ್ಥಳದಲ್ಲಿ ವಾರ ಕಳೆಯು ವುದರೊಳಗೆ ಮತ್ತೆ ಗುಂಡಿ ಬೀಳುತ್ತಿವೆ.
ದ್ವಿಚಕ್ರ ವಾಹನ ಸವಾರರಂತೂ ಜೀವ ಕೈಯಲ್ಲಿ ಹಿಡಿದು ಚಾಲನೆ ಮಾಡಬೇಕಾ ಗಿದ್ದು, ರಸ್ತೆಯ ಹಲವು ತಿರುವುಗಳಲ್ಲಿ ಬೃಹದಾಕಾರದ ಗುಂಡಿ ಬಿದ್ದಿವೆ. ಮಳೆ ಬಂದರೆ ಗುಂಡಿಯಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ಅಡಚಣೆ ಉಂಟಾ ಗುತ್ತಿದೆ. ಇನ್ನೂ ಬಿಸಿಲಿನ ವೇಳೆಯಲ್ಲಿ ಸಂಚಾರ ಮಾಡಿದರೆ ದೂಳು ಮೈ ಮೇಲೆ ತುಂಬುತ್ತಿದೆ. ಆದ್ದರಿಂದ ಸಂಬಂಧಪಟ್ಟ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ರಸ್ತೆಗೆ ಡಾಂಬರೀ ಕರಣಗೊಳಿಸಬೇಕೆಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಪ್ರಧಾನ ಕಾರ್ಯದರ್ಶಿ ಶಿವಪುರ ಮಂಜಪ್ಪ ಒತ್ತಾಯಿಸಿದ್ದಾರೆ.